ನನಗೆ ಅವರಿಬ್ಬರು ಮದುವೆಯಾದರೆ ಸಂತೋಷ: ರಾಖಿ ಸಾವಂತ್
- ತ್ರಿಷಾ ಕೃಷ್ಣನ್ ನನ್ನ ಬಾಲ್ಯದ ಗೆಳತಿ!
- ಅವಳು ವಿಜಯ್‌ನನ್ನೇ ಮದುವೆಯಾಗಲಿ
- ನನಗೆ ಅವರಿಬ್ಬರು ಮದುವೆಯಾದರೆ ಸಂತೋಷ: ರಾಖಿ ಸಾವಂತ್
ಮುಂಬೈ: ತಮಿಳು ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ ಮತ್ತು ನಟಿ ತ್ರಿಷಾ ನಡುವಿನ ಸಂಬಂಧದ ವದಂತಿಗಳು ಬಹು ಕಾಲದಿಂದ ಕೇಳುತ್ತಲೆ ಬರುತ್ತಿದೆ. ಅದರಲ್ಲೂ ಇತ್ತೀಚೆಗೆ, ವಿಜಯ್ ನೇತೃತ್ವದ ಟಿವಿಕೆ ಪಕ್ಷ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅತೀ ಹೆಚ್ಚು ಸೀಟ್ಗಳನ್ನು ಗೆದ್ದ ಪಕ್ಷವಾಗಿ ಹೊರಹೊಮ್ಮಿದ ನಂತರ ಈ ಡೇಟಿಂಗ್ ವಿಚಾರ ಮತ್ತೆ ಮ,ಉನ್ನಲೆಗೆ ಬಂದಿದೆ.
ವಿಜಯ್ ಮತ್ತು ತ್ರಿಷಾ ನಡುವಿನ ಸಂಬಂಧಕ್ಕೆ ಪ್ರತಿಕ್ರಿಯೆ ನೀಡಿರುವ ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant on Trisha and Vijay Marriage) ಇವರಿಬ್ಬರು ಮದುವೆಯಾಗುವುದು ಉತ್ತಮ ಎಂಬ ಹೇಳಿಕೆ ನೀಡಿದ್ದಾರೆ.
ತ್ರಿಷಾ ನನ್ನ ಬಾಲ್ಯದ ಗೆಳತಿ!
ಇವರು ಹೀಗೆ ಜನರ ಊಹಾಪೋಹಗಳಿಗೆ ಪ್ರತಿಕ್ರಿಯೆ ನೀಡುವ ಬದಲು ವಿಜಯ್ ಮತ್ತು ತ್ರಿಷಾ ಮದುವೆಯಾದರೆ ಒಳ್ಳೆಯದು, ನಾನು ಇವರ ಮದುವೆಯಲ್ಲಿ ಖಂಡಿತವಾಗಿ ಭಾಗವಹಿಸುತ್ತೆನೆಂದು ರಾಖಿ ಹೇಳಿದ್ದಾಳೆ.
ನಾನು ತ್ರಿಷಾಳನ್ನು ಬಹಳ ಸಣ್ಣ ವಯಸ್ಸಿನಿಂದ ನೋಡಿದ್ದೆನೆ. ಮೊದಲು ತ್ರಿಷಾ ಬಾಲಿವುಡ್ನಲ್ಲಿ ಕೆಲಸ ಮಾಡುತ್ತಿದ್ದಳು, ನಾನು ಆಗ ಬಾಲಿವುಡ್ನಲ್ಲಿ ಅವಕಾಶಕ್ಕಾಗಿ ಅಲೆಯುತ್ತಿದೆ. ನಂತರ ಅವಳು ದಕ್ಷಿಣದ ಸಿನಿಮಾರಂಗದೆಡೆಗೆ ಹೋದಳು ಎಂದು ಹೇಳಿದ್ದಾಳೆ.
ನನಗೆ ವಿಜಯ್ ಜೊತೆ ನಟಿಸುವ ಕನಸಿತ್ತು!
ಹಾಗೆಯೇ ನಟ ವಿಜಯ್ ಬಗ್ಗೆ ಮಾತನಾಡಿದ ರಾಖಿ, ನನಗೆ ವಿಜಯ್ ಬಹಳ ಇಷ್ಟವಾಗುವ ವ್ಯಕ್ತಿ, ಅವರು ತುಂಬಾ ಒಳ್ಳೆಯವರು. ನನಗೆ ಅವರೊಂದಿಗೆ ಒಂದು ಹಾಡಿನಲ್ಲಿ ನೃತ್ಯ ಮಾಡಬೇಕೆಂಬ ಕನಸ್ಸಿತ್ತು, ಆದರೆ ಅದು ಸಾಧ್ಯವಾಗಲಲ್ಲ. ವಿಜಯ್ ಈಗ ಒಬ್ಬ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ವ್ಯಕ್ತಿಯೊಬ್ಬ ತಮಿಳುನಾಡಿನ ಮುಖ್ಯಮಂತ್ರಿ ಆಗಲು ಹೊರಟಿರುವುದು ನನಗೆ ಬಹಳ ಸಂತೋಷದ ಸಂಗತಿಯಾಗಿದೆ ಎಂದು ಹೇಳಿದ್ದಾರೆ, (ಏಜನ್ಸೀಸ್).