ಬಾಲಿವುಡ್‌ನ ಪಾಕಿಸ್ತಾನ ಪ್ರೇಮದ ವಿರುದ್ಧ ನಟಿ, ಸಂಸದೆ ಕಂಗನಾ ರಣಾವತ್ ಗರಂ!
- ನಟ ರಣವೀರ್ ಸಿಂಗ್ ಮೇಲಿನ ನಿಷೇಧದ ಹಿಂದಿತ್ತು ಪಾಕಿಸ್ತಾನ ಪ್ರೇಮಿಗಳ ಪಿತೂರಿ
- ಬಾಲಿವುಡ್‌ನ ಪಾಕಿಸ್ತಾನ ಪ್ರೇಮದ ವಿರುದ್ಧ ನಟಿ, ಸಂಸದೆ ಕಂಗನಾ ರಣಾವತ್ ಗರಂ!
- ಧುರಂಧರ್ ಚಿತ್ರದ ಯಶಸ್ಸನ್ನು ಜೀರ್ಣಿಸಿಕೊಳ್ಳಲಾಗದವರು ಈ ನಿಷೇಧ ಹೇರಿದ್ದರು
ಮುಂಬೈ: ಇತ್ತೀಚಿಗೆ ನಟ ರಣವೀರ್ ಸಿಂಗ್ ಜೊತೆ ಇನ್ನಾವುದೇ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಪಶ್ಚಿಮ ಭಾರತ ಚಲನಚಿತ್ರ ನೌಕರರ ಒಕ್ಕೂಟ (FWICE) ಹೇಳಿಕೆ ನೀಡಿ ನಟನನ್ನು ಚಿತ್ರರಂಗದಿಂದ ಬಹಿಷ್ಕಾರ ಹಾಕಲಾಗಿತ್ತು.
ಆದರೆ, ಕೆಲ ದಿನಗಳ ತರುವಾಯ ಈ ನಿಷೇಧವನ್ನು ಒಕ್ಕೂಟ ಹಿಂಪಡೆದಿತ್ತು. ಈದೀಗ ಈ ವಿವಾದಕ್ಕೆ ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut on Ranveer Singh Ban) ನೀಡಿರುವ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಬಾಲಿವುಡ್‌ನ ಪಾಕಿಸ್ತಾನ ಪ್ರೇಮ ಕಡಿಮೆಯಾಗಿಲ್ಲ!
ಫರ್ಹಾನ್ ಅಖ್ತರ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಡಾನ್ 3 ನಿಂದ ರಣವೀರ್ ಸಿಂಗ್ ಹೊರಬಂದ ಹಿನ್ನಲೆ ನಿಷೇಧ ಹೇರಲಾಗಿತ್ತು. ಈಗ ಇದರ ಬಗ್ಗೆ ಮಾತನಾಡಿರುವ ಕಂಗನಾ, ಬಾಲಿವುಡ್ನಲ್ಲಿರುವ ಪಾಕಿಸ್ತಾನ ಪ್ರೇಮ ಇನ್ನೂ ಕಮ್ಮಿಯಾಗಿಲ್ಲ, ರಣವೀರ್ ನಟನೆಯ ಧುರಂಧರ್ ಸಕ್ಸಸ್ ಜೀರ್ಣಿಸಿಕೊಳ್ಳಲು ಆಗದಿದ್ದವರು ನಟನ ವಿರುದ್ದ ಈ ಪಿತೂರಿ ರೂಪಿಸಿದ್ದರೆಂದು ನಾನು ನಂಬಿದ್ದೆನೆಂದು ನಟಿ ಹೇಳಿದ್ದಾರೆ.
ಬಾಲಿವುಡ್ನಲ್ಲಿ ಪಾಕಿಸ್ತಾನವನ್ನು ಮಿತ್ರದೇಶ ಎಂದು, ಅವರು ಸಜ್ಜನರೆಂದು ತೋರಿಸುವ ಒಂದು ಚಾಳಿಯಿದೆ. ಅದರೆ ಧುರಂಧರ್ ಸಿನಿಮಾದಲ್ಲಿ ಪಾಕಿಸ್ತಾನದ ನಿಜವಾದ ಮುಖ ಅನಾವರಣ ಆಗಿದ್ದು, ಇದು ಕೆಲವರ ಕೋಪಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಹೀಗಾಗಿ ನಟ ರಣವೀರ್ನನ್ನು ಟಾರ್ಗೆಟ್ ಮಾಡಿದ್ದರು. ಆದರೆ ಜನರ ಪ್ರೀತಿ, ಮತ್ತು ಒತ್ತಡಕ್ಕೆ ಮಣಿದು ಹೇರಲಾಗಿದ್ದ ನಿಷೇಧವನ್ನು ಹಿಂತೆಗೆದುಕೊಂಡರೆಂದು ನಟಿ, ಸಂಸದೆ ಹೇಳಿದ್ದಾರೆ.
FWICE ರಣವೀರ್ನನ್ನು ಏಕೆ ಬಹಿಷ್ಕರಿಸಿದೆ?
ನಿರ್ದೇಶಕ ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಡಾನ್ 3 ಸಿನಿಮಾದಲ್ಲಿ ರಣವೀರ್ ಸಿಂಗ್ ನಾಯಕ ನಟನಾಗಿ ಕಾಣಿಸಿಕೊಳ್ಳಬೇಕಿತ್ತು.
ಸಿನಿಮಾದ ಪ್ರಾರಂಭಿಕ ಹಂತದಲ್ಲಿ ತಂಡದ ಜೊತೆಗಿದ್ದ ರಣವೀರ್, ನಂತರ ಸಿನಿಮಾದಿಂದ ಹೊರ ನಡೆದಿದ್ದಾರೆ. ನಿರ್ದೇಶಕ ಫರ್ಹಾನ್ ಅಖ್ತರ್ ಹೇಳುವಂತೆ ಸಿನಿಮಾಗೆ ಈಗಾಗಲೇ ಸುಮಾರು 45 ಕೋಟಿ ಖರ್ಚಾಗಿದೆ. ಈಗ ಈ ಖರ್ಚನ್ನು ನಟನೇ ಭರಿಸಬೇಕು, ಇಲ್ಲವೇ ಸಿನಿಮಾದಲ್ಲಿ ನಟಿಸಬೇಕೆಂದು ಪಟ್ಟು ಹಿಡಿದು FWICE ಗೆ ದೂರು ನೀಡಿದ್ದಾರೆ. ಆದರೆ FWICE ನೀಡಿದ ನೋಟಿಸ್ಗಳಿಗೆ ನಟ ರಣವೀರ್ ಸಿಂಗ್ ಸರಿಯಾಗಿ ಪ್ರತಿಕ್ರಿಯಿಸದ ಹಿನ್ನಲೆಯಲ್ಲಿ ನಾವು ರಣವೀರ್ನ ಯಾವುದೇ ಸಿನಿಮಾದಲ್ಲಿ ಸಹಾಯಕ್ಕೆ ಬರುವುದಿಲ್ಲವೆಂದು ಒಕ್ಕೂಟ ತಿಳಿಸಿತ್ತು.
ನಿಷೇಧ ಹಿಂಪಡೆದ ಒಕ್ಕೂಟ!
ಡಾನ್ 3 ಸಿನಿಮಾದಿಂದ ರಣವೀರ್ ಸಿಂಗ್ ಹೊರಬಂದ ಕಾರಣ ನಟನ ಇನ್ನಾವುದೇ ಸಿನಿಮಾದಲ್ಲಿ ಕೆಲಸ ಮಾಡುವುದಿಲ್ಲ ಎಂದು ಪಶ್ಚಿಮ ಭಾರತ ಚಲನಚಿತ್ರ ನೌಕರರ ಒಕ್ಕೂಟ (FWICE) ಹೇರಿದ್ದ ಅಸಹಕಾರ ಅಥವಾ ನಿರ್ಬಂಧವನ್ನು ಬುಧವಾರ (ಜೂ.3) ಒಕ್ಕೂಟದ ಅಧ್ಯಕ್ಷ ಬಿ.ಎನ್. ತಿವಾರಿ ರದ್ದುಪಡಿಸಿದ್ದಾರೆ.
ಬುಧವಾರ (ಜೂ.3) ಮುಂಬೈನಲ್ಲಿ ಸುದ್ದಿಗೋಷ್ಟಿ ನಡೆಸಿದ ಪಶ್ಚಿಮ ಭಾರತ ಚಲನಚಿತ್ರ ನೌಕರರ ಒಕ್ಕೂಟ (FWICE), ನಮಗೆ ರಣವೀರ್ ಮೇಲೆ ಯಾವುದೇ ದ್ವೇಷವಿಲ್ಲ. ನಿನ್ನೆ ರಣವೀರ್ ಅವರ ಲೀಗಲ್ ಟೀಮ್ ಅವರ ಮೇಲೆ ಹೇರಿರುವ ಬ್ಯಾನ್ನ್ನು ಹಿಂತೆಗೆದುಕೊಳ್ಳುವಂತೆ ಕೇಳಿ ಕೊಂಡಿತು ಎಂದು FWICE ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ತಿಳಿಸಿದ್ದಾರೆ.
ರಣವೀರ್ ಸಿಂಗ್ಗೆ ನಮ್ಮ ಜೊತೆ ಕುಳಿತು ವಿವಾದವನ್ನು ತಿಳಿಗೊಳಿಸಿ ಕೊಳ್ಳುವಂತೆ ಹೇಳಿದ್ದೆವೆ. ನಾವು ಅವರ ಸ್ಟಾರ್ಡಂ ಅನ್ನು ಗೌರವಿಸುತ್ತೆವೆ. ನಮಗೆ ಯಾವುದೇ ನಟನನ್ನು ಬ್ಯಾನ್ ಮಾಡುವ ಅಧಿಕಾರವಿಲ್ಲ. ಈಗಲಾದರೂ ನಟ ನಮ್ಮ ಜೊತೆ ಮಾತಕತೆಗೆ ಒಪ್ಪಿದ್ದಾರಲ್ಲ ಅದೇ ಖುಷಿಯ ವಿಷಯ ಎಂದು ಅವರು ಹೇಳಿದ್ದಾರೆ,(ಏಜನ್ಸೀಸ್).