ಪೂನಂ ಪಾಂಡೆ ಗರ್ಭಿಣಿನಾ? ಹಲವರ ಪ್ರಶ್ನೆಗೆ ಕೊನೆಗೂ ಉತ್ತರ ನೀಡಿದ ಬಾಲಿವುಡ್​ ಬಿಚ್ಚಮ್ಮ! Poonam Pandey  
ಬಾಲಿವುಡ್

ಪೂನಂ ಪಾಂಡೆ ಗರ್ಭಿಣಿನಾ? ಹಲವರ ಪ್ರಶ್ನೆಗೆ ಕೊನೆಗೂ ಉತ್ತರ ನೀಡಿದ ಬಾಲಿವುಡ್​ ಬಿಚ್ಚಮ್ಮ! Poonam Pandey

ಪ್ರಮುಖ ಮುಖ್ಯಾಂಶಗಳು

  • ವಿವಾದಿತ ಮಾಡೆಲ್​ ಹಾಗೂ ಜನಪ್ರಿಯ ಬಾಲಿವುಡ್​ ನಟಿ ಪೂನಂ ಪಾಂಡೆ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ
  • ಎರಡು ದಿನಗಳ ಹಿಂದೆ ಪೂನಂ ಪಾಂಡೆ ಅವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದರು
  • ಆ ಫೋಟೋಗಳಲ್ಲಿ ಒಂದರಲ್ಲಿ ತಾವು ಧರಿಸಿದ್ದ ಬಿಳಿ ಬಣ್ಣದ ಟೀ-ಶರ್ಟ್​ ಅನ್ನು ಮೇಲೆತ್ತಿ ಬೇಬಿ ಬಂಪ್​ ಪ್ರದರ್ಶಿಸಿದ್ದರು
  • ಪೂನಂ ನಿಜಕ್ಕೂ ಗರ್ಭಿಣಿನಾ ಎಂಬ ಅನೇಕರ ಪ್ರಶ್ನೆಗೆ ಕೊನೆಗೂ ಮೌನ ಮುರಿದ ಬಾಲಿವುಡ್​ ಬಿಚ್ಚಮ್ಮ
Poonam Pandey : ಸಾಮಾಜಿಕ ಜಾಲತಾಣದಲ್ಲಿ ಪಡ್ಡೆ ಹುಡುಗರ ಎದೆ ಝಲ್​ ಎನಿಸುವಂತಹ ಫೋಟೋ ಮತ್ತು ವಿಡಿಯೋಗಳನ್ನು ಆಗಾಗ ಶೇರ್​ ಮಾಡಿಕೊಳ್ಳುತ್ತಾ ಸದಾ ಸುದ್ದಿಯಲ್ಲಿರುವ ವಿವಾದಿತ ಮಾಡೆಲ್​ ಹಾಗೂ ಜನಪ್ರಿಯ ಬಾಲಿವುಡ್​ ನಟಿ ಪೂನಂ ಪಾಂಡೆ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಎರಡು ದಿನಗಳ ಹಿಂದೆ ಪೂನಂ ಪಾಂಡೆ ಅವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದರು. ಆ ಫೋಟೋಗಳಲ್ಲಿ ಒಂದರಲ್ಲಿ ಬಾಲಿವುಡ್​ ಬಿಚ್ಚಮ್ಮ ಪೂನಂ, ತಾವು ಧರಿಸಿದ್ದ ಬಿಳಿ ಬಣ್ಣದ ಟೀ-ಶರ್ಟ್​ ಅನ್ನು ಮೇಲೆತ್ತಿ ಬೇಬಿ ಬಂಪ್​ ಪ್ರದರ್ಶಿಸಿದ್ದರು. ಇನ್ನೊಂದು ಫೋಟೋದಲ್ಲಿ ಅದೇ ಟೀ-ಶರ್ಟ್​ನಲ್ಲಿ ಹೊಟ್ಟೆಯನ್ನು ಮುಚ್ಚಿ ಬೇಬಿ ಬಂಪ್​ ಪ್ರದರ್ಶಿಸಿದ್ದರು. ತಮ್ಮ ಫೋಟೋಗಳಿಗೆ ಯಾವುದೇ ಅಡಿಬರಹ ನೀಡದ ಪೂನಂ, ಗರ್ಭಿಣಿಯ ಎಮೋಜಿ ಜತೆಗೆ ಹಾಲಿನ ಬಾಟೆಲ್​ ಹಾಗೂ ಮಗುವಿನ ಎಮೋಜಿಯನ್ನು ಪೋಸ್ಟ್​ ಮಾಡಿದ್ದರು.
ಪೂನಂ ಹಂಚಿಕೊಂಡ ಎರಡೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂರೆ, ಅದನ್ನು ನೋಡಿದ ಅಭಿಮಾನಿಗಳು ಹಾಗೂ ನೆಟ್ಟಿಗರು ಯಾವ ಗ್ಯಾಪ್​ನಲ್ಲಿ ಪೂನಂ ಗರ್ಭಿಣಿಯಾದರು? ಮದುವೆ ಆಗದೆಯೇ ಗರ್ಭಿಯಾದರೇ? ನಿಜಕ್ಕೂ ಪೂನಂ ಗರ್ಭ ಧರಿಸಿದ್ದಾರೆಯೇ ಅಥವಾ ಏಪ್ರಿಲ್​ ಫೂಲ್​ ಮಾಡುವ ಉದ್ದೇಶವೇ? ಎಂದೆಲ್ಲ ಪ್ರಶ್ನೆಗಳ ಸುರಿಮಳೈದಿದ್ದಾರೆ.
ಈ ಪ್ರಶ್ನೆಗಳಿಗೆ ಪೂನಂ ಉತ್ತರ ನೀಡುತ್ತಾರಾ ಎಂದು ಅಭಿಮಾನಿಗಳು ಕಾದು ಕುಳಿತಿದ್ದರು. ಇದೀಗ ಕೊನೆಗೂ ಪೂನಂ ಮೌನ ಮುರಿದಿದ್ದಾರೆ. ಬೇಬಿ ಬಂಪ್ ಪ್ರದರ್ಶನದ ಹಿಂದಿರುವ ತಮ್ಮ ಉದ್ದೇಶ ಏನು ಅನ್ನೋದನ್ನು ತಿಳಿಸಿದ್ದಾರೆ.
ತಮ್ಮ ಇನ್​ಸ್ಟಾಗ್ರಾಂನಲ್ಲಿ ಮತ್ತೊಂದು ವಿಡಿಯೋ ಹಂಚಿಕೊಂಡಿರುವ ಪೂನಂ ಪಾಂಡೆ, ಗಯ್ಸ್​ ನಿಮ್ಮೆಲ್ಲರ ಶುಭ ಹಾರೈಕೆಗಳಿಗೆ ತುಂಬಾ ಧನ್ಯವಾದಗಳು. ಆದರೆ, ನಾನು ಗರ್ಭಿಣಿಯಲ್ಲ. ಇದು ಏಪ್ರಿಲ್​ ಫೂಲ್​ ಜೋಕ್ಸ್​ ಎಂದು ಪೂನಂ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ತಮ್ಮ ಮಾತು ಮುಂದುವರಿಸಿರುವ ಪೂನಂ, ಈ ಒತ್ತಡದ ಸಮಯದಲ್ಲಿ ಜನರನ್ನು ರಂಜಿಸುವುದು ನನ್ನ ಏಕೈಕ ಉದ್ದೇಶ ಎಂದಿದ್ದಾರೆ. 
ಪ್ರಸ್ತುತ ಜಾಗತಿಕವಾಗಿ ನಡೆಯುತ್ತಿರುವ ಯುದ್ಧಗಳು ಮತ್ತು ಜಾಗತಿಕ ಸಂಘರ್ಷಗಳನ್ನು ಉಲ್ಲೇಖಿಸಿರುವ ಪೂನಂ, ಇಂಥಾ ಸಮಯದಲ್ಲಿ ನಿಮಗೆ ಮನರಂಜನೆ ನೀಡುವುದೇ ನನ್ನ ಕೆಲಸ. ಇದನ್ನು ಗಂಭೀರವಾಗಿ ಪರಿಗಣಿಸಬೇಡಿ. ಆರಾಮಾಗಿರಿ, ಲೈಫ್​ನಲ್ಲಿ ಚಿಲ್​ ಮಾಡಿ ಎಂದು ತಮ್ಮ ಫಾಲೋವರ್ಸ್​ ಹಾಗೂ ಅಭಿಮಾನಿಗಳಿಗೆ ಪೂನಂ ಪಾಂಡೆ ಸಂದೇಶ ರವಾನಿಸಿದ್ದಾರೆ.
ಪೂನಂ ಪಾಂಡೆಯ ಸ್ಪಷ್ಟನೆ ವಿಡಿಯೋಗೆ ನೂರಾರು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ. ಬಹುತೇಕ ಮಂದಿ ನಟಿಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಯುದ್ಧದಿಂದಾಗಿ ದೇಶದಲ್ಲಿ ಅನೇಕ ಸಮಸ್ಯೆಗಳು ಎದುರಾಗಿವೆ. ಈ ಸಮಯದಲ್ಲಿ ಇದೆಲ್ಲ ಬೇಕಾ ಎಂದಿದ್ದಾರೆ. ಓರ್ವ ನೆಟ್ಟಿಗನಂತೂ ನೀನು ಮಾಡಿರುವ ಈ ಗರ್ಭಿಣಿ ಪ್ರಾಂಕ್​ಗಿಂತಲೂ ಈ ಹಿಂದೆ ನೀವು ಸಾವಿನ ಬಗ್ಗೆ ಮಾಡಿದ ಚೇಷ್ಟೆ ಹೆಚ್ಚು ಮನರಂಜನೆ ನೀಡಿತು ಎಂದು ಕಾಮೆಂಟ್​ ಮಾಡಿದ್ದಾನೆ. 

ಸಾವಿನ ಸುದ್ದಿ ಪೋಸ್ಟ್​ ಮಾಡಿದ್ದ ಪಾಂಡೆ

ಅಂದಹಾಗೆ ಪೂನಂ ಪಾಂಡೆ ಸದಾ ಜನರ ಗಮನ ಸೆಳೆಯಲು ಮತ್ತು ಪ್ರಚಾರದಲ್ಲಿರಲು ಅನೇಕ ಸಾಹಸಗಳನ್ನು ಮಾಡುತ್ತಿರುತ್ತಾರೆ. 2024, ಫೆ.1ರಂದು ಪೂನಂ ತಮ್ಮ ಸಾವಿನ ಸುದ್ದಿಯನ್ನು ಹಬ್ಬಿಸಿದ್ದರು. ಪೂನಂ ಪಾಂಡೆ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಸಾವಿನ ಬಗ್ಗೆ ತಿಳಿಸಲಾಗಿತ್ತು. ಗರ್ಭಕಂಠದ ಕ್ಯಾನ್ಸರ್​ನಿಂದ ಮೃತಪಟ್ಟಿದ್ದಾರೆ ಎಂದು ಎಲ್ಲ ಮಾಧ್ಯಮಗಳು ಸುದ್ದಿ ಮಾಡಿದ್ದವು. ಆಕೆಯ ಮ್ಯಾನೇಜರ್​ ಕೂಡ ಸಾವಿನ ಸುದ್ದಿ ಖಚಿತಪಡಿಸಿದ್ದ. ಆದರೆ, ಮರುದಿನ ಆಕೆ ಜೀವಂತವಾಗಿರುವುದಾಗಿ ಖಚಿತಪಡಿಸಿದರು. ನಾನಿನ್ನೂ ಬದುಕಿದ್ದೇನೆ. ಗರ್ಭಕಂಠದ ಕ್ಯಾನ್ಸರ್​ ಬಗ್ಗೆ ಜಾಗ್ರತೆ ಇರಲಿ. ಅದಕ್ಕಾಗಿ ಈ ವಿಡಿಯೋ ಮಾಡಿದೆ ಎಂದು ಹೇಳಿದ್ದರು. ಈ ಘಟನೆ ಬಳಿಕ ಪೂನಂ ಸಾಕಷ್ಟು ಟ್ರೋಲ್​ಗೆ ಗುರಿಯಾಗಿದ್ದರು, (ಏಜೆನ್ಸೀಸ್​).