ಗೋವಿಂದಾಗೆ ಹಲವು ನಟಿಯರ ಜೊತೆ ಸಂಬಂಧವಿತ್ತು: ಸುನೀತಾ ಅಹುಜಾ
- ಗೋವಿಂದಾಗೆ ಹಲವು ನಟಿಯರ ಜೊತೆ ಸಂಬಂಧವಿತ್ತು: ಸುನೀತಾ ಅಹುಜಾ
- ನನಗೆ ಗೋವಿಂದನಂಥ ಗಂಡ ಬೇಡ, ಮಗ ಬೇಕು!
- ಸುನೀತಾ ಅಹುಜಾ ಹೇಳಿಕೆ ಸೋಷಿಯಲ್ ಮೀಡಿಯಾನಲ್ಲಿ ವೈರಲ್
ಮುಂಬೈ: ಬಾಲಿವುಡ್‌ನ ಎವರ್‌ಗ್ರೀನ್ ಹೀರೋ ಗೋವಿಂದ್ ಮತ್ತು ಅವರ ಪತ್ನಿ ಸುನೀತಾ ಅಹುಜಾ ಸದಾ ಸುದ್ದಿಯಲ್ಲಿರುವ ಜೋಡಿ. ಆದರೆ ಇತ್ತೀಚೆಗೆ ಲಾಕ್ ಅಪ್ ಎಂಬ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಸುನೀತಾ ಅಹುಜಾ ಆಡಿದ ಮಾತುಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿವೆ.
ನನಗೆ ಗೋವಿಂದನಂಥ ಗಂಡ ಬೇಡ, ಮಗ ಬೇಕು!
ಕಾರ್ಯಕ್ರಮದ ನಿರೂಪಕಿ ಫರಾ ಖಾನ್ ಸುನೀತಾ ಅವರ ಹಳೇ ಹೇಳಿಕೆಯೊಂದನ್ನು ನೆನಪಿಸಿ, ಅದರಲ್ಲಿ ಸುನೀತಾ, ನನಗೆ ಗೋವಿಂದನಂತಹ ಮಗ ಬೇಕು, ಗಂಡನಲ್ಲ ಎಂದು ಹೇಳಿದ್ದರು. ಇದಕ್ಕೆ ಫರಾ ವಿವರಣೆ ಕೇಳಿದಾಗ ಸುನೀತಾ ಕೊಟ್ಟ ಉತ್ತರ ಈಗ ವೈರಲ್ ಆಗಿದೆ.
ಪ್ರೀತಿ ಅಂದಮೇಲೆ ಎಲ್ಲವನ್ನೂ ಸಹಿಸಿಕೊಳ್ಳಬೇಕು. ಗೋವಿಂದ ತನ್ನ ಜೀವನದಲ್ಲಿ ಹಲವಾರು ಅಫೇರ್ಸ್ (Sunita Ahuja on Govindas Affairs) ಇಟ್ಟುಕೊಂಡಿದ್ದರು. ಸಿನಿಮಾ ಇಂಡಸ್ಟ್ರಿಯಲ್ಲಿ ಹೀರೋ-ಹೀರೋಯಿನ್ ಮಧ್ಯೆ ಇವೆಲ್ಲ ಮಾಮೂಲಿ. ಇಷ್ಟೆಲ್ಲಾ ಆದ್ರೂ ಇಷ್ಟು ವರ್ಷ ನಾನು ಅವರ ಜೊತೆ ಗಟ್ಟಿಯಾಗಿ ನಿಂತಿದ್ದೇನೆ.
ಅದಕ್ಕೇ ನನಗೆ ಅವರಂಥ ಗಂಡ ಬೇಡ, ಅಷ್ಟೇ ಪ್ರೀತಿ ಕೊಡುವ ಮಗ ಬೇಕು ಅಂತ ಹೇಳಿದ್ದು ಎಂದು ಸುನೀತಾ ಖಡಕ್ ಉತ್ತರ ನೀಡಿದ್ದಾರೆ. ಪತಿಯ ಅಫೇರ್‌ಗಳ ಬಗ್ಗೆ ಇಷ್ಟೊಂದು ಮುಕ್ತವಾಗಿ ಮಾತನಾಡಿದ ಸುನೀತಾ ಧೈರ್ಯಕ್ಕೆ ಕೆಲವರು ಫಿದಾ ಆಗಿದ್ದರೆ, ಇನ್ನು ಕೆಲವರು ಇದು ವೈಯಕ್ತಿಕ ವಿಚಾರ, ಹೀಗೆ ಪಬ್ಲಿಕ್ ಆಗಿ ಹೇಳಬಾರದಿತ್ತು ಎನ್ನುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ
ಸುನೀತಾ ಅವರ ಈ ಮಾತುಗಳು ಹೊರಬೀಳುತ್ತಿದ್ದಂತೆ ಇಂಟರ್ನೆಟ್‌ನಲ್ಲಿ ಮೀಮ್ಸ್ ಮತ್ತು ಕಮೆಂಟ್‌ಗಳ ಮಹಾಪೂರವೇ ಹರಿದುಬರುತ್ತಿದೆ. ಒಂದು ವರ್ಗದ ನೆಟ್ಟಿಗರು ಬಾಲಿವುಡ್‌ನಲ್ಲಿ ಇಷ್ಟೊಂದು ಮುಕ್ತವಾಗಿ, ಯಾವುದೇ ಮುಖವಾಡ ಇಲ್ಲದೆ ಸತ್ಯ ಮಾತನಾಡುವ ಹೆಣ್ಣುಮಗಳನ್ನು ನೋಡಿರಲಿಲ್ಲ ಎಂದು ಸುನೀತಾ ಅವರ ಪ್ರಾಮಾಣಿಕತೆಯನ್ನು ಹೊಗಳುತ್ತಿದ್ದಾರೆ. ಮತ್ತೊಂದು ವರ್ಗದ ಜನ ರಿಯಾಲಿಟಿ ಶೋ ಟಿಆರ್‌ಪಿಗಾಗಿ ಮದುವೆಯ ಇಷ್ಟು ವರ್ಷಗಳ ನಂತರ ಪತಿಯ ತೇಜೋವಧೆ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗೋವಿಂದಾ ಬಾಲಿವುಡ್‌ನ ಸೂಪರ್ ಸ್ಟಾರ್ ಆಗುವ ಮುನ್ನವೇ, 1987 ರಲ್ಲೇ ಸುನೀತಾ ಅವರನ್ನು ಮದುವೆಯಾಗಿದ್ದರು. ಆದರೆ ಕರಿಯರ್ ದೃಷ್ಟಿಯಿಂದ ಆರಂಭದ ಕೆಲವು ವರ್ಷಗಳ ಕಾಲ ತಮ್ಮ ಮದುವೆಯ ವಿಷಯವನ್ನು ಚಿತ್ರರಂಗದಿಂದ ಗೌಪ್ಯವಾಗಿಟ್ಟಿದ್ದರು. ನಂತರ ಮಗಳು ಹುಟ್ಟಿದ ಮೇಲೆ ಈ ಜೋಡಿ ತಮ್ಮ ಮದುವೆಯನ್ನು ಅಧಿಕೃತವಾಗಿ ಘೋಷಿಸಿತು. ಇವರಿಗೆ ಯಶವರ್ಧನ್ ಅಹುಜಾ ಹಾಗೂ ಟೀನಾ ಎಂಬ ಇಬ್ಬರು ಮಕ್ಕಳಿದ್ದಾರೆ, (ಏಜನ್ಸೀಸ್).