ಪತಿಯ ಸಿನಿಮಾದಲ್ಲಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡ ಯಾಮಿ ಗೌತಮ್
- ಆದಿತ್ಯ ಧರ್ ನಿರ್ದೇಶನದ ಸಿನಿಮಾ ಧುರಂಧರ್ 2
- ಪತಿಯ ಸಿನಿಮಾದಲ್ಲಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡ ಯಾಮಿ ಗೌತಮ್
- ಎರಡು ನಿಮಿಷದ ಪಾತ್ರಕ್ಕಾಗಿ 8 ಕೋಟಿ ಪಡೆದಿರುವ ನಟಿ
ಬಾಲಿವುಡ್: ಆದಿತ್ಯ ಧರ್ ನಿರ್ದೇಶನದ ಹಾಗೂ ರಣವೀರ್ ಸಿಂಗ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಧುರಂಧರ್ 2 ಭಾರತೀಯ ಸಿನಿಮಾ ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುವ ಸಿನಿಮಾ ಎಂದರೆ ತಪ್ಪಾಗದು. ಈ ಚಲನಚಿತ್ರವು ಬಿಡುಗಡೆಯಾದ ಕೇವಲ 17 ದಿನಗಳಲ್ಲಿ 1,700 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಇನ್ನೇನು ಕೆಲವೇ ದಿನಗಳಲ್ಲಿ 2,000 ಕೋಟಿ ಕ್ಲಬ್ನ್ನು ಸೇರಲಿದೆ.
ಈ ಸಿನಿಮಾವನ್ನು ನಿಜ ಜೀವನದಲ್ಲಿ ನಡೆದ ಘಟನೆಗಳನ್ನು ಬಹಳ ಸುಂದರವಾಗಿ ಸಿನಿಮಿಕರಣ ಮಾಡಿದ್ದರಿಂದ ಈ ಸಿನಿಮಾ ಒಂದು ರೀತಿಯ ಡಾಕ್ಯುಮೆಂಟರಿ ಎಂಬಂತೆ ಭಾಸವಾಗುತ್ತದೆ. ಇದುವೇ ಈ ಸಿನಿಮಾ ಇಷ್ಟೊಂದು ಯಶಸ್ಸನ್ನು ಕಾಣಲು ಸಧ್ಯವಾಗಿಸಿದ ಫಾರ್ಮುಲಾ ಎನ್ನುವುದು ವಿಶ್ಲೇಷಕರ ಅಭಿಪ್ರಾಯವಾಗಿದೆ.
2 ನಿಮಿಷ ತೆರೆಯ ಮೇಲೆ ಬಂದ ಯಾಮಿ ಗೌತಮ್
ಈ ಸಿನಿಮಾದ ನಿರ್ದೇಶಕರಾದ ಆದಿತ್ಯ ಧರ್ ಅವರ ಪತ್ನಿ ಯಾಮಿ ಗೌತಮ್ (Yami Gautam in Dhurandhar 2) ಸಹ ಈ ಸಿನಿಮಾದಲ್ಲಿ ಸಣ್ಣದೊಂದು ಪಾತ್ರ ಮಾಡಿದ್ದಾರೆ. ಯಾಮಿ ಸಹ ಬಹಳ ವರ್ಷದಿಂದ ಬಾಲಿವುಡ್ನಲ್ಲಿ ನಟಿಸುತ್ತಿದ್ದು, ಇದೇ ಮೊದಲ ಭಾರಿಗೆ ಪತಿಯ ನಿರ್ದೇಶನದ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾದಲ್ಲಿ ಪಾಕಿಸ್ತಾನದಲ್ಲಿರುವ ಭಯೋತ್ಪಾದಕರನ್ನು ಕೊಲ್ಲಲು ಅನಾಮಿಕ (Unknown Man) ಪ್ರಾರಂಭ ಮಾಡಿದಾಗ, ಯಾಮಿ ಗೌತಮ್ ದಾದಿ (Nurse) ವೇಶದಲ್ಲಿ ಬಂದು ರೋಗಿಯಾಗಿ ಮಲಗಿರುವ ಭಯೋತ್ಪಾದಕನೊಬ್ಬನಿಗೆ ಇಂಜೆಕ್ಷನ್ನಲ್ಲಿ ವಿಷವನ್ನು ನೀಡಿ ಯಾಮಿ ಕೊಲ್ಲುವ ದೃಶ್ಯವನ್ನು ಸಿನಿಮಾದಲ್ಲಿ ನೋಡಬಹುದಾಗಿದೆ.
ವರದಿಗಳ ಪ್ರಕಾರ ಕೇವಲ ಎರಡು ನಿಮಿಷಗಳ ಈ ಸೀನ್ಗೆ ಯಾಮಿ ಗೌತಮ್ ಬರೊಬ್ಬರಿ 8 ಕೋಟಿಯನ್ನು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದರ ಕುರಿತು ಯಾಮಿಯಾಗಲೀ, ಅವರ ಪತಿ ಆದಿತ್ಯ ಧರ್ನಾಗಲಿ ಇಲ್ಲಿವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಯಾರು ಈ ಯಾಮಿ ಮತ್ತು ಆದಿತ್ಯ?
ಯಾಮಿ ಗೌತಮ್ ಬಾಲಿವುಡ್‌ನ ಪ್ರತಿಭಾವಂತ ನಟಿಯರಲ್ಲಿ ಒಬ್ಬರಾಗಿದ್ದು, ಇವರು ಕನ್ನಡದ 'ಉಲ್ಲಾಸ ಉತ್ಸಾಹ' ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಆರಂಭಿಸಿದರು. ನಂತರ ವಿಕ್ಕಿ ಡೋನರ್, ಬಾಲಾ ಮತ್ತು ಉರಿ: ದ ಸರ್ಜಿಕಲ್ ಸ್ಟ್ರೈಕ್ ನಂತಹ ಹಿಟ್ ಚಿತ್ರಗಳ ಮೂಲಕ ಭಾರತದಾದ್ಯಂತ ಜನಪ್ರಿಯತೆ ಗಳಿಸಿದರು. ಸದ್ಯ ಇವರ ನಟನೆಯ ಹಕ್ ಎಂಬ ಸಿನಿಮಾ ತ್ರಿವಳಿ ತಲಾಕ್ನ ಕರಾಳತೆಯನ್ನು ಬಿಚ್ಚಿಟ್ಟಿದೆ.
ಇನ್ನು ಆದಿತ್ಯ ಧರ್ ಅವರು ಖ್ಯಾತ ಚಲನಚಿತ್ರ ನಿರ್ದೇಶಕ ಮತ್ತು ಲೇಖಕರಾಗಿದ್ದು, 2019ರ ಬ್ಲಾಕ್‌ಬಸ್ಟರ್ ಚಿತ್ರ 'ಉರಿ: ದ ಸರ್ಜಿಕಲ್ ಸ್ಟ್ರೈಕ್' ಅನ್ನು ನಿರ್ದೇಶಿಸುವ ಮೂಲಕ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದಾರೆ.
ಈ ಜೋಡಿಯ ಪ್ರೇಮಕಥೆ ಶುರುವಾಗಿದ್ದು ಉರಿ ಚಿತ್ರದ ಚಿತ್ರೀಕರಣದ ಸಮಯದಲ್ಲಿ. ಸುಮಾರು ಎರಡು ವರ್ಷಗಳ ಕಾಲ ತಮ್ಮ ಪ್ರೀತಿಯನ್ನು ಗೌಪ್ಯವಾಗಿಟ್ಟಿದ್ದ ಈ ಜೋಡಿಯು, 2021ರ ಜೂನ್ 4 ರಂದು ಹಿಮಾಚಲ ಪ್ರದೇಶದ ಮಂಡಿಯಲ್ಲಿ ಅತ್ಯಂತ ಸರಳವಾಗಿ ಮತ್ತು ಆಪ್ತೇಷ್ಟರ ಸಮ್ಮುಖದಲ್ಲಿ ವಿವಾಹವಾದರು. ಇತ್ತೀಚೆಗೆ ಈ ದಂಪತಿಗೆ ವೇದಾವಿದ್ ಎಂಬ ಗಂಡು ಮಗು ಜನಿಸಿದ್ದು, ಸಿನಿಮಾ ರಂಗದ ಅತ್ಯಂತ ಸುಸಂಸ್ಕೃತ ಮತ್ತು ಪ್ರಬುದ್ಧ ಜೋಡಿಗಳಲ್ಲಿ ಒಬ್ಬರು ಎಂದು ಇವರು ಗುರುತಿಸಿಕೊಂಡಿದ್ದಾರೆ,(ಏಜನ್ಸೀಸ್).