ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಬಾಲ್ಯದ ರಹಸ್ಯವೊಂದನ್ನು ಬಿಚ್ಚಿಟ್ಟ ಹಿರಿಯ ನಟ ಪಂಕಜ್ ಕಪೂರ್  
ಬಾಲಿವುಡ್

NSD ಕ್ಯಾಂಟಿನ್‌ನಲ್ಲಿ ಸಮೋಸ ಮಾರುತ್ತಿದ್ದ ಶಾರುಖ್ ಖಾನ್: ಕಿಂಗ್ ಖಾನ್ ಬಾಲ್ಯದ ರಹಸ್ಯ ಬಿಚ್ಚಿಟ್ಟ ಹಿರಿಯ ನಟ ಪಂಕಜ್ ಕಪೂರ್! Pankaj Kapur about Shah Rukh Khan

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಬಾಲ್ಯದ ರಹಸ್ಯವೊಂದನ್ನು ಬಿಚ್ಚಿಟ್ಟ ಹಿರಿಯ ನಟ ಪಂಕಜ್ ಕಪೂರ್
  • ಎನ್‌ಎಸ್‌ಡಿ ಕ್ಯಾಂಟಿನ್‌ನಲ್ಲಿ ಸಮೋಸ ಮಾರುತ್ತಿದ್ದ ಶಾರುಖ್ ಖಾನ್​
  • ನಟ ಶಾರುಖ್ ಖಾನ್ ತಂದೆಯ ಕ್ಯಾಂಟಿನ್ ದಿನಗಳ ನೆನಪು ಹಂಚಿಕೊಂಡ ನಟ ಪಂಕಜ್ ಕಪೂರ್
ಮುಂಬೈ: ಬಾಲಿವುಡ್​ನಲ್ಲಿ ಕಿಂಗ್​ ಖಾನ್​, ಬಾದ್​ಶಾ ಆಫ್​ ಬಾಲಿವುಡ್​ ಮೊದಲಾದ ಹೆಸರುಗಳಿಂದ ಜನಜನಿತನಾದ ನಟನೆಂದರೆ ಅದು ಶಾರುಖ್ ಖಾನ್.
ತಮ್ಮ ಮನೋಜ್ಞ ಅಭಿನಯ, ಡೈಲಾಗ್​ ಡೆಲಿವರಿ ಹಾಗೂ ರೊಮಾನ್ಸ್​ ಮೂಲಕವೇ ಯುವಕರ ಮನದಲ್ಲಿ ಅಚ್ಚಳಿಯದಂತೆ ಉಳಿದಿರುವ ನಟರಲ್ಲಿ ಶಾರುಖ್ ಖಾನ್ ಕೂಡ ಒಬ್ಬರು.
ಇತ್ತೀಚೆಗೆ ಯುಟ್ಯೂಬ್​ ಚಾನೆಲ್​ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿರುವ ಹಿರಿಯ ನಟ ಪಂಕಜ್​ ಕಪೂರ್​​, ಶಾರುಖ್ ಖಾನ್ (Pankaj Kapur about Shah Rukh Khan) ಬಗ್ಗೆ ಸಾಮಾನ್ಯವಾಗಿ ಯಾರಿಗೂ ತಿಳಿಯದೇ ಇರುವ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ.

ಸಮೋಸ ಮಾರುತ್ತಿದ್ದ ಶಾರುಖ್​!

ಕಳೆದ ಕೆಲ ದಿನಗಳಿಂದ ಬಾಲಿವುಡ್​ನ ಹಿರಿಯ ನಟ ಪಂಕಜ್​ ಕಪೂರ್​, ಶಾರುಖ್ ಖಾನ್ ಬಗ್ಗೆ ನೀಡಿರುವ ಹೇಳಿಕೆಯೊಂದು ಸಖತ್​ ವೈರಲ್​ ಆಗುತ್ತಿದೆ.
ಸಂದರ್ಶನದಲ್ಲಿ ನಮ್ಮ ನ್ಯಾಷನಲ್​ ಸ್ಕೂಲ್​ ಆಫ್​ ಡ್ರಾಮಾದ ದಿನಗಳ ಬಗ್ಗೆ ಮಾತನಾಡುತ್ತಾ ಪಂಕಜ್​ ಕಪೂರ್​, ತಾವು ನ್ಯಾಷನಲ್​ ಎನ್​ಎಸ್​ಡಿಯಲ್ಲಿ ಕಲಿಯುತ್ತಿದ್ದಾಗ ಅಲ್ಲಿ ನಟ ಶಾರುಖ್​ ಖಾನ್​ ಅವರ ತಂದೆ ಕ್ಯಾಂಟಿನ್​ ನಡೆಸುತ್ತಿದ್ದರು.
ಆಗ ಶಾರುಖ್​ಗೆ ಹೆಚ್ಚು ಕಡಿಮೆ 10 ವರ್ಷ ಇರಬೇಕು. ನಾವು ನಾಟಕದ ತಾಲೀಮು ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದಾಗ ನಮಗೆ ಶಾರುಖ್​ ಅನೇಕ ಸಹ ಸಮೋಸ, ಕಚೋರಿ ಮತ್ತು ಚಹವನ್ನು ನೀಡಲು ಬರುತ್ತಿದ್ದನೆಂದು ಹೇಳಿದ್ದಾರೆ.

ಯಾರು ಈ ಪಂಕಜ್​ ಕಪೂರ್​?

ಬಾಲಿವುಡ್‌ನ ಅತ್ಯಂತ ಪ್ರತಿಭಾವಂತ ಮತ್ತು ಹಿರಿಯ ನಟರಲ್ಲಿ ಪಂಕಜ್ ಕಪೂರ್ ಪ್ರಮುಖರಾಗಿದ್ದಾರೆ. ರಂಗಭೂಮಿ, ದೂರದರ್ಶನ ಮತ್ತು ಸಿನಿಮಾ ರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಇವರು ಮೂಡಿಸಿದ್ದಾರೆ.
ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (NSD) ಪದವೀಧರರಾದ ಪಂಕಜ್ ಕಪೂರ್, 1980ರ ದಶಕದಲ್ಲಿ ಶ್ಯಾಮ್ ಬೆನೆಗಲ್ ಅವರ ಆರೋಹಣ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ರಿಚರ್ಡ್ ಅಟೆನ್‌ಬರೋ ಅವರ ಪ್ರಸಿದ್ಧ ಗಾಂಧಿ ಸಿನಿಮಾದಲ್ಲಿ ಮಹಾತ್ಮ ಗಾಂಧಿಯವರ ಕಾರ್ಯದರ್ಶಿ ಪ್ಯಾರೇಲಾಲ್ ಪಾತ್ರಕ್ಕೆ ಧ್ವನಿ ನೀಡುವ ಮೂಲಕ ಮತ್ತು ನಟಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದರು.
ಜಾನೆ ಭಿ ದೋ ಯಾರೋ, ರಾಕ್ಡ್ ಮತ್ತು ವಿಲಿಯಂ ಶೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್ ಆಧಾರಿತ ಮಕ್ಬೂಲ್ ಚಿತ್ರದಲ್ಲಿ ಇವರು ನಿರ್ವಹಿಸಿದ ಅಬ್ಬಾಜಿ ಪಾತ್ರ ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಅತ್ಯುತ್ತಮ ನಟನೆಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ.
ಇವರ ಅದ್ಭುತ ನಟನಾ ಕೌಶಲ್ಯಕ್ಕಾಗಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳು ಸಂದಿವೆ. ಬಾಲಿವುಡ್‌ನ ಇಂದಿನ ಮುಂಚೂಣಿ ನಟರಾದ ಶಾಹಿದ್ ಕಪೂರ್ ಇವರ ಮೊದಲ ಪತ್ನಿ ನೀಲಿಮಾ ಅಜೀಮ್ ಅವರ ಮಗನಾಗಿದ್ದು, ನಟಿ ಸುಪ್ರಿಯಾ ಪಾಠಕ್ ಪಂಕಜ್​ ಕಪೂರ್​ ಅವರ ಎರಡನೇ ಪತ್ನಿಯಾಗಿದ್ದಾರೆ, (ಏಜನ್ಸೀಸ್​).