ನಾನು ಲವ್ ಜಿಹಾದ್ ಬಗ್ಗೆ ಮಾತನಾಡಿದಕ್ಕೆ ನನ್ನ ಮೇಲೆ ಸುಳ್ಳ ಆರೋಪ ಮಾಡಲಾಗುತ್ತಿದೆ ಎಂದ ನಿರ್ದೇಶಕ
- ಮೊನಾಲಿಸಾಳ ಮದುವೆ ಲವ್ ಜಿಹಾದ್ ಎಂದಿದ್ದ ಸನೋಜ್ ಮಿಶ್ರಾ
- ಶೂಟಿಂಗ್ ವೇಳೆ ಮಿಶ್ರಾ ನನ್ನ ಮೈ ಮುಟ್ಟುತಿದ್ದ ಎಂದ ಮೊನಾಲಿಸಾ ಭೋಸ್ಲೆ
- ನಾನು ಲವ್ ಜಿಹಾದ್ ಬಗ್ಗೆ ಮಾತನಾಡಿದಕ್ಕೆ ನನ್ನ ಮೇಲೆ ಸುಳ್ಳ ಆರೋಪ ಮಾಡಲಾಗುತ್ತಿದೆ ಎಂದ ನಿರ್ದೇಶಕ
- ಮೊನಾಲಿಸಾ ಮಾಡಿರವ ಆರೋಪಗಳೆಲ್ಲವೂ ಆಧಾರ ರಹಿತ ಹಾಗೂ ಸಂಪೂರ್ಣ ಸುಳ್ಳೆಂದ ಸನೋಜ್ ಮಿಶ್ರಾ
ನವದೆಹಲಿ: ಕುಂಭಮೇಳದಲ್ಲಿ ತನ್ನ ವಿಶಿಷ್ಟ ಕಣ್ಣುಗಳ ಮೂಲಕ ಮಣಿ ಸರಗಳನ್ನು ಮಾರುವ ಮೂಲಕ ಸಾಮಾಜಿಕ ಮಾಧ್ಯದಲ್ಲಿ ವೈರಲ್ ಆಗಿದ್ದ ಮೊನಾಲಿಸಾ ಭೋಸ್ಲೆ ಅಲಿಯಾಸ್ ಕುಂಭಮೇಳ ಗರ್ಲ್ ಈಗ ತನ್ನ ಮದುವೆ ಸುದ್ದಿ ಮೂಲಕ ಮತ್ತೊಮ್ಮೆ ಮುನ್ನಲೆಗೆ ಬಂದಿದ್ದಾಳೆ.
ಕೆಲ ದಿನದ ಹಿಂದೆ ಉತ್ತರ ಪ್ರದೇಶದ ಫರ್ಮಾನ್ ಖಾನ್ ಎಂಬ ಯುವಕನನ್ನು ಮೊನಾಲಿಸಾ ಮದುವೆಯಾದ ನಂತರ ಹಲವಾರು ಅಪಾದನೆಗಳು ಈ ಜೋಡಿಯ ಮೇಲೆ ಭರಲಾರಂಭಿಸಿದವು. ಮೊನಾಲಿಸಾ ಲವ್ ಜಿಹಾದ್ಗೆ ಬಲಿಯಾಗಿದ್ದಾಳೆ ಎಂದು ಫರ್ಮಾನ್ ಖಾನ್ನನ್ನು ಕೊಲ್ಲುವುದಾಗಿ ಬೆದರಿಕೆ ಸಹ ಬರುತ್ತಿವೆ ಎಂದು ಮೊನಾಲಿಸಾ ದುಃಖ ತೋಡಿಕೊಂಡಿದ್ದಳು.
ಮೊನಾಲಿಸಾ ಸುಳ್ಳು ಆರೋಪ ಮಾಡುತ್ತಿದ್ದಾಳೆ!
ಇತ್ತೀಚೆಗೆ ಮೊನಾಲಿಸಾ ಪತ್ರಿಕಾಗೋಷ್ಠಿಯೊಂದರಲ್ಲಿ ನಿರ್ದೇಶಕ ಸನೋಜ್ ಮಿಶ್ರಾ (Sanoj Mishra to Monalisa) ನೀಡಿರುವ ಹೇಳಿಕೆ ಎಲ್ಲಾ ಸುಳ್ಳು ನಾನು ಯಾವುದೇ ಲವ್ ಜಿಹಾದ್ಗೆ ಬಲಿಯಾಗಿಲ್ಲ, ಬದಲಿಗೆ ಈ ಸನೋಜ್ ಮಿಶ್ರಾ ಶೂಟಿಂಗ್ ಸಂದರ್ಭದಲ್ಲಿ ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದ ಎಂದು ಆರೋಪಿಸಿದ್ದಾಳೆ.
ಮೊನಾಲಿಸಾಳ ಆರೋಪಕ್ಕೆ ಉತ್ತರ ನೀಡಿರುವ ಸನೋಜ್ ಮಿಶ್ರಾ, ಇಕೆ ನನ್ನ ಮೇಲೆ ಮಾಡುತ್ತಿರುವ ಆರೋಪಗಳೆಲ್ಲಾ ಸುಳ್ಳಾಗಿದೆ. ನಾನು ಲವ್ ಜಿಹಾದ್ ಮತ್ತು ಒತ್ತಾಯಪೂರ್ವಕ ಮತಾಂತರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಕಾರಣ ಕೇರಳದ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಮತಾಂತರಿಗಳು ನನ್ನ ಮೇಲೆ ಈ ಮೊನಾಲಿಸಾಳನ್ನು ಎತ್ತಿ ಕಟ್ಟಿದ್ದಾರೆ ಎಂದು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಮೊನಾಲಿಸಾ ಮತ್ತು ಸನೋಜ್ ಮಿಶ್ರಾ ಸಂಬಂಧ
ಈ ಮೊನಾಲಿಸಾ ಕುಂಭಮೇಳದಲ್ಲಿ ಖ್ಯಾತಿ ಗಳಿಸಿದ ನಂತರ ಸಿನಿಮಾ ನಿರ್ದೇಶಕ ಸನೋಜ್ ಮಿಶ್ರಾ ಮೊನಾಲಿಸಾಳನ್ನು ಹಾಕಿಕೊಂಡು ಸಿನಿಮಾವೊಂದನ್ನು ಮಾಡಲು ಮುಂದಾಗಿದ್ದರು. ಈಗ ಇಕೆ ಮದುವೆಯಾದ ಹಿನ್ನಲೆ ಈ ಸಿನಿಮಾ ಅರ್ಧಕ್ಕೆ ನಿಂತು ಹೋಗಿದೆ. ಮೊನಾಲಿಸಾಳ ಮದುವೆ ಕುರಿತು ಹೇಳಿಕೆ ನೀಡಿದ್ದ ಸನೋಜ್ ಮಿಶ್ರಾ, ಇದು ಲವ್ ಜಿಹಾದ್ಗೆ ತಾಜಾ ಉದಾಹರಣೆಯಾಗಿದೆ. ಇದು ನಿಜವಾದ ಕೇರಳ ಸ್ಟೋರಿ ಎಂದು ಅವರು ಹೇಳಿದ್ದರು.
ಮೊನಾಲಿಸಾ ಮಾಡಿದ ಆರೋಪವೇನು?
ಇದಕ್ಕೆ ಕೌಂಟರ್ ಕೊಟ್ಟ ಮೊನಾಲಿಸಾ, ಸನೋಜ್ ಮಿಶ್ರಾರ ಚಾರಿತ್ರ್ಯದ ಬಗ್ಗೆ ಆರೋಪ ಮಾಡಿದ್ದು, ನಿರ್ದೇಶಕ ಮಿಶ್ರಾ ಸಿನಿಮಾ ಸೆಟ್ನಲ್ಲಿ ನನ್ನ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ, ಪದೇ ಪದೇ ನನ್ನ ದೇಹವನ್ನು ಮುಟ್ಟುತ್ತಿದ್ದ. ಇದು ನನ್ನ ಮೊದಲ ಸಿನಿಮಾವಾಗಿದ್ದ ಹಿನ್ನಲೆ ಇದನ್ನೆಲ್ಲ ನಾವು ಮೌನವಾಗಿ ಸಹಿಒಸಿಕೊಂಡಿದ್ದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮೊನಾಲಿಸಾ ಬೇಸರ ಹೊರಹಾಕಿದ್ದರು,(ಏಜನ್ಸೀಸ್).