ಮೊದಲ ಸಿನಿಮಾ ಧಡಕ್ನಿಂದ ಖಿನ್ನತೆಗೆ ಜಾರಿದ್ದ ನಟಿ
- ರಾಜ್ ಶಮಾನಿ ಪಾಡ್ಕಾಸ್ಟ್ನಲ್ಲಿ ನಟಿ ಜಾನ್ವಿ ಕಪೂರ್
- ತಾಯಿ ಶ್ರೀದೇವಿ ಸಾವಿನ ಬಗ್ಗೆ ಮಾತನಾಡಿದ ಜಾನ್ವಿ
- ಮೊದಲ ಸಿನಿಮಾ ಧಡಕ್ನಿಂದ ಖಿನ್ನತೆಗೆ ಜಾರಿದ್ದ ನಟಿ
ಬಾಲಿವುಡ್: ಇತ್ತೀಚೆಗೆ ಯೂಟ್ಯೂಬರ್ ರಾಜ್ ಶಮಾನಿ ಅವರೊಂದಿಗೆ ನಡೆಸಿದ ಸಂವಾದ (ಪಾಡ್ಕಾಸ್ಟ್) ನಲ್ಲಿ ನಟಿ ಜಾನ್ವಿ ಕಪೂರ್ ತಮ್ಮ ಬಾಲ್ಯ, ತಾಯಿ ಮತ್ತು ಬಾಲಿವುಡ್ನಲ್ಲಿ ತಮ್ಮ ಅನುಭವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಧಡಕ್ ನಂತರ ನಾನು ಖಿನ್ನತೆಗೆ ಒಳಗಾಗಿದ್ದೆ!
ತಮ್ಮ ಮೊದಲ ಸಿನಿಮಾ ಧಡಕ್ ಬಗ್ಗೆ ಮಾತನಾಡಿದ ಜಾನ್ವಿ (Janhvi Kapoor on Dhadak), ಈಗ ಯಾರೇ ನನ್ನನ್ನು ಮೀಟ್ ಆದರೂ ಅವರು ನಾನು ನಿಮ್ಮ ಧಡಕ್ ಸಿನಿಮಾವನ್ನು ನೋಡಿದ್ದೆನೆ, ಸಿನಿಮಾ ಬಹಳ ಚೆನ್ನಾಗಿತ್ತು. ನೀವು ಬಹಳ ಹಣ ಗಳಿಸಿರಬೇಕಲ್ವಾ? ಎಂದೆಲ್ಲಾ ಕೇಳುತ್ತಾರೆ.
ಆದರೆ ನನ್ನ ಪಾಲಿಗೆ ಧಡಕ್ ಒಂದು ಕರಾಳ ಅಧ್ಯಾಯವಾಗಿದೆ. ಏಕೆಂದರೆ ಈ ಸಿನಿಮಾ ಬಿಡುಗಡೆಯಾದಾಗ, ಜನ ನನ್ನನ್ನು ಯಾವ ಮಟ್ಟದಲ್ಲಿ ತಿರಸ್ಕಾರ ಮಾಡಿದ್ದಾರೆಂದು ನನಗೆ ಗೊತ್ತಿದೆ. ಧಡಕ್ ನಂತರ ನನ್ನ ಸಿನಿ ಜೀವನ ಇಲ್ಲಿಗೆ ಮುಗಿಯಿತು, ನನ್ನ ಪ್ಯಾಕ್ಅಫ್ ಆಗಿದೆ ಎಂದು ನಾನು ತಿಳಿದಿದ್ದೆ. ಇದರಿಂದ ನಾನು ಬಹಳ ಖಿನ್ನತೆಯನ್ನು ಅನುಭವಿಸಿದ್ದೆನೆ ಎಂದು ಜಾನ್ವಿ ಹೇಳಿದ್ದಾರೆ.
ನಾನು ನನ್ನ ತಾಯಿಯನ್ನು ಕಳೆದುಕೊಂಡೆ
ಈ ಸಿನಿಮಾದ ಬಿಡುಗಡೆಗೆ ಮುನ್ನ ನಾನು ನನ್ನ ತಾಯಿ (ಶ್ರೀದೇವಿ) ಯನ್ನು ಕಳೆದುಕೊಂಡೆ. ನನ್ನ ಜೀವನದಲ್ಲಿ ಅಲ್ಲಿವೆರೆಗೆ ನನ್ನ ಮಾರ್ಗದರ್ಶಕಿಯಾಗಿ ಇದ್ದವಳು ಅವಳೇ ಆಗಿದ್ದಳು. ಅವಳ ಸಾವಿನ ಬಳಿಕ ನನ್ನ ಬಗ್ಗೆ ದೃಢೀಕರಣವನ್ನು (Validation) ನೀಡಲು ಜನ ಮುಂದಾಗುತ್ತಾರೆ ಎಂದು ನಾನು ಭಾವಿಸಿದ್ದೆ. ಜನ ನನ್ನ ಮೊದಲ ಸಿನಿಮಾ ನೋಡಿ ನನ್ನನ್ನು ಮೆಚ್ಚಿಕೊಳ್ಳುತ್ತಾರೆ ಎಂದು ನಾನು ತಿಳಿದಿದ್ದೆ, ಆದರೆ ಜನ ನನ್ನನ್ನು ಎಷ್ಟು ತಿರಸ್ಕಾರ ಮಾಡಿದರೆಂದರೆ ನಾನು ಸಂಪೂರ್ಣವಾಗಿ ಕುಗ್ಗಿಹೋದೆ ಎಂದು ಜಾನ್ವಿ ನೋವನ್ನು ಹಂಚಿಕೊಂಡಿದ್ದಾರೆ.
ಧಡಕ್ ಬಗ್ಗೆ
ಧಡಕ್ 2018ರಲ್ಲಿ ಬಿಡುಗಡೆಯಾದ ಹಿಂದಿ ಭಾಷೆಯ ರೋಮ್ಯಾಂಟಿಕ್ ಡ್ರಾಮಾ ಚಲನಚಿತ್ರವಾಗಿದ್ದು, ಇದನ್ನು ಶಶಾಂಕ್ ಖೇತಾನ್ ನಿರ್ದೇಶಿಸಿದ್ದಾರೆ. ಈ ಸಿನಿಮಾವು ಮರಾಠಿಯ ಸೂಪರ್ ಹಿಟ್ ಚಿತ್ರ 'ಸೈರಾಟ್' ನ ಅಧಿಕೃತ ರಿಮೇಕ್ ಆಗಿದೆ. ಈ ಚಿತ್ರದ ಮೂಲಕ ಖ್ಯಾತ ನಟಿ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು ಮತ್ತು ಅವರಿಗೆ ಜೋಡಿಯಾಗಿ ಇಶಾನ್ ಕಟ್ಟರ್ ನಟಿಸಿದ್ದರು.
ಈ ಸಿನಿಮಾವು 40 ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗಿದ್ದು, ಸುಮಾರು 110 ಕೋಟಿ ಕಲೆಕ್ಷನ್ ಮಾಡಿತ್ತು. ಆದರೆ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಬಂದ ಕಾರಣ ಇದು ಸೈರಾಟ್ ಕಂಡ ಯಶಸ್ಸನ್ನು ಕಾಣುವಲ್ಲಿ ವಿಫಲವಾಯಿತು, (ಏಜನ್ಸೀಸ್).