ನಟಿ ಮೌನಿ ರಾಯ್ ಪಾಪಾರಾಜಿಗಳ ವಿರುದ್ಧ ಕೆಂಡಾಮಂಡಲ 
ಬಾಲಿವುಡ್

ಈಗಲೇ ಕ್ಯಾಮರಾ ಬಂದ್ ಮಾಡಿ! ಮೇಕಪ್ ಇಲ್ಲದೆ ಕಾರಿನಲ್ಲಿ ಕುಳಿತಿದ್ದ ನಟಿ; ಪಾಪಾರಾಜಿಗಳ ವಿರುದ್ಧ ಕಿಡಿಕಾರಿದ ಮೌನಿ ರಾಯ್​! Mouni Roy on Paparazzi

ಪ್ರಮುಖ ಮುಖ್ಯಾಂಶಗಳು

  • ಕಾರಿನಲ್ಲಿ ಮೇಕಪ್ ಇಲ್ಲದೆ ಕುಳಿತಿದ್ದ ಬಾಲಿವುಡ್ ನಟಿ ಮೌನಿ ರಾಯ್
  • ಖಾಸಗಿತನಕ್ಕೆ ಧಕ್ಕೆ ತಂದ ಪಾಪಾರಾಜಿಗಳು!
  • ನಟಿ ಮೌನಿ ರಾಯ್ ಪಾಪಾರಾಜಿಗಳ ವಿರುದ್ಧ ಕೆಂಡಾಮಂಡಲ
ಮುಂಬೈ: ಸಿನಿಮಾ ನಟ-ನಟಿಯರೊಂದಿಗೆ ಈ ಪಾಪಾರಾಜಿಗಳ ಅನುಚಿತ ವರ್ತನೆಯ ವಿಡಿಯೋಗಳು ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಲೇ ಇರುತ್ತವೆ. ಅದರಲ್ಲೂ ನಟಿಯರೊಂದಿಗೆ ಇವರ ವರ್ತನೆ ಸ್ವಲ್ಪ ಹದ್ದು ಮೀರಿಯೇ ಇರುತ್ತದೆ ಎಂದರೆ ತಪ್ಪಾಗದು.
ಕೆಲವೊಂದು ಬಾರಿ ನಟಿಯರೇ ಇವರಿಗೆ ಹಣವನ್ನು ನೀಡಿ ಹೀಗೆ ಮಾಡಿ- ಹಾಗೆ ಮಾಡಿ ಎಂಬ ಹೇಳಿರುವ ಉದಾಹರಣ ಕೂಡ ಇರುವ ಕಾರಣ ಕೇವಲ ಪಾಪಾರಾಜಿಗಳನ್ನು ದೂರುವುದು ಕೂಡ ಸರಿಯಲ್ಲ. ಆದರೆ ಕೆಲ ದಿನಗಳ ಹಿಂದೆ ನಾಗಿಣಿ ಧಾರಾವಾಹಿ ಮೂಲಕ ಖ್ಯಾತಿಗಳಿಸಿ, ನಂತರ ಬಾಲಿವುಡ್​ನಲ್ಲಿ ಹೆಸರುವಾಸಿಯಾಗಿರುವ ನಟಿ ಮೌನಿ ರಾಯ್ (Mouni Roy on Paparazzi)​ ಪಾಪಾರಾಜಿಗಳ ಮೇಲೆ ಕೋಪಗೊಂಡಿರುವ ವಿಡಿಯೋ ಸಾಮಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.

ವಿಡಿಯೋನಲ್ಲೇನಿದೆ?

ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿರುವ ವಿಡಿಯೋನಲ್ಲಿ ಮೌನಿ ರಾಯ್​ ಎಲ್ಲಿಂದಲೋ ಬಂದು ತಮ್ಮ ಕಾರನ್ನು ಏರಿದ್ದಾರೆ. ಕಾರನ್ನು ಏರುವ ಪೂರ್ವದಲ್ಲಿ ಕೂಡ ಪಾಪಾರಾಜಿಗಳು, ಮೌನಿಯನ್ನು ವಿಡಿಯೋ ರೆಕಾರ್ಡ್ ಮಾಡಿದ್ದಾರೆ.
ಕಾರನ್ನು ಏರಿದ ನಂತರ ಕಿಟಕಿ ಮೂಲಕ ಕಾರಿನ ಒಳಗೆ ಕುಳಿತಿರುವ ಮೌನಿಯನ್ನು ರೆಕಾರ್ಡ್​ ಮಾಡಲು ಶುರುವಿಟ್ಟಿದ್ದಾರೆ. ಪ್ರಾರಂಭದಲ್ಲಿ ಸೌಮ್ಯವಾಗಿಯೇ ಇದನ್ನು ನಿಲ್ಲಿಸಿ, ಎಂದು ನಟಿ ಹೇಳಿದ್ದಾರೆ. ಎರಡು-ಮೂರು ಬಾರಿ ಹೇಳಿದಾಗಲೂ ರೆಕಾರ್ಡಿಂಗ್​ ಮುಂದುವರಿಸಿದ ನಂತರ ನಟಿಯ ಕೋಪ ನೆತ್ತಿಗೇರಿದೆ.
ಆಗ ಪಾಪಾರಾಜಿಗಳ ಮೇಲೆ ಮುನಿಸಿಕೊಂಡ ಮೌನಿ ರಾಯ್​, ಈಗಲೇ ಇದನ್ನು ಬಂದ್ ಮಾಡಿ ಎಂದು ಕಿರುಚಿದ್ದಾರೆ. ನಟಿ ಪಕ್ಕದಲ್ಲಿದ್ದ ಅನುಷಾ ದಾಂಡೆಕರ್​ ಕ್ಯಾಮರಾಗೆ ತನ್ನ ಕೈಗಳನ್ನು ಅಡ್ಡ ಹಿಡಿದು ಮೌನಿಯನ್ನು ಸೆರೆಹಿಡಿಯದಂತೆ ಪ್ರಯತ್ನಿಸಿದ್ದಾಳೆ.
ಕಾರಿನಲ್ಲಿ ನಟಿ ಮೇಕಪ್​ ಧರಿಸದೆ, ಸಾದಾರಣವಾದ ಉಡುಯೆಯಲ್ಲಿದ್ದ ಕಾರಣ ಪಾಪಾರಾಜಿಗಳ ಮೇಲೆ ಗರಂ ಆಗಿದ್ದಾರೆಂದು ನೆಟ್ಟಿಗರು ಕಮೆಂಟ್​ ಸೆಕ್ಷನ್​​ನಲ್ಲಿ ಹೇಳುತ್ತಿದ್ದಾರೆ. ಆದರೆ ನಟಿಯ ಅನುಮತಿ ಇಲ್ಲದೆ ಹೀಗೆ ವಿಡಿಯೋ ಸೆರೆ ಹಿಡಿದಿದ್ದು ತಪ್ಪು ಎನ್ನುವುದು ಹಲವರ ಅಭಿಪ್ರಾಯವಾಗಿದೆ.

ಗಂಡನಿಂದ ದೂರವಾಗಿರುವ ನಟಿ!

ನಟಿ ಮೌನಿ ರಾಯ್​ ತಮ್ಮ ಪತಿ ಸೂರಜ್​ ನಂಬಿಯಾರ್ ಅವರಿಂದ ಇತ್ತೀಚೆಗೆ ದೂರವಾಗಿರುವ ಕುರಿತು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮ ಹೇಳಿಕೆಯನ್ನು ನೀಡಿದ್ದರು. 2022 ರಲ್ಲಿ ಗೋವಾದಲ್ಲಿ ಮದುವೆಯಾಗಿದ್ದ ಈ ಜೋಡಿ ಈಗ ಪರಸ್ಪರ ದೂರವಾಗುವುದಾಗಿ ಘೋಷಿಸಿದ್ದಾರೆ. ಆದರೆ ಇವರು ಅಧಿಕೃತವಾಗಿ ವಿಚ್ಚೇದನ ಪಡೆದ ಬಗ್ಗೆ ಯಾವುದೇ ನಿಖರ ಮಾಹಿತಿ ಲಭ್ಯವಿಲ್ಲ, (ಏಜನ್ಸೀಸ್​).