ಬಾತುಕೋಳಿಯಂತೆ ನಡೆಯುವುದೇಕೆ ಮಲೈಕಾ? ಕೊನೆಗೂ ಟ್ರೋಲಿಗರಿಗೆ ಉತ್ತರ ಕೊಟ್ಟ ಬಾಲಿವುಡ್​ ಬ್ಯೂಟಿ! Malaika Arora  
ಬಾಲಿವುಡ್

ಬಾತುಕೋಳಿಯಂತೆ ನಡೆಯುವುದೇಕೆ ಮಲೈಕಾ? ಕೊನೆಗೂ ಟ್ರೋಲಿಗರಿಗೆ ಉತ್ತರ ಕೊಟ್ಟ ಬಾಲಿವುಡ್​ ಬ್ಯೂಟಿ! Malaika Arora

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್​ ಬೋಲ್ಡ್​ ಬ್ಯೂಟಿ ಮಲೈಕಾ ಅರೋರಾ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ
  • ನಟನೆಯಿಂದ ಮಾತ್ರವಲ್ಲ, ತಮ್ಮ ಫಿಟ್ನೆಸ್, ವಯಸ್ಸನ್ನು ಮೀರಿದ ಸೌಂದರ್ಯದಿಂದಲೇ ಗುರುತಿಸಿಕೊಂಡಿದ್ದಾರೆ
  • ಐಟಂ ಡಾನ್ಸ್ ಮತ್ತು ತನಗಿಂತ ಕಿರಿಯ ವಯಸ್ಸಿನವರ ಜತೆ ಡೇಟಿಂಗ್​ ಮಾಡುವ ಮೂಲಕವೂ ಸುದ್ದಿಯಲ್ಲಿರುತ್ತಾರೆ
  • ಬಾತುಕೋಳಿಯಂತೆ ನಡೆಯುವ ಮಲೈಕಾ ಅರೋರಾ ಆ ರೀತಿ ನಡೆಯಲು ಕಾರಣ ಏನು ಅನ್ನೋದನ್ನು ವಿವರಿಸಿದ್ದಾರೆ
Malaika Arora : ಬಾಲಿವುಡ್​ ಬೋಲ್ಡ್​ ಬ್ಯೂಟಿ ಮಲೈಕಾ ಅರೋರಾ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಕೇವಲ ನಟನೆಯಿಂದ ಮಾತ್ರವಲ್ಲ, ತಮ್ಮ ಫಿಟ್ನೆಸ್, ವಯಸ್ಸನ್ನು ಮೀರಿದ ಸೌಂದರ್ಯ, ಐಟಂ ಡ್ಯಾನ್ಸ್ ಮತ್ತು ತನಗಿಂತ ಕಿರಿಯ ವಯಸ್ಸಿನವರ ಜತೆ ಡೇಟಿಂಗ್​ ಮಾಡುವ ಮೂಲಕ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಇವುಗಳ ಜೊತೆಗೆ, ನಟಿಯ ನಡಿಗೆ ಕೂಡ ಹೆಚ್ಚಿನ ಗಮನ ಸೆಳೆದಿದೆ.
ಮಲೈಕಾ ಅರೋರಾ ಅವರು ಬಾತುಕೋಳಿಯಂತೆ ನಡೆಯುತ್ತಾರೆ ಅನ್ನೋದು ಅನೇಕರ ಅಭಿಪ್ರಾಯ. ಇದಕ್ಕೆ ಸಂಬಂಧಿಸಿದ ಟ್ರೋಲ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹರಿದಾಡುತ್ತಲೇ ಇರುತ್ತವೆ. ಅಂದಹಾಗೆ, ಬಾತುಕೋಳಿಯಂತೆ ನಡೆಯುವುದು ಮಲೈಕಾ ಅವರ ಸಹಜ ನಡಿಗೆಯಲ್ಲ, ಬೇಕಂತಲೇ ಆ ರೀತಿ ನಡೆಯುತ್ತಾರೆ. ಆ ರೀತಿ ಏಕೆ ನಡೆಯಲು ಕಾರಣ ಏನು ಎಂಬುದನ್ನು ಸಹ ಮಲೈಕಾ ವಿವರಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಲೈಕಾ, ನಂಬಿರಿ ಅಥವಾ ಬಿಡಿ, ನನ್ನ ವೈದ್ಯರು ನನಗೆ ಆ ರೀತಿ ನಡೆಯಲು ಸಲಹೆ ನೀಡಿದ್ದಾರೆ. ನಾನು ಬಹಳಷ್ಟು ಹೀಲ್ಸ್ ಚಪ್ಪಲಿ ಮತ್ತು ಅಂತಹುದೇ ಬೂಟುಗಳನ್ನು ಧರಿಸುವುದರಿಂದ ನನ್ನ ಬೆನ್ನಿನ ಕೆಳಭಾಗದಲ್ಲಿ ಯಾವಾಗಲೂ ಆರೋಗ್ಯ ಸಮಸ್ಯೆಗಳಿವೆ. ಅದಕ್ಕಾಗಿಯೇ ವೈದ್ಯರು ಈ ರೀತಿಯ ನಡಿಗೆಯನ್ನು ಶಿಫಾರಸು ಮಾಡಿದರು ಎಂದು ಮಲೈಕಾ ಹೇಳಿದ್ದಾರೆ.
ನಾನು ಪ್ರತಿದಿನ ಬಾತುಕೋಳಿ ನಡಿಗೆಯನ್ನು ಅನುಸರಿಸುತ್ತೇನೆ. ಇದು ನನ್ನ ಬೆನ್ನಿನ ಕೆಳಭಾಗದ ಸಮಸ್ಯೆಗಳನ್ನು ಪರಿಹರಿಸುವುದಲ್ಲದೆ, ನನ್ನ ಭಂಗಿಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಇದು ಗೂನು ಬೆನ್ನನ್ನು ಸರಿಪಡಿಸುತ್ತದೆ ಮತ್ತು ನನ್ನ ದೇಹಾಕೃತಿಯನ್ನು ಸುಧಾರಿಸುತ್ತದೆ ಎಂದು ನಟಿ ವಿವರಿಸಿದರು.
ಅಂದಹಾಗೆ, ಮಲೈಕಾ ಅವರ ವೈದ್ಯರು ಕಾಲ್ಬೆರಳುಗಳನ್ನು ಒಟ್ಟಿಗೆ ಮತ್ತು ಪಾದಗಳನ್ನು ದೂರವಿಟ್ಟು ನಡೆಯಲು ಸಲಹೆ ನೀಡಿದ್ದಾರೆ. ಬೆಳಗ್ಗೆ ಮತ್ತು ರಾತ್ರಿ ಈ ರೀತಿ 10 ರಿಂದ 15 ಹೆಜ್ಜೆಗಳು ನಡೆಯಬೇಕಾಗುತ್ತದೆ. ಹೀಗಾಗಿ, ನಾನು ಅದನ್ನು ಅನುಸರಿಸುತ್ತೇನೆ ಎಂದು ಮಲೈಕಾ ಹೇಳಿದ್ದಾರೆ.
ಫಿಟ್ನೆಸ್ ಕೇವಲ ನನ್ನ ದಿನಚರಿಯ ಭಾಗವಲ್ಲ, ಅದು ನನ್ನ ದೇಹವನ್ನು ಬಲಪಡಿಸಲು ಮತ್ತು ಚೈತನ್ಯ ತುಂಬಲು ಸಹಾಯ ಮಾಡುತ್ತದೆ ಎಂದು ಮಲೈಕಾ ಅರೋರಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ದಿನಕ್ಕೆ ಕೇವಲ ಅರ್ಧ ಗಂಟೆ ಮಾಡಿದರು ಕೂಡ ತುಂಬಾ ಸಂತೋಷವನ್ನು ನೀಡುತ್ತದೆ. ಓಟ, ನಡಿಗೆ ಮತ್ತು ಯೋಗ ತಮ್ಮ ನೆಚ್ಚಿನ ಚಟುವಟಿಕೆಗಳು ಎಂದು ಮಲೈಕಾ ಹೇಳಿದ್ದಾರೆ, (ಏಜೆನ್ಸೀಸ್​).