ಉದ್ಯಮಿ ಲಲಿತ್​ ಮೋದಿ ಹಾಗೂ ವಿಶ್ವ ಸುಂದರಿ ಸುಶ್ಮಿತಾ ಸೇನ್​ ನಡುವಿನ ಸಂಬಂಧ 
ಬಾಲಿವುಡ್

ಅವಳು ನನ್ನ ಹಣ ನೋಡಿ ಬರಲಿಲ್ಲ..ಆಕೆ ಹತ್ತಿರ ಇರುವಷ್ಟು ವಜ್ರಗಳು ಯಾರ ಬಳಿಯೂ ಇಲ್ಲ: ಸುಶ್ಮಿತಾ ಸೇನ್ ಜೊತೆಗಿನ ಸಂಬಂಧದ ಬಗ್ಗೆ ಮೌನ ಮುರಿದ ಲಲಿತ್​ ಮೋದಿ! Lalit Modi on Sushmita Sen

ಪ್ರಮುಖ ಮುಖ್ಯಾಂಶಗಳು

  • ಉದ್ಯಮಿ ಲಲಿತ್​ ಮೋದಿ ಹಾಗೂ ವಿಶ್ವ ಸುಂದರಿ ಸುಶ್ಮಿತಾ ಸೇನ್​ ನಡುವಿನ ಸಂಬಂಧ
  • ಅವಳೆಂದು ನನ್ನ ಹಣವನ್ನು ನೋಡಿ ಸ್ನೇಹ ಮಾಡಲಿಲ್ಲ
  • ನಾನೇ ಅವಳು ಇಟ್ಟುಕೊಂಡ ಬಾಯ್​ಫ್ರೆಂಡ್​ ಆಗಿದ್ದೆ
  • ನಾನು ಒಂದೇ ಒಂದು ಸಲವೂ ಬಿಲ್​ ಪಾವಯಿಸಿಲ್ಲ
  • ಆದರೆ ಪಾಪ ಅವಳಿಗೆ ಎಲ್ಲರೂ ಗೋಲ್ಡ್​ ಡಿಗ್ಗರ್​ ಎಂದು ಕರೆದರು
ಲಂಡನ್​: 2022 ರ ಸಮಯದಲ್ಲಿ ಉದ್ಯಮಿ ಲಲಿತ್​ ಮೋದಿ, ವಿಶ್ವ ಸುಂದರಿ ಖ್ಯಾತಿಯ ಸುಶ್ಮಿತಾ ಸೇನ್ ಜೊತೆ ಸಂಬಂಧವಿದೆ ಎಂದು ನೀಡಿದ್ದ ಹೇಳಿಕೆ ಅಂದು ದೇಶದಾದ್ಯಂತ ಸಂಚಲನಕ್ಕೆ ಕಾರಣವಾಗಿತ್ತು.
ಆ ಸಂದರ್ಭದಲ್ಲಿ ಸುಶ್ಮಿತಾ ಸೇನ್​ಳನ್ನು ಜನ ದುಡ್ಡನ್ನ ನೋಡಿಕೊಂಡು ಮುದುಕನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾಳೆ ಇವಳೊಬ್ಬ ಗೋಲ್ಡ್​ ಡಿಗ್ಗರ್​ ಎಂದು ಜರಿದಿದ್ದರು. ನಂತರ 2025 ರಲ್ಲಿ ಲಲಿತ್​, ಸುಶ್ಮಿತಾ ಜೊತೆಗೆ ಬ್ರೇಕ್​ಅಫ್​ ಆಗಿದೆ ಎಂದು ಹೇಳಿದ್ದರು.
ಇತ್ತೀಚೆಗೆ ಯೂಟ್ಯೂಬ್​ ಚಾನೆಲ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಲಲಿತ್​ ಮೋದಿ (Lalit Modi on Sushmita Sen) ತಮ್ಮ ಹಾಗೂ ಸುಶ್ಮಿತಾ ಸೇನ್​ ನಡುವಿನ ಸಂಬಂಧದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

ಅವಳು ನಾನು ಮೆಚ್ಚಿದ ಹೆಣ್ಣು!

ಸುಶ್ಮಿತಾ ಸೇನ್​ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿರುವ ಲಲಿತ್​ ಮೋದಿ, ಸುಶ್ಮಿತಾ ನನಗೆ ಬಹಳ ಹತ್ತಿರವಾಗಿದ್ದಳು, ನನ್ನ ಜೀವನದಲ್ಲಿ ಅವಳಿಕೆ ಯಾವತ್ತಿಗೂ ವಿಶೇಷ ಸ್ಥಾನ ಇದ್ದೇ ಇರುತ್ತದೆ. ಆದರೆ ನಮ್ಮ ಸಂಬಂಧವನ್ನು ಸಂಭಾಳಿಸಿಕೊಂಡು ಹೋಗುವಲ್ಲಿ ನಾವು ಎಡವಿದ ಕಾರಣ ನಮ್ಮ ಸಂಬಂಧ ಕೊನೆಗೊಂಡಿತು ಎಂದಿದ್ದಾರೆ.
ನಾನು ಮತ್ತು ಸುಶ್ಮಿತಾ ಜೊತೆಯಲ್ಲಿದ್ದವೆ ಎಂದು ಜನರಿಗೆ ತಿಳಿದಾಗ ಪಾಪ ಅವಳಿಗೆ ಬಹಳ ಸಮಸ್ಯೆಯಾಯಿತು. ಅವಳನ್ನು ಗೋಲ್ಡ್​ ಡಿಗ್ಗರ್​ ಎಂದು ಕರೆದರು. ನನ್ನ ದುಡ್ಡನ್ನು ನೋಡಿ ನನ್ನ ಜೊತೆ ಇದ್ದಾಳೆಂದು ಹಂಗಿಸಿದರು. ಆದರೆ ನಮ್ಮಿಬ್ಬರ ನಡುವೆ ಅಂತಸ್ತನ್ನು ಮೀರಿದ ಭಾಂದವ್ಯವಿತ್ತೆಂದು ಮೋದಿ ತಿಳಿಸಿದ್ದಾರೆ.

ಸಂಬಂಧ ಮುರಿದ್ದಿದ್ದೇಕೆ?

ಎಲ್ಲಾ ಚೆನ್ನಾಗಿದ್ದರೂ ಸಂಬಂಧ ಮುರಿಯಲು ಕಾರಣ ಏನೆಂದು ಕೇಳಿದಾಗ, ನಮ್ಮಿಬ್ಬರ ನಡುವೆ ಅಂತರ ತುಂಬಾ ದೂರವಾಗಿತ್ತು. ಅವಳು ಭಾರತದಲ್ಲಿ ತನ್ನ ನಟನೆ ಬಗ್ಗೆ, ಸಿನಿಮಾ ಬಗ್ಗೆ ಗಮನ ಹರಿಸುತ್ತಿದ್ದಳು. ಆದರೆ ನನ್ನ ಎಲ್ಲಾ ಉದ್ಯಮವು ಲಂಡನ್​ನಲ್ಲಿರುವ ಕಾರಣ ನಾವು ನಮ್ಮ ಸಂಬಂಧಕ್ಕೆ ಕೊನೆ ಹಾಡ ಬೇಕಾಯಿತು ಎಂದು ಹೇಳಿದ್ದಾರೆ.
ಆದರೆ ಅವಳು ಎಂದಿಗೂ ನನ್ನ ಹಣವನ್ನು ನೋಡಿ ನನ್ನ ಜೊತೆಗಿರಲಿಲ್ಲ. ನನಗೆ ತಿಳಿದಿರುವಂತೆ ಸುಶ್ಮಿತಾ ಹತ್ತಿರ ಇರುವಷ್ಟು ವಜ್ರಗಳು ಈ ಭೂಮಿ ಮೇಲೆ ಯಾರ ಹತ್ತಿರವೂ ಇಲ್ಲ. ಇವೆಲ್ಲವನ್ನು ಆಕೆ ತನ್ನ ಸ್ವಂತ ಬಲದಿಂದ ಸಂಪಾದಿಸಿದ್ದಾಳೆ. ಅವಳ ಜೊತೆ ಹೊರಗೆ ಹೋದಾಗ ಒಂದು ಭಾರಿ ಕೂಡ ನಾನು ಬಿಲ್​ ಪಾವತಿಸಿಲ್ಲ. ಹಾಗೆ ನೋಡಿದರೆ ನಾನು ಅವಳು ಇಟ್ಟುಕೊಂಡ ಬಾಯ್​ಫ್ರೆಂಡ್​ ಆಗಿದ್ದೆ ಎಂದು ಮೋದಿ ಹೇಳಿದ್ದಾರೆ,(ಏಜನ್ಸೀಸ್​).