ನಟ ಅಮೀರ್ ಖಾನ್ ಗೆಳತಿ ಗೌರಿ ಸ್ಪ್ರಾಟ್ ಜೊತೆ ಮೂರನೇ ಮದುವೆ 
ಬಾಲಿವುಡ್

ರಿನಾದತ್ತಾ, ಕಿರಣ್ ರಾವ್ ಹಾದಿಯಲ್ಲೇ ನಡೀತಾರಾ ಗೌರಿ? ಅಮೀರ್​ ಮದುವೆ ಬೆನ್ನಲ್ಲೆ ಜೋರಾಯ್ತು ಮತಾಂತರದ ಚರ್ಚೆ! Aamir Khan Third Marriage

ಪ್ರಮುಖ ಮುಖ್ಯಾಂಶಗಳು

  • ನಟ ಅಮೀರ್ ಖಾನ್ ಗೆಳತಿ ಗೌರಿ ಸ್ಪ್ರಾಟ್ ಜೊತೆ ಮೂರನೇ ಮದುವೆ
  • ಸೋಷಿಯಲ್ ಮೀಡಿಯಾದಲ್ಲಿ ಜೋರಾದ ಮತಾಂತರದ ಚರ್ಚೆ
  • ಮಾಜಿ ಪತ್ನಿಯರಾದ ರಿನಾ ದತ್ತಾ, ಕಿರಣ್ ರಾವ್ ಹಾದಿಯಲ್ಲೇ ಗೌರಿ ನಡೆಯುತ್ತಾರಾ?
ಮುಂಬೈ: ಬಾಲಿವುಡ್​ನಲ್ಲಿ ಮಿಸ್ಟರ್​ ಪೆರ್ಫೆಕ್ಷನಿಸ್ಟ್ ಎಂದೇ ಖ್ಯಾತನಾಗಿರುವ ನಟನೆಂದರೆ ಅದು ಅಮೀರ್​ ಖಾನ್​. ಇಂದು (ಭಾನುವಾರ, ಜು.5) ಅಮೀರ್​ ಖಾನ್​ (Aamir Khan Third Marriage) ತಮ್ಮ ಮುಂಬೈ ನಿವಾಸದಲ್ಲಿ ತಮ್ಮ ಬಹುಕಾಲದ ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಮದುವೆಯಾಗುವ ಮೂಲಕ ಮೂರನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬಾಂದ್ರಾದ ಮನೆಯಲ್ಲಿ ನಡೆದ ಈ ಮದುವೆಗೆ ಆಪ್ತ ಸ್ನೇಹಿತರು ಹಾಗೂ ಹತ್ತಿರದ ಸಂಬಂಧಿಗಳು ಮಾತ್ರ ಉಪಸ್ಥಿತರಿದ್ದರು. ಇಲ್ಲಿ ಅಮೀರ್​ ಖಾನ್​ ಅವರ ಮೊದಲ ಪತ್ನಿ ಮಕ್ಕಳಾದ ಜುನೈದ್​ ಹಾಗೂ ಇರಾ ಭಾಗವಹಿಸಿದ್ದು ವಿಶೇಷವಾಗಿತ್ತು.

ಗೌರಿ ಇಸ್ಲಾಂಗೆ ಮತಾಂತರವಾಗುತ್ತಾರಾ?

ಅಮೀರ್​ ಮತ್ತು ಗೌರಿ ಮದುವೆ ಆಗಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದ್ದಂತೆ ಗೌರಿ ಇಸ್ಲಾಂಗೆ ಮತಾಂತರವಾಗುತ್ತಾರಾ? ಎಂಬ ಪ್ರಶ್ನೆ ಎಲ್ಲಾ ವಲಯಗಳಿಂದ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಗೌರಿ ಆಗಲೀ ಅಥವಾ ಅಮೀರ್​ ಖಾನ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಪ್ರಶ್ನೆಗೆ ಸ್ಪಷ್ಟ ಉತ್ತರ ದೊರೆಯಲಿದೆ ಎಂದು ಹೇಳಲಾಗುತ್ತಿದೆ.
ಗೌರಿ ಸ್ಪ್ರಾಟ್ ಮಿಶ್ರ ಸಂಪ್ರದಾಯ ಹಿನ್ನಲೆಯನ್ನು ಹೊಂದಿದ್ದಾರೆ. ಗೌರಿ ತಾಯಿ ಪಂಜಾಬಿ-ಐರಿಶ್​ ಹಿನ್ನಲೆಯನ್ನು ಹೊಂದಿದ್ದರೆ, ತಂದೆ ಒಬ್ಬ ತಮಿಳ್​-ಬ್ರಿಟಿಷ್​ ಹಿನ್ನಲೆ ಹೊಂದಿದವನಾಗಿದ್ದಾನೆ. ಹೀಗಾಗಿ ಗೌರಿ ಕ್ರಿಶ್ಚಿಯನ್​ ಧರ್ಮವನ್ನು ಅನುಸರಿಸುತ್ತಾಳೆ ಎಂದು ನಂಬಲಾಗಿದೆ.

ಮೊದಲಿಬ್ಬರೂ ಮತಾಂತರವಾಗಿದ್ದರು!

ಮೊದಲೇ ತಿಳಿಸಿದಂತೆ ಇದು ಅಮೀರ್​ ಖಾನ್​ ಅವರ ಮೂರನೇ ಮದುವೆಯಾಗಿದೆ. ಈ ಹಿಂದೆ 1986 ರಲ್ಲಿ ರಿನಾ ದತ್ತಾ ಅವರನ್ನು ಮದುವೆ ಆಗಿದ್ದರು. ಮೊದಲ ಪತ್ನಿಯಿಂದ ಇಬ್ಬರು ಮಕ್ಕಳನ್ನು ಪಡೆದಿದ್ದರು.
2002 ರಲ್ಲಿ ರಿನಾಗೆ ವಿಚ್ಛೇದನ ನೀಡಿದ ನಂತರ 2005 ರಲ್ಲಿ ಅಮೀರ್​ ಖಾನ್​, ನಿರ್ಮಾಪಕಿ ಕಿರಣ್ ರಾವ್​ ಅವರನ್ನು ಮದುವೆ ಆಗಿದ್ದರು. ಇವರಿಂದ ಕೂಡ ಒಬ್ಬ ಮಗನನ್ನು ಪಡೆದಿದ್ದರು. 2021 ರಲ್ಲಿ ಕಿರಣ್​ ರಾವ್​ನಿಂದ ವಿಚ್ಚೇದನ ಪಡೆದುಕೊಂಡರು.
ಅಮೀರ್​ ಖಾನ್​ರನ್ನು ಮದುವೆಯಾದ ನಂತರ ರಿನಾ ದತ್ತಾ ಹಾಗೂ ಕಿರಣ್ ರಾವ್​ ಇಬ್ಬರೂ ಕೂಡ ಇಸ್ಲಾಂಗೆ ಮತಾಂತರವಾಗಿದ್ದರು. ಈಗ ಗೌರಿ ಸ್ಪ್ರಾಟ್ ಅಮೀರ್​ ಖಾನ್​ರನ್ನು ಮದುವೆ ಆಗಿದ್ದಾರೆ. ಈ ಬಾರಿ ಗೌರಿಯನ್ನು ಅಮೀರ್​ ಇಸ್ಲಾಂಗೆ ಮತಾಂತರ ಮಾಡುತ್ತಾರಾ? ಇಲ್ಲವಾ? ಎನ್ನುವುದಕ್ಕೆ ಕಾಲವೇ ಉತ್ತರ ನೀಡಬೇಕಾಗಿದೆ, (ಏಜನ್ಸೀಸ್​​).