ಅಶ್ಲೀಲವಾಗಿ ನರ್ತಿಸಿದ ಆರೋಪದ ಮೇಲೆ ನೋರಾ ಫತೇಹಿ ವಿರುದ್ಧ ಫತ್ವಾ ಹೊರಡಿಸಿದ ಇಸ್ಲಾಂ ಧರ್ಮ ಗುರು 
ಬಾಲಿವುಡ್

ಸರ್ಸೆ ನಿನ್ನ ಸೆರಗ ಸರ್ಸೆ ವಿವಾದ: ಡಾನ್ಸರ್​ ನೋರಾ ಫತೇಹಿ ವಿರುದ್ಧ ಫತ್ವಾ ಹೊರಡಿಸಿದ ಧರ್ಮ ಗುರು! Nora Fatehi

ಪ್ರಮುಖ ಮುಖ್ಯಾಂಶಗಳು

  • ಕೆಡಿ ಸಿನಿಮಾದ ಸರ್ಸೆ ನಿನ್ನ ಸೆರಗಾ ಸರ್ಸೆ ಹಾಡಿನ ವಿವಾದ
  • ಅಶ್ಲೀಲವಾಗಿ ನರ್ತಿಸಿದ ಆರೋಪದ ಮೇಲೆ ನೋರಾ ಫತೇಹಿ ವಿರುದ್ಧ ಫತ್ವಾ ಹೊರಡಿಸಿದ ಇಸ್ಲಾಂ ಧರ್ಮ ಗುರು
  • ಈ ರೀತಿ ಅಶ್ಲೀಲವಾಗಿ ಕಾಣಿಸಿಕೊಳ್ಳುವುದು ನಮ್ಮ ಧರ್ಮದಲ್ಲಿ ಹರಾಮ್​ ಎಂದು ಫತ್ವಾ
ಉತ್ತರ ಪ್ರದೇಶ: ಜೋಗಿ ಪ್ರೇಮ್​ ನಿರ್ದೇಶನದ ಪ್ಯಾನ್​ ಇಂಡಿಯಾ ಸಿನಿಮಾ ಕೆಡಿ: ದಿ ಡೆವಿಲ್​ ಸಿನಿಮಾದ ಸರ್ಸೆ ನಿನ್ನ ಸೆರಗಾ ಸರ್ಸೆ ಹಾಡು ವಿವಾದ ಸೃಷ್ಟಿಸಿದ ನಂತರ ಈಗ ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದ ನೋರಾ ಫತೇಹಿ (Nora Fatehi) ಗೆ ಹೊಸ ಸಂಕಷ್ಟ ಒಂದು ಎದುರಾಗಿದೆ.
ಸರ್ಸೆ ನಿನ್ನ ಸೆರಗಾ ಸರ್ಸೆ ಹಾಡು ಹಾಗೂ ಇದರ ಹಿಂದಿ ವರ್ಷನ್​ ಚುನರ್​ ತೆರಾ ಸರಕೆ ಹಾಡನ್ನು ಈಗಾಗಲೇ ಬ್ಯಾನ್​ ಮಾಡಲಾಗಿದ್ದರೂ ಸಹ ಉತ್ತರ ಪ್ರದೇಶದ ಅಲಿಗಢದಲ್ಲಿರುವ ಮುಸ್ಲಿಂ ವೈಯಕ್ತಿಕ ದಾರುಲ್ ಇಫ್ತಾ, ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಫತ್ವಾ ಹೊರಡಿಸಿದೆ.

ನೋರಾ ವಿರುದ್ಧ ಫತ್ವಾ!

ನೋರಾ ವಿರುದ್ಧ ಫತ್ವಾ ಹೊರಡಿಸಿರುವ ಮುಫ್ತಿ ಮೌಲಾನಾ ಚೌಧರಿ ಇಫ್ರಾಹೀನ್ ಹುಸೇನ್, ಇಸ್ಲಾಂ ಧರ್ಮಕ್ಕೆ ಸೇರಿರುವ ನೋರಾ ಫತೇಹಿ ಈ ಹಾಡಿನಲ್ಲಿ ಅಶ್ಲೀಲವಾಗಿ ಕಾಣಿಸಿಕೊಂಡಿರುವುದು ಇಸ್ಲಾಂ ಧರ್ಮಕ್ಕೆ ಮಾಡಿರುವ ಅಪಮಾನವೆಂದು ಪರಿಗಣಿಸಿ ಫತ್ವಾ ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ರೀತಿಯ ಅಶ್ಲೀಲ ಹಾಡುಗಳಲ್ಲಿ ಭಾಗವಹಿಸುವುದು, ಆಕ್ಷೇಪಾರ್ಹ ರೀತಿಯಲ್ಲಿ ನೃತ್ಯ ಮಾಡುವುದು ಇದು ಇಸ್ಲಾಂ ಧರ್ಮದಲ್ಲಿ ಹರಾಮ್​ ಆಗಿದೆ ಎಂದು ಕುರಾನ್​ ಹೇಳುತ್ತದೆ. ಈ ಕೃತ್ಯವು ಯುವಕರು, ಮಕ್ಕಳು ಅಥವಾ ಸಾಮಾಜಿಕ ನೈತಿಕ ಮೌಲ್ಯಗಳಿಗೆ ಹಾನಿಯುಂಟು ಮಾಡುವ ಹಿನ್ನಲೆಯಲ್ಲಿ ಫತ್ವಾ ಹೊರಡಿಸಲಾಗಿದೆ.
ಇಸ್ಲಾಂ ನಮ್ರತೆ, ಗೌರವ ಮತ್ತು ಶುದ್ಧತೆಯ ಧರ್ಮವಾಗಿದೆ ಎಂದು ಫತ್ವಾ ತೀರ್ಮಾನಿಸುತ್ತದೆ. ತಮ್ಮ ನಡವಳಿಕೆ ಮತ್ತು ಬೆಂಬಲದ ಮೂಲಕ ಸಮಾಜದಲ್ಲಿ ಒಳ್ಳೆಯತನ, ಸಭ್ಯತೆ ಮತ್ತು ನೈತಿಕತೆಯನ್ನು ಉತ್ತೇಜಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಮೌಲಾನಾ ಚೌಧರಿ ಇಫ್ರಾಹೀನ್ ಹುಸೇನ್ ತಿಳಿಸಿದ್ದಾರೆ.

ನನಗೆ ಇದಕ್ಕೆ ಸಂಬಂಧವಿಲ್ಲ: ನೋರಾ

ಈ ಸೆರಗನ್ನು ಸರಿಸುವ ಹಾಡಿನ ವಿವಾದದ ಕುರಿತು ಮಾತನಾಡಿರುವ ನೋರಾ ಫತೇಹಿ, ನನಗೆ ಕನ್ನಡ ಬರುವುದಿಲ್ಲ, ನಿರ್ದೇಶಕ ಮತ್ತು ನಿರ್ಮಾಪಕರು ಏನು ಹೇಳಿದರೋ ಹಾಗೆ ಮಾಡಿದ್ದೇನೆ. ನಂತರ ಹಿಂದಿ ಭಾಷೆಯಲ್ಲಿ ಹಾಡನ್ನು ಕೇಳಿದಾಗ ನನಗೆ ಮುಜುಗರ ಎನಿಸಿದೆ.
ಅದಕ್ಕಾಗಿ ನಾನು ಈ ಸಿನಿಮಾವನ್ನು ಮತ್ತು ಈ ಹಾಡನ್ನು ಏಲ್ಲಿ ಸಹ ಪ್ರಚಾರ ಮಾಡಿಲ್ಲ. ಈ ವಿವಾದಕ್ಕೆ ನನಗೆ ಯಾವುದೇ ಸಂಬಂಧವಿಲ್ಲ. ನೀವು ಏನೇ ಕೇಳುವುದಿದ್ದರೂ ಅದನ್ನು ನಿರ್ದೇಶಕ ಹಾಗೂ ನಿರ್ಮಾಪಕರನ್ನು ಕೇಳಿ ಹಾಗೇಯೇ ನನ್ನ ತೆಜೋವಧೆ ಮಾಡುವುದನ್ನು ನಿಲ್ಲಿಸಿ ಎಂದು ನೋರಾ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ,(ಏಜನ್ಸೀಸ್​).