ಕಪಿಲ್ ಶರ್ಮಾ ಅವರ 'ಕ್ಯಾಪ್ಸ್ ಕೆಫೆ' ಮೇಲೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ (Bishnoi Gang Attack on Kapil Sharma) ಗುಂಡಿನ ದಾಳಿ  
ಬಾಲಿವುಡ್

ಕಪಿಲ್ ಶರ್ಮಾ ಕೆಫೆ ಮೇಲೆ ಶೂಟೌಟ್: ಸಲ್ಮಾನ್ ಖಾನ್ ಸ್ನೇಹಕ್ಕೆ ಬಿಷ್ಣೋಯ್ ಗ್ಯಾಂಗ್ ಮುನಿಸು! Bishnoi Gang Attack on Kapil Sharma

ಕೆನಡಾ: ಭಾರತದ ಜನಪ್ರಿಯ ಹಾಸ್ಯನಟ ಕಪಿಲ್ ಶರ್ಮಾ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದಾ ನಗು ಹಂಚುವ ಈ ಕಾಮಿಡಿ ಕಿಂಗ್‌ಗೆ ಈಗ ಭೂಗತ ಲೋಕದ ನಡುಕ ಶುರುವಾಗಿದೆ. ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಕಪಿಲ್ ಶರ್ಮಾ ಅವರ ಕ್ಯಾಪ್ಸ್ ಕೆಫೆ (Kaps Cafe) ಬಳಿ ಮತ್ತೊಮ್ಮೆ ಗುಂಡಿನ ಸದ್ದು ಕೇಳಿಬಂದಿದ್ದು, ಇದರ ಹಿಂದೆ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡವಿದೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ಸಲ್ಮಾನ್ ಖಾನ್ ಜೊತೆಗಿನ ಸ್ನೇಹವೇ ಮುಳುವಾಯ್ತಾ?

ಮೂಲಗಳ ಪ್ರಕಾರ, ಈ ಎಲ್ಲಾ ಗಲಾಟೆಗೆ ಕಾರಣ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್(Bishnoi Gang Attack on Kapil Sharma)! ಹೌದು, ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಉದ್ಘಾಟನೆಗೆ ಕಪಿಲ್ ಶರ್ಮಾ ಅವರು ಸಲ್ಮಾನ್ ಖಾನ್ ಅವರನ್ನು ಆಹ್ವಾನಿಸಿದ್ದರು. ಇದು ಬಿಷ್ಣೋಯ್ ಗ್ಯಾಂಗ್ ಅನ್ನು ಕೆರಳಿಸಿದೆ ಎನ್ನಲಾಗಿದೆ.
1998ರ ಕೃಷ್ಣಮೃಗ ಬೇಟೆ ಪ್ರಕರಣದಿಂದ ಸಲ್ಮಾನ್ ಮೇಲೆ ದ್ವೇಷ ಸಾಧಿಸುತ್ತಿರುವ ಲಾರೆನ್ಸ್ ಬಿಷ್ಣೋಯ್ ನೆಟ್‌ವರ್ಕ್, ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುವವರು ಅಥವಾ ಸಂಬಂಧ ಇಟ್ಟುಕೊಳ್ಳುವವರು ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ತಪ್ಪಿಸಿಕೊಳ್ಳಿ ಎಂದು ಎಚ್ಚರಿಕೆ!

ಸೋಷಿಯಲ್ ಮೀಡಿಯಾದಲ್ಲಿ ಟೈಸನ್ ಬಿಷ್ಣೋಯ್ ಜೋರಾ ಸಿಧು ಎಂಬ ಹೆಸರಿನ ಖಾತೆಯಿಂದ ವೈರಲ್ ಆಗಿರುವ ಪೋಸ್ಟ್ ಈಗ ಕಪಿಲ್ ಶರ್ಮಾ ನಿದ್ದೆ ಗೆಡಿಸಿದೆ. ಕಪಿಲ್ ಶರ್ಮಾ ಸಮಯ ವ್ಯರ್ಥ ಮಾಡುತ್ತಿದ್ದಾರೆ, ಈಗಲೇ ತಪ್ಪಿಸಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ಕೆಫೆಗಳು ಇದೇ ರೀತಿಯ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಗ್ಯಾಂಗ್ ಬಹಿರಂಗವಾಗಿಯೇ ಬೆದರಿಕೆ ಹಾಕಿದೆ. ಕೆಫೆ ಮಾಲೀಕರಿಗೂ ಕೂಡ ಜೀವ ಬೆದರಿಕೆ ಇದೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಒಂದಲ್ಲ, ಎರಡಲ್ಲ.. ಇದು ನಾಲ್ಕನೇ ಬಾರಿ!

ಕಪಿಲ್ ಶರ್ಮಾ ಅವರ ಕೆಫೆಯನ್ನು ಗುರಿಯಾಗಿಸಿಕೊಂಡಿರುವುದು ಇದೇ ಮೊದಲೇನಲ್ಲ. 2025ರಲ್ಲಿ ಇದು ಒಂದು ಭಯಾನಕ ಮಾದರಿಯಾಗಿ ಬದಲಾಗಿದೆ
ಜುಲೈ 10, 2025 ರಲ್ಲಿ ಕೆಫೆ ಆರಂಭವಾದ ಕೆಲವೇ ದಿನಗಳಲ್ಲಿ ಮೊದಲ ಬಾರಿ ಗುಂಡಿನ ದಾಳಿ ನಡೆಸಲಾಗಿತ್ತು. ಅಗಸ್ಟ್ 7, 2025 ರಲ್ಲಿ ಎರಡನೇ ಬಾರಿ ಗುಂಡಿನ ಮಳೆ ಸುರಿಸಲಾಯಿತು.
ನಂತರ ಅಕ್ಟೋಬರ್ 15-16, 2025: ಮೂರನೇ ಬಾರಿ ಕೆಫೆಯನ್ನು ಗುರಿಯಾಗಿಸಲಾಯಿತು. ಈಗ ಕೆಫೆ ಪಕ್ಕದಲ್ಲೇ ಇರುವ ಚಾಯ್ ಸುಟ್ಟಾ ಬಾರ್ ಬಳಿ ಮತ್ತೆ ಗುಂಡಿನ ಚಕಮಕಿ ನಡೆದಿದ್ದು, ಇದು ಕಪಿಲ್ ಶರ್ಮಾ ಅವರ ಭದ್ರತೆಯ ಬಗ್ಗೆ ದೊಡ್ಡ ಪ್ರಶ್ನೆ ಮೂಡಿಸಿದೆ.

ಕಪಿಲ್ ಶರ್ಮಾ ಪ್ರತಿಕ್ರಿಯೆ ಏನು?

ತಮ್ಮ ಕಿಸ್ ಕಿಸ್ಕೋ ಪ್ಯಾರ್ ಕರೂ 2 ಚಿತ್ರದ ಟ್ರೇಲರ್ ಲಾಂಚ್ ವೇಳೆ ಈ ಬಗ್ಗೆ ಮಾತನಾಡಿದ್ದ ಕಪಿಲ್, ಅಲ್ಲಿನ ನಿಯಮಗಳಿಗೆ ಮತ್ತು ಪೊಲೀಸರಿಗೆ ಇಂತಹ ಘಟನೆಗಳನ್ನು ತಡೆಯುವ ಶಕ್ತಿ ಇಲ್ಲದಿರಬಹುದು ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು. ಸತತವಾಗಿ ನಡೆಯುತ್ತಿರುವ ಈ ದಾಳಿಗಳು ಕೇವಲ ಆಕಸ್ಮಿಕವಲ್ಲ, ಇದೊಂದು ವ್ಯವಸ್ಥಿತ ಸಂಚು ಎಂಬುದು ಈಗ ಸ್ಪಷ್ಟವಾಗುತ್ತಿದೆ, (ಏಜನ್ಸೀಸ್​).