ಔರಾ ಟೂರ್ ಸಂಗೀತ ಕಚೇರಿಯಲ್ಲಿ ಗಾಯಕ ದಿಲ್ಜಿತ್ ದೋಸಾಂಜ್ (Diljit Dosanjh) 
ಬಾಲಿವುಡ್

ಅಭಿಮಾನಿ ಮುಂದೆ ಮೊಣಕಾಲೂರಿದ ಗಾಯಕ: ವಿಶೇಷ ಚೇತನ ಮಹಿಳೆಗಾಗಿ ದಿಲ್ಜಿತ್ ಹಾಡಿದ ಹಾಡು ಫುಲ್​ ವೈರಲ್​!Diljit Dosanjh

ಕೆನಡಾ: ಪಂಜಾಬಿ ಗಾಯಕ ಮತ್ತು ನಟ ದಿಲ್ಜಿತ್ ದೋಸಾಂಜ್ (Diljit Dosanjh) ಅಂದ್ರೆ ಬರೀ ಹಾಡು, ಕುಣಿತ ಅಷ್ಟೇ ಅಲ್ಲ, ಅಲ್ಲಿ ಪ್ರೀತಿ ಮತ್ತು ಮಾನವೀಯತೆಯೂ ಇರುತ್ತೆ ಅನ್ನೋದಕ್ಕೆ ಕೆನಡಾದ ಕ್ಯಾಲ್ಗರಿಯಲ್ಲಿ ನಡೆದ ಅವರ ಔರಾ ಟೂರ್ 2026 (Aura Tour) ಸಂಗೀತ ಕಚೇರಿ ಸಾಕ್ಷಿಯಾಗಿದೆ. ತಮ್ಮ ಅದ್ಭುತ ಧ್ವನಿಯಿಂದ ಜನರನ್ನು ರಂಜಿಸುವ ದಿಲ್ಜಿತ್, ಈ ಬಾರಿ ವೇದಿಕೆಯ ಮೇಲೆ ಮಾಡಿದ ಒಂದು ಕೆಲಸ ಈಗ ಕೋಟ್ಯಂತರ ಜನರ ಹೃದಯ ಗೆದ್ದಿದೆ.

ವೇದಿಕೆಯ ಮೇಲೆ ನಡೆದಿದ್ದೇನು?

ಸಂಗೀತ ಕಚೇರಿ ನಡೆಯುತ್ತಿದ್ದಾಗ ದಿಲ್ಜಿತ್ ಅವರು ತಮ್ಮ ಒಬ್ಬ ವಿಶೇಷ ಅಭಿಮಾನಿಯನ್ನು (ದೈಹಿಕವಾಗಿ ಅಶಕ್ತ ಯುವತಿ) ವೇದಿಕೆಯ ಮೇಲೆ ಕರೆತಂದರು. ಕೇವಲ ಕರೆತಂದಿದ್ದಷ್ಟೇ ಅಲ್ಲದೆ, ಅವರಿಗಾಗಿ ತಮ್ಮ ಜನಪ್ರಿಯ ಹಾಡು ಹ್ಯಾಸ್ ಹ್ಯಾಸ್ (Hass Hass) ಅನ್ನು ಹಾಡಲು ಶುರು ಮಾಡಿದರು. 
ಹಾಡುತ್ತಾ ದಿಲ್ಜಿತ್ ಆ ಅಭಿಮಾನಿಯ ಮುಂದೆ ಮೊಣಕಾಲು ಊರಿ ಕುಳಿತು ಗೌರವ ನೀಡಿದ ರೀತಿ ನೆರೆದಿದ್ದವರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿತು. ಆ ಅಭಿಮಾನಿಯ ಮುಖದಲ್ಲಿ ಮೂಡಿದ ನಗು ಮತ್ತು ಆನಂದ ಆ ಕ್ಷಣದ ಸೊಬಗನ್ನು ಮತ್ತಷ್ಟು ಹೆಚ್ಚಿಸಿತ್ತು.
ದಿಲ್ಜಿತ್ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಅಭಿಮಾನಿಗಳಿಂದ ಪ್ರೀತಿಯ ಮಹಾಪೂರವೇ ಹರಿದು ಬರುತ್ತಿದೆ. ಇದು ನಿಜವಾದ ಸ್ಟ್ರಾರ್​ಡಂ  (Stardom), ಅವರ ಮಾನವೀಯತೆ ಎಲ್ಲಕ್ಕಿಂತ ದೊಡ್ಡದು, ಇವರು ನಿಜವಾದ ರಾಜ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಕಿರಣ್ ಧಲಿವಾಲ್ ಎಂಬ ಅಭಿಮಾನಿಯ ಕನಸನ್ನು ದಿಲ್ಜಿತ್ ನನಸು ಮಾಡಿದ್ದಾರೆ ಎಂದು ಅವರ ಹಿತೈಷಿಗಳು ಧನ್ಯವಾದ ಅರ್ಪಿಸಿದ್ದಾರೆ.

ರೆಕಾರ್ಡ್ ಬ್ರೇಕ್ ಮಾಡ್ತಿದೆ ಔರಾ ಟೂರ್

ದಿಲ್ಜಿತ್ ಅವರ ಈ ಸಂಗೀತ ಪ್ರವಾಸ ಏಪ್ರಿಲ್ 23 ರಂದು ವ್ಯಾಂಕೋವರ್‌ನಲ್ಲಿ ಅದ್ದೂರಿಯಾಗಿ ಪ್ರಾರಂಭವಾಯಿತು. ಕೆನಡಾದ ಹಲವು ನಗರಗಳಲ್ಲಿ ಪ್ರದರ್ಶನ ನೀಡುತ್ತಿರುವ ಅವರು, ಮೇ 2 ರಂದು ಎಡ್ಮಂಟನ್ ಮತ್ತು ಮೇ 7 ರಂದು ವಿನ್ನಿಪೆಗ್‌ನಲ್ಲಿ ಅಬ್ಬರಿಸಲಿದ್ದಾರೆ. ಮೇ ಅಂತ್ಯದವರೆಗೆ ಕೆನಡಾ ಮತ್ತು ಅಮೆರಿಕದ ಪ್ರಮುಖ ನಗರಗಳಾದ ನ್ಯೂಯಾರ್ಕ್, ಲಾಸ್ ಏಂಜಲೀಸ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋಗಳಲ್ಲಿ ದಿಲ್ಜಿತ್ ಅವರ ಗಾಯನ ಪ್ರತಿಧ್ವನಿಸಲಿದೆ.
ವರದಿಗಳ ಪ್ರಕಾರ, ದಿಲ್ಜಿತ್ ಅವರ ಸಂಗೀತ ಪ್ರವಾಸಗಳು ಬರೋಬ್ಬರಿ 943 ಕೋಟಿ ರೂಪಾಯಿಗಳ ಆದಾಯ ಗಳಿಸಿವೆ ಎನ್ನಲಾಗುತ್ತಿದೆ. ಇದು ಭಾರತೀಯ ಕಲಾವಿದನೊಬ್ಬನ ಜಾಗತಿಕ ಮಟ್ಟದ ಅತಿದೊಡ್ಡ ಸಾಧನೆಗಳಲ್ಲಿ ಒಂದಾಗಿದೆ.

ಸಿನಿಮಾ ರಂಗದಲ್ಲೂ ದಿಲ್ಜಿತ್ ದರ್ಬಾರ್

ಸಂಗೀತದ ಜೊತೆಗೆ ದಿಲ್ಜಿತ್ ನಟನೆಯಲ್ಲೂ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಬಾರ್ಡರ್ 2 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿಗೂ ಹೆಚ್ಚು ಹಣ ಗಳಿಸಿ ದಾಖಲೆ ಬರೆದಿದೆ. ಮುಂದೆ ಇಮ್ತಿಯಾಜ್ ಅಲಿ ಅವರ ನಿರ್ದೇಶನದ ಮೈನ್ ವಾಪಸ್ ಆವುಂಗಾ ಸಿನಿಮಾದಲ್ಲಿ ದಿಲ್ಜಿತ್ ಕಾಣಿಸಿಕೊಳ್ಳಲಿದ್ದಾರೆ. ಜೂನ್ 12 ರಂದು ಈ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ,(ಏಜನ್ಸೀಸ್​).