ಪ್ರಿಯಾಂಶ್ ಆರ್ಯಾ ಹೊಟ್ಟೆಗೆ ಪಂಚ್ ಕೊಟ್ಟ ಪ್ರೀತಿ ಜಿಂಟಾ
- ದೆಹಲಿ ವಿರುದ್ಧ ಗೆದ್ದು ಬೀಗಿದ ಪಂಜಾಬ್ ಕಿಂಗ್ಸ್
- ಪ್ರಿಯಾಂಶ್ ಆರ್ಯಾ ಹೊಟ್ಟೆಗೆ ಪಂಚ್ ಕೊಟ್ಟ ಪ್ರೀತಿ ಜಿಂಟಾ
- ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
ದೆಹಲಿ: ನಿನ್ನೆ (ಏ.25) ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ಅತ್ಯಂತ ರೋಚಕ ಹಾಗೂ ಅಮೋಘ ಪಂದ್ಯವೊಂದಕ್ಕೆ ನಿನ್ನೆ ಸಾಕ್ಷಿಯಾಯಿತು. ದೆಹಲಿ ಕ್ಯಾಪಿಟಲ್ಸ್ ತಂಡ ನೀಡಿದ್ದ 264 ಬೃಹತ್ ಮೊತ್ತವನ್ನು ಪಂಜಾಬ್ ಕಿಂಗ್ಸ್ ತಂಡ ಕೇವಲ 18.5 ಓವರ್ಗಳಲ್ಲಿ ಗುರಿಯನ್ನು ತಲುಪುವ ಮೂಲಕ ಭರ್ಜರಿ ಜಯವನ್ನು ಗಳಿಸಿತು.
ಪ್ರಿಯಾಂಶ್ ಹೊಟ್ಟೆಗೆ ಪಂಚ್ ಕೊಟ್ಟ ಜಿಂಟಾ!
ಪಂದ್ಯ ಮುಗಿದ ನಂತರ, ಮೈದಾನಕ್ಕೆ ಬಂದ ಪಂಜಾಬ್ ಕಿಂಗ್ಸ್ ಮಾಲಕಿ, ಬಾಲಿವುಡ್ ನಟಿ ಪ್ರೀತಿ ಜಿಂಟಾ (Preity Zinta) ತಂಡದ ಆಟಗಾರರಿಗೆ ಶುಭಾಯಶವನ್ನು ಕೋರಿದ್ದಾರೆ. ಹಾಗೆಯೇ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದ ಓಪನಿಂಗ್ ಬ್ಯಾಟರ್ ಪ್ರಿಯಾಂಶ್ ಆರ್ಯಾ ಜೊತೆಗೆ ಮಾತನಾಡುತ್ತಾ ಪ್ರೀತಿ, ಪ್ರಿಯಾಂಶ್ನ ಹೊಟ್ಟೆಗೆ ತಮಾಷೆಯಾಗಿ ಒಂದು ಪಂಚ್ ಕೊಟ್ಟಿದ್ದಾರೆ. ಇದನ್ನು ಗಮನಿಸಿದ ಕಮೆಂಟೆಟರ್ ರವಿ ಶಾಸ್ತ್ರೀ, ಇದೊಂದು ಅದ್ಭುತವಾದ ಪಂಚ್ (Oh, that was a good punch) ಎಂದಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ ತಂಡದ ಪರ, ಕೆ.ಎಲ್. ರಾಹುಲ್ ಕೇವಲ 67 ಎಸೆತಗಳಿಗೆ ಅಜೇಯ 152 ರನ್ ಗಳಿಸುವ ಮೂಲಕ ಈ ಅತಿ ಹೆಚ್ಚು ರನ್ಗಳಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರೊಟ್ಟಿಗೆ ನಿತೀಶ್ ರಾಣಾ 91 ರನ್ ಗಳಿಸಿ ಉಳಿದ ಆಟಗಾರರ ಸಹಕಾರದಿಂದ ದೆಹಲಿ ತಂಡ ನಿಗಧಿತ ಓವರ್ಗಳಲ್ಲಿ 264 ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಿತು.
ಸಂಘಟಿತ ಹೋರಾಟದಿಂದ ಗೆದ್ದ ಪಂಜಾಬ್!
265 ರನ್ಗಳ ಬೃಹತ್ ಮೊತ್ತದ ಚೇಸಿಂಗ್ ಆರಂಭಿಸಿದ ಪಂಜಾಬ್ ಬ್ಯಾಟರ್ಗಳು ಸಂಘಟಿತ ಹೋರಾಟ ತೋರಿದರು. ಓಪನರ್ಗಳಾದ ಪ್ರಿಯಾಂಶ್ ಆರ್ಯಾ 17 ಎಸೆತಗಳಲ್ಲಿ 43 ರನ್ ಗಳಿಸಿದರೆ ಪ್ರತ್ಸಿಮ್ರನ್ ಸಿಂಗ್ 26 ಬಾಲಗಳಿಗೆ 76 ರನ್ ಚಚ್ಚಿದರು. ನಂತರ ನಾಯಕ ಶ್ರೇಯಸ್ ಅಯ್ಯರ್ 36 ಎಸೆಗಳಲ್ಲಿ ಅಜೇಯ 71 ಗಳಿಸಿದರೆ ನೆಹಾಲ್ ವಡೇರಾ 15 ಬಾಲಗಲ್ಲಿ 25 ರನ್ಗಳಿಸಿ ತಂಡದ ಗೆಲುವಿಗೆ ಕಾರಣರಾದರು, (ಏಜನ್ಸೀಸ್).