ಬಹು ನಿರೀಕ್ಷಿತ 'ರಾಮಾಯಣ' ಸಿನಿಮಾದ ಟ್ರೇಲರ್ ನೋಡಿ ಪಾಕಿಸ್ತಾನ ಫಿದಾ!
- ಬಹು ನಿರೀಕ್ಷಿತ 'ರಾಮಾಯಣ' ಸಿನಿಮಾದ ಟ್ರೇಲರ್ ನೋಡಿ ಪಾಕಿಸ್ತಾನ ಫಿದಾ!
- ರಾವಣನ ಅವತಾರದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಅವರ ಲುಕ್ ಹಾಗೂ ನಟನೆಗೆ ಪಾಕ್ ಪ್ರೇಕ್ಷಕರ ಮೆಚ್ಚುಗೆ
- ಸೋಷಿಯಲ್ ಮೀಡಿಯಾನಲ್ಲಿ ಧೂಳೆಬ್ಬಿಸುತ್ತಿರುವ ರಾಮಾಯಣ ಟ್ರೇಲರ್
ಇಸ್ಲಾಮಾಬಾದ್: ಕಳೆದ ಕೆಲ ವರ್ಷಗಳಿಂದ ಭಾರತದ ಮಣ್ಣಿನ ಕಥೆಗಳನ್ನು ಬಳಸಿಕೊಂಡು ಅದಕ್ಕೆ ಸಿನಿಮಾ ಟಚ್ ಕೊಡುವ ಸಂಸ್ಕೃತಿ ಬೆಳೆದು ಬರುತ್ತಿದೆ. ನಿನ್ನೆ (ಗುರುವಾರ, ಜು.30) ನಿಮಿತ್ ಮಲೋತ್ರಾ ನಿರ್ದೇಶನದ ರಾಮಾಯಣ ಭಾಗ 1 ರ ಟ್ರೇಲರ್ ರಿಲೀಸ್ ಆಗಿದ್ದು, ಇದು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಈ ಟ್ರೇಲರ್ ಖ್ಯಾತಿ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿರದೆ, ಪಕ್ಕದ ದೇಶ ಪಾಕಿಸ್ತಾನ (Pakistan Reaction on Ramayana Trailer) ದಲ್ಲಿ ಕೂಡ ಇದರ ಕ್ರೇಜ್ ಮುಗಿಲು ಮುಟ್ಟುತ್ತಿದೆ. ಆ ದೇಶದ ಜನರು ಅನುಸರಿಸುವ ಧರ್ಮ ಬೇರೆಯೇಯಾದರೂ, ಪ್ರಭು ಶ್ರೀರಾಮನ ಪಾತ್ರಧಾರಿ ರಣಬೀರ್ ಕಪೂರ್ ಹಾಗೂ ರಾಕಿಂಗ್ ಸ್ಟಾರ್ ಯಶ್ನ ರಾವಣನ ಲುಕ್ಗೆ ಮನಸೋತಿದ್ದಾರೆ.
ನಾವು ಈ ಸಿನಿಮಾವನ್ನು ಖಂಡಿತವಾಗಿ ನೋಡುತ್ತೇವೆ!
ನಿನ್ನೆ ಬೆಳಿಗ್ಗೆ 4 ಗಂಟೆಗೆ ಅಂದರೆ ಹಿಂದೂಗಳಿಗೆ ಅತ್ಯಂತ ಪವಿತ್ರ ಸಮಯವಾದ ಬ್ರಹ್ಮ ಮುಹೂರ್ತದಲ್ಲಿ ಟ್ರೇಲರ್ ರಿಲೀಸ್ ಮಾಡುವ ಮೂಲಕ ಸಿನಿಮಾದಲ್ಲಿ ನಾವು ಪಾವಿತ್ರ್ಯತೆ ಕಾಪಾಡಿಕೊಂಡಿದ್ದೆವೆ ಹಾಗೂ ಸಂಪ್ರದಾಯಬದ್ಧವಾಗಿ ಸಿನಿಮಾ ತಯಾರಿಸಿದ್ದೇವೆ ಎಂಬ ಸಂದೇಶವನ್ನು ಸಿನಿತಂಡ ಪ್ರೇಕ್ಷಕರಿಗೆ ತಿಳಿಸಿದೆ.
ಈಗ ಈ ಟ್ರೇಲರ್ ಅನ್ನು ವೀಕ್ಷಿಸಿರುವ ಪಾಕಿಸ್ತಾನಿ ಯುಟ್ಯೂಬರ್ಗಳು ರಾಮಾಯಣ ಸಿನಿಮಾದ ಟ್ರೇಲರ್ ಅನ್ನು ಹಾಡಿ ಹೊಗಳುತ್ತಿದ್ದಾರೆ. ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿರುವ ಮಾವಿಯ ಉಮರ್ ಫಾರೂಕಿ ಎಂಬ ಪಾಕಿಸ್ತಾನಿ ಯುವಕ, ನಾನು ಇಂದು ಹಿಂದೂಸ್ತಾನದಲ್ಲಿ ಬಿಡುಗಡೆಯಾಗಿರುವ ರಾಮಾಯಣ ಸಿನಿಮಾದ ಟ್ರೇಲರ್ ನೋಡಿದೆ. ಈ ಸಿನಿಮಾ ಟ್ರೇಲರ್ ಬಹಳ ಅದ್ಭುತವಾಗಿದೆ.
https://youtube.com/shorts/hGij_SWkSYE?si=eHzrNLqbHGGUGmIo
ನನಗೆ ತಿಳಿದ ಪ್ರಕಾರ ಈ ಸಿನಿಮಾಗೆ ಸುಮಾರು 1000 ಕೋಟಿ ಖರ್ಚು ಮಾಡಿದ್ದಾರಂತೆ. ಅದು ಟ್ರೇಲರ್ನಲ್ಲಿ ಕಾಣಿಸುತ್ತಿದೆ. ರಣಬೀರ್ ಕಪೂರ್ ಹಾಗೂ ಯಶ್ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಾರೆ. ನಾನು ಈ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದೆನೆ ಎಂದು ಹೇಳಿದ್ದಾರೆ.
ಯಶ್ ಅಭಿನಯ ಸೂಪರ್!
ಇನ್ನೊಬ್ಬ ಪಾಕಿಸ್ತಾನಿ ಯುಟ್ಯೂಬರ್, ಹಸ್ನಾತ್ ಖಾನ್ ಕೂಡ ಈ ಟ್ರೇಲರ್ನಲ್ಲಿರುವ ಆ್ಯಕ್ಷನ್ ದೃಶ್ಯಗಳನ್ನು ಹೊಗಳಿದ್ದು, ಯಶ್ ರಾವಣನಾಗಿ ಬಹಳ ಅದ್ಭುತವಾಗಿ ಕಾಣಿಸುತ್ತಿದ್ದಾರೆ. ಈ ಸಿನಿಮಾ ಕೇವಲ ಭಾರತ, ಪಾಕಿಸ್ತಾನ ಮಾತ್ರವಲ್ಲ ಪ್ರಪಂಚದ ತುಂಬೆಲ್ಲಾ ಸಕ್ಕತ್ ಸೌಂಡ್ ಮಾಡಲಿದೆ. ನನಗಂತೂ ಈ ಸಿನಿಮಾದ ವಿಎಫ್ಎಕ್ಸ್ ಹಾಗೂ ಆ್ಯಕ್ಷನ್ ದೃಶ್ಯಗಳು ಬಹಳ ಇಷ್ಟವಾದವು. ನಾನು ಸಿನಿಮಾ ಬಿಡುಗಡೆಯಾದ ದಿನವೇ ಈ ಸಿನಿಮಾವನ್ನು ನೋಡಲಿದ್ದೆನೆ ಎಂದಿದ್ದಾರೆ, (ಏಜನ್ಸೀಸ್).