- ರಾಮನು ಕರುಣೆ, ಧೈರ್ಯ ಗೌರವದ ಸಂಕೇತ ಎಂದ ರಣಬೀರ್ ಕಪೂರ್
- ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ರಾಮಾಯಣ ಚಿತ್ರದ ಝಲಕ್ ಪ್ರದರ್ಶನ
- ದೀಪಾವಳಿಯ ದಿನದಂದು ರಾಮಾಯಣ ಸಿನಿಮಾ ದರ್ಶನವಾಗುವ ಸಾಧ್ಯತೆ
Ramayana Cinema Teaser: ರಾಮನು ಧೈರ್ಯ, ಕರುಣೆಯ ಸಂಕೇತ. ನಾವು ಈ ಭೂಮಿ ಮೇಲಿನಿಂದ ನಶಿಸಿ ಹೋದರೂ ಸಹ ಅವರ ಗುಣಗಾನ ಜೀವಂತವಾಗಿರುತ್ತದೆ" ಅಮೆರಿಕದ ಲಾಸ್ ಏಂಜಲೀಸ್ನಲ್ಲಿ(America Los Angeles ) ನಡೆದ ರಾಮಾಯಾಣ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ ವೇಳೆ ನಟ ರಣಬೀರ್ ಅವರು ವಿದೇಶಿ ಮಾಧ್ಯಮಗಳ ಮುಂದೆ ಮಾತನಾಡಿದ್ದು ಹೀಗೆ.
ಏ.2ರಂದು ಟೀಸರ್ ರಿಲೀಸ್
ನಿತೀಶ್ ತಿವಾರಿ ನಿರ್ಮಾಣದ ಬಹು ನಿರೀಕ್ಷಿತ ಸಿನಿಮಾ ರಾಮಾಯಣ ಬಿಡುಗಡೆಗೆ ಸಜ್ಜಾಗುತ್ತಿದೆ. ಏಪ್ರಿಲ್ 2ರ ಹನುಮ ಜಯಂತಿಯಂದು ಅಧಿಕೃತವಾಗಿ ಟೀಸರ್ ಬಿಡುಗಡೆಯಾಗಲಿದೆ ಎಂದು ಲಾಸ್ ಏಂಜಲೀಸ್ನಲ್ಲಿ ಚಿತ್ರತಂಡ ಹೇಳಿದೆ. ಸಿನಿಮಾದ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಉತ್ತಮ ಪ್ರತಿಕ್ರಿಯೆಗಳು ಕೇಳಿಬರುತ್ತಿವೆ
ರಣ್‌ಬೀರ್ ಕಪೂರ್, ನಿತೇಶ್ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ರಾವಣನ ಪಾತ್ರದಲ್ಲಿ ನಟಿಸಿರುವ ಯಶ್ ಕಾಣಿಸಿಕೊಳ್ಳದೇ ಇರುವುದು ಅಭಿಮಾನಿಗಲ್ಲಿ ಬೇಸರವನ್ನು ಹುಟ್ಟುಹಾಕಿದೆ. ನಟಿ ಸಾಯಿಪಲ್ಲವಿ ಅವರು ಸೀತೆಯ ಪಾತ್ರದಲ್ಲಿ ಮಿಂಚಿದ್ದಾರೆ.
ರಾಮಾಯಣ ಸಿನಿಮಾಗಾಗಿ ಅಂದಾಜು 4000 ಕೋಟಿ ರೂ. ವೆಚ್ಚ ಮಾಡಲಾಗಿದೆ. ಸದ್ಯ 2 ನಿಮಿಷ 38 ಸೆಕೆಂಡ್‌ಗಳ ಟೀಸರ್ ಬಿಡುಗಡೆಗೆ ಸಿದ್ಧತೆ ನಡೆದಿದೆ ಎನ್ನಲಾಗಿದೆ. ಲಾಸ್ ಏಂಜಲೀಸ್ ನಲ್ಲಿ ನಡೆದ ವಿಶೇಷ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನಟ ರಣಬೀರ್ ಕಪೂರ್, ಶ್ರೀರಾಮನ ಪಾತ್ರ ನಿರ್ವಹಿಸುತ್ತಿರುವ ಬಗ್ಗೆ ಮತ್ತು ಆ ಪಾತ್ರದ ಮಹತ್ವದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ರಾಮನ ಜಪ ಮುಂದಿನ ಶತಮಾನದವರೆಗೂ ಇರುತ್ತೆ
ಕಾರ್ಯಕ್ರಮದಲ್ಲಿ ರಣಬೀರ್ ಕಪೂರ್ ಮಾತನಾಡಿದ್ದು ಹೀಗೆ "ಶ್ರೀರಾಮ ಕೇವಲ ಒಂದು ಪಾತ್ರವಲ್ಲ, ಅವರು ಶತಶತಮಾನಗಳಿಂದ ಜಗತ್ತಿನ ಕೋಟ್ಯಂತರ ಜನರ ಅಂತಃಸಾಕ್ಷಿಯ ರಕ್ಷಕ .ನಾವು ಈ ಭೂಮಿಯಿಂದ ಅಜ್ಞಾತ ಸ್ಥಿತಿಗೆ ಅಥವಾ ಸಂಪೂರ್ಣ ನಶಿಸಿ ಹೋದ ಮೇಲೂ ಅವರು ಜನರ ಮನಸ್ಸಿನಲ್ಲಿ ಹಾಗೆಯೇ ಉಳಿಯುತ್ತಾರೆ ಎಂದರು.
ರಾಮನಿಗೆ ಮರ್ಯಾದ ಪುರುಷೋತ್ತಮ ಅನ್ನೋದ್ಯಾಕೆ ಗೊತ್ತಾ?
"ಕಷ್ಟದ ಸಮಯದಲ್ಲಿ ಮನುಷ್ಯನ ಮನೋಬಲ ಹೇಗಿರಬೇಕು ಎಂಬುದನ್ನು ರಾಮನು ಕಲಿಸಿಕೊಡುತ್ತಾರೆ. ಕರುಣೆ, ಧೈರ್ಯ, ಧರ್ಮ ಮತ್ತು ಕ್ಷಮಾ ಗುಣದ ಸಂಕೇತ. ಅದಕ್ಕಾಗಿಯೇ ಅವರನ್ನು 'ಮರ್ಯಾದಾ ಪುರುಷೋತ್ತಮ' ಎಂದು ಕರೆಯಲಾಗುತ್ತದೆ" ಎಂದು ತಿಳಿಸಿದರು.
ತಂತ್ರಜ್ಞಾನದ ಮೂಲಕ ಮಹಾಕಾವ್ಯದ ದರ್ಶನ
ನಮಿತ್ ಮಲ್ಹೋತ್ರಾ ಅವರ 'ಪ್ರೈಮ್ ಫೋಕಸ್ ಸ್ಟುಡಿಯೋಸ್' ನಿರ್ಮಾಣದ ಈ ಚಿತ್ರವು ಭಾರತದ ಶ್ರೇಷ್ಠ ಐತಿಹಾಸಿಕ ಕತೆಯನ್ನು ಇಂದಿನ ಪೀಳಿಗೆಗೆ ಆಧುನಿಕ ತಂತ್ರಜ್ಞಾನದ ಮೂಲಕ ತಲುಪಿಸುವ ಪ್ರಯತ್ನ. ಚಿತ್ರದ ಮೊದಲ ಭಾಗದ ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದ್ದು, ಎರಡನೇ ಭಾಗದ ಕೆಲಸಗಳು ಶೀಘ್ರದಲ್ಲೇ ಆರಂಭವಾಗಲಿವೆ ಎಂದು ತಂಡ ಹೇಳಿಕೊಂಡಿದೆ, (ಏಜೆನ್ಸೀಸ್).