ನಟ ರಣವೀರ್​ ಸಿಂಗ್​ 
ಬಾಲಿವುಡ್

ಸ್ಮಾರ್ಟ್ ಆಗಿದ್ದೀಯಾ.. ಸಹಕರಿಸು ಅಂದಿದ್ದ: ಕಾಸ್ಟಿಂಗ್ ಕೌಂಚ್ ಅನುಭವದ ಬಗ್ಗೆ ನಟ ರಣವೀರ್​ ಸಿಂಗ್ ಸ್ಫೋಟಕ ಹೇಳಿಕೆ! Ranveer Singh

ಪ್ರಮುಖ ಮುಖ್ಯಾಂಶಗಳು

  • ಕಾಸ್ಟಿಂಗ್ ಕೌಂಚ್ ಬಗ್ಗೆ ಮೌನ ಮುರಿದ ಬಾಲಿವುಡ್​ ನಟ
  • ನೀನು ಸುಂದರವಾಗಿದ್ದಿಯಾ ಸ್ವಲ್ಪ ಸಹಕರಿಸು ಎಂದಿದ್ದ: ರಣವೀರ್​
  • ಸಿನಿಮಾರಂಗದಲ್ಲಿ ಅನುಭವಿಸಿದ ಕಹಿ ಘಟನೆ ಬಗ್ಗೆ ಮಾತನಾಡಿದ ಧುರಂಧರ್​ ನಟ
ಮುಂಬೈ: ಕಾಸ್ಟಿಂಗ್​ ಕೌಂಚ್​ ಇದು ಕೇವಲ ಬಾಲಿವುಡ್​ಗೆ ಮಾತ್ರವಲ್ಲ ಇಡೀ ವಿಶ್ವದ ಸಿನಿಮಾರಂಕ್ಕೆ ಅಂಟಿರುವ ಕಾಯಿಲೆ ಎಂದರೆ ತಪ್ಪಾಗದು. ಇತ್ತೀಚೆಗೆ ಈ ವಿಷಯದ ಕುರಿತಂತೆ ಧುರಂಧರ್​ 2 ನಟ ರಣವೀರ್​ ಸಿಂಗ್ (Ranveer Singh)​ ತಾವು ಚಿತ್ರರಂಗದಲ್ಲಿ ಅನುಭವಿಸಿದ ಕಹಿ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.

ನಾನು ಒಮ್ಮೆ ಮುಟ್ಟುತ್ತೇನೆ!

ಕಾಸ್ಟಿಂಗ್​ ಕೌಂಚ್​ ಬಗ್ಗೆ ಮಾತನಾಡುತ್ತಾ ರಣವೀರ್​ ನಾನು ಸಿನಿಮಾರಂಗಕ್ಕೆ ಹೊಸದಾಗಿ ಪಾದಾರ್ಪಣೆ ಮಾಡಿದಾಗ ನನಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ.
ಆ ಸಂದರ್ಭದಲ್ಲಿ ನಾನು ದಿನನಿತ್ಯ ಒಂದಲ್ಲಾ ಒಂದು ಕಡೆ ಆಡಿಷನ್​ ಕೊಡಲು ಹೋಗುತ್ತಿದೆ. ಆ ವೇಗೆ ಒಬ್ಬ ಕಾಸ್ಟಿಂಗ್​ ಏಜೆಂಟ್​, ನೀನು ನೋಡಲು ಬಹಳ ಸುಂದರವಾಗಿದ್ದಿಯಾ, ಸ್ಮಾರ್ಟ್​ ಇದ್ದಿಯಾ, ಈ ರಂಗದಲ್ಲಿ ಹ್ಯಾಂಡ್​ಸಮ್​ ಇದ್ದವರು ಬಹಳ ಬೇಗ ಹಿಟ್​ ಆಗುತ್ತಾರೆ ಎಂದು ಹೇಳಿದ್ದನಂತೆ.
ಹಾಗೆಯೇ ಅವನು, ನಾನು ನಿನಗೆ ಹೆಚ್ಚಿನ ಸಿನಿಮಾಗಳಲ್ಲಿ ಅವಕಾಶ ದೊರೆಯುವಂತೆ ನೋಡಿಕೊಳ್ಳುತ್ತೇನೆ. ನೀನು ನನ್ನ ಜೊತೆ ಸ್ವಲ್ಪ ಸಹಕರಿಸು ಎಂದು ಹೇಳಿದ್ದ. ನಾನು ನಿನ್ನ ದೇಹವನ್ನು ಒಮ್ಮೆ ನೋಡುತ್ತೇನೆ, ಒಂದೇ ಒಂದು ಬಾರಿ ಮುಟ್ಟುತ್ತೇನೆಂದು ಅವನು ಹೇಳಿದ್ದ, ನಾನದಕ್ಕೆ ಒಪ್ಪದಿದ್ದಾಗ ಅವನು ನನ್ನ ಮೇಲೆ ಬೇಸರಗೊಂಡಿದ್ದ ಎಂದು ರಣವೀರ್​ ಹೇಳಿದ್ದಾರೆ.
ನಂತರದ ದಿನಗಳಲ್ಲಿ, ಹೊಸದಾಗಿ ಚಿತ್ರರಂಗಕ್ಕೆ ಬರುವ ಹುಡುಗ/ಹುಡುಗಿಯರೊಂದಿಗೆ ಈತ ಇದೇ ರೀತಿಯ ವರ್ತನೆ ತೋರುತ್ತಿದ್ದ ಎಂದು ನನಗೆ ಆಮೇಲೆ ತಿಳಿಯಿತು ಎಂದು ರಣವೀರ್ ತಮ್ಮ ಕಾಸ್ಟಿಂಗ್​ ಕೌಂಚ್​ ಅನುಭವದ ಬಗ್ಗೆ ಹೇಳಿ ಕೊಂಡಿದ್ದಾರೆ.

ಧುರಂಧರ್​ 2 ನಲ್ಲಿ ರಣವೀರ್​

ಸದ್ಯ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿರುವ ಸಿನಿಮಾ ಧುರಂಧರ್​ 2 ನಲ್ಲಿ ರಣವೀರ್​ ಸಿಂಗ್​ ಹಮ್ಜಾ ಅಲಿ ಮಜಾರಿ ಹಾಗು ಜಸ್ಕೀರತ್​ ಸಿಂಗ್​ ರಂಗಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಈ ಸಿನಿಮಾ ಬಿಡುಗಡೆಯಾದ ಒಂದೇ ವಾರದಲ್ಲಿ ಸಾವಿರ ಕೋಟಿ ಕಲೆಕ್ಷನ್​ ಮಾಡಿದ್ದು, ತನ್ನ ನಾಗಾಲೋಟವನ್ನು ಮುಂದುವರೆಸಿದೆ.
ಈ ಸಿನಿಮಾದಲ್ಲಿ ರಣವೀರ್​ ಭಾರತೀಯ ಗೂಢಚರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪಾಕಿಸ್ತಾನದ ಲಿಯಾರಿ ಇಲಾಖೆಯಲ್ಲಿ ಒಳನುಗ್ಗಿ ಹೇಗೆ ಇವನು ಅಲ್ಲಿಯ ಭೂಗತ ಲೋಕವನ್ನು ಆಳುತ್ತಾನೆ ಹಾಗೂ ಶತ್ರು ದೇಶದಲ್ಲಿ ಇದ್ದುಕೊಂಡು ಯಾವ ರೀತಿಯಲ್ಲಿ ಭಾರತದ ಹಿತವನ್ನು ಕಾಯುತ್ತಾನೆ ಎನ್ನುವುದೇ ಈ ಸಿನಿಮಾದ ತಿರುಳಾಗಿದೆ.
ಈ ಸಿನಿಮಾದಲ್ಲಿ ರಣವೀರ್​ ಸಿಂಗ್​ ಜೊತೆಗೆ ಆರ್​. ಮಾಧವನ್​, ಸಂಜಯ್ ದತ್, ಅರ್ಜುನ್​ ರಾಂಪಾಲ್​, ರಾಕೇಶ್​ ಬೇಡಿ, ಸಾರಾ ಅರ್ಜುನ್​ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಉರಿ: ದಿ ಸರ್ಜಿಕಲ್​ ಸ್ಟ್ರೈಕ್​ ಖ್ಯಾತಿಯ ಆದಿತ್ಯ ಧರ್​ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ,(ಏಜನ್ಸೀಸ್​).