Ananya Panday Bharatanatyam dance troll
- 'ಚಾಂದ್ ಮೇರಾ ದಿಲ್'ಚಿತ್ರದಲ್ಲಿ ಭರತನಾಟ್ಯ ನೃತ್ಯ ಮಾಡಿರುವ ನಟಿ ಅನನ್ಯಾ ಪಾಂಡೆ
- ಅನನ್ಯಾ ಪಾಂಡೆ ಭರತನಾಟ್ಯ ಮಾಡಿದ ಸ್ಟೈಲ್ಗೆ ನೆಟ್ಟಿಗರು ಕಿಡಿ, ವ್ಯಾಪಕ ಟೀಕೆ ವ್ಯಕ್ತ
- 'ಚಾಂದ್ ಮೇರಾ ದಿಲ್' ಚಿತ್ರವು ಕರಣ್ ಜೋಹರ್ ಅವರ ಧರ್ಮಾ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣ
- ಶಾಸ್ತ್ರೀಯ ನೃತ್ಯಕ್ಕೆ ಗೌರವ ಮತ್ತು ಘನತೆ ಸಿಗಲೇಬೇಕು ಎಂದ ನೆಟ್ಟಿಗರು
Ananya Panday Bharatanatyam dance troll: ಮೇ.22ರಂದು ರಿಲೀಸ್ ಆಗಿದ್ದ ಚಾಂದ್ ಮೇರಾ ದಿಲ್ ಸಿನಿಮಾದಲ್ಲಿ ನಟಿ ಅನನ್ಯಾ ಪಾಂಡೆ ಅವರ ಭರತ ನಾಟ್ಯ ದೃಶ್ಯವೊಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ಗೆ ಕಾರಣವಾಗಿದೆ.
ಕರಣ್ ಜೋಹರ್ ನಿರ್ಮಾಣದ 'ಚಾಂದ್ ಮೇರಾ ದಿಲ್' ಸಿನಿಮಾ ಈಗಾಗಲೇ ಸಿನಿಮಾ ಮಂದಿರಗಳಲ್ಲಿ ಧೂಳೆಬ್ಬಿಸಿದೆ. ಇಲ್ಲಿಯವರೆಗೂ ಭಾರತದಲ್ಲಿ ಒಟ್ಟು ಸರಿಸುಮಾರು 9.08 ಕೋಟಿಯಿಂದ 12 ಕೋಟಿವರೆಗೂ ಬಾಕ್ಸ್ ಆಫೀಸ್ನಲ್ಲಿ ಗಳಿಕೆ ಮಾಡಿಕೊಂಡಿದೆ. ಈ ಮಧ್ಯೆ ಟ್ರೋಲ್ ಆಗುತ್ತಿರುವುದು ಅನನ್ಯಾ ಪಾಂಡೆಯವರ ದೃಶ್ಯ.
ಅನನ್ಯಾ ಪಾಂಡೆಯವರು ಭರತನಾಟ್ಯಂ ಡ್ರೆಸ್ನಲ್ಲಿದ್ದಾರೆ. ಅವರ ಹಿಂದೆ ನಟರಾಜನ ಮೂರ್ತಿ ಇದೆ. ಅವರು ವೇದಿಕೆ ಮೇಲೆ ಪರ್ಫಾಮೆನ್ಸ್ ಮಾಡುತ್ತಿದ್ದಾರೆ, ಅವರ ಮುಂದೆ ನಾಯಕ ನಟ ಲಕ್ಷ್ಯ, ಅಂಕುರ್ ಸೇರಿದಂತೆ ಹಲವರು ನೆರೆದಿರುತ್ತಾರೆ. ಇದು ಸಿನಿಮಾದ ಒಂದು ತುಣುಕು. ಅದರಲ್ಲಿ ಭರತನಾಟ್ಯ ಉಡುಪಿನಲ್ಲಿ ನೃತ್ಯ ಮಾಡಲು ವಿಚಿತ್ರವಾಗಿ ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
ನೆಟ್ಟಿಗರ ವಾದವೇನು?
ಭರತ ನಾಟ್ಯ ಪ್ರಕಾರಕ್ಕೆ ಅಗತ್ಯವಿರುವ ಮುದ್ರೆಗಳು, ಮುಖದ ಅಭಿವ್ಯಕ್ತಿಗಳು, ಹೆಜ್ಜೆಗಳು ಅವರ ನೃತ್ಯದಲ್ಲಿ ಕಂಡುಬಂದಿಲ್ಲ ಒಳ್ಳೆ ಡಿಸ್ಕೋ ಡ್ಯಾನ್ಸ್ನಂತೆ ತಾಳ-ಮೇಳ, ಲಯ-ಬದ್ಧ ಪರ್ಫಾಮ್ ಮಾಡಿದ್ದಾರೆ ಎಂದು ನೆಟ್ಟಿಗರು, ನೃತ್ಯ ಪ್ರೇಮಿಗಳು ಕಿಡಿಕಾರಿದ್ದಾರೆ.
ಅನನ್ಯಾ ಪಾಂಡೆ 2000 ವರ್ಷಗಳ ಸುದೀರ್ಘ ಇತಿಹಾಸವಿರುವ ಭರತನಾಟ್ಯದ ವೈಭವಯುತ ಪರಂಪರೆಯನ್ನು ತೆರೆಯ ಮೇಲೆ ಸಂಪೂರ್ಣವಾಗಿ ಒಂದು ಜೋಕ್ ತರಹ ಮಾಡಿಬಿಟ್ಟಿದ್ದಾರೆ. ಈ ಅತಿರೇಕದ ಪ್ರದರ್ಶನಕ್ಕಾಗಿ ಭವಿಷ್ಯದಲ್ಲಿ ಯಾರಾದರೂ ಅನನ್ಯಾ ವಿರುದ್ಧ ಕೇಸ್ ದಾಖಲಿಸಿದರೂ ನನಗೆ ಆಶ್ಚರ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಅನನ್ಯಾ ಪಾಂಡೆಯವರನ್ನು ಯಾರಾದರು ದಯವಿಟ್ಟು ನೃತ್ಯ ಮಾಡುವುದನ್ನು ನಿಲ್ಲಿಸಲು ಹೇಳಿ. ಅವರ ಹಿಂದೆ ನಟರಾಜನ ಮೂರ್ತಿಯನ್ನಿಟ್ಟುಕೊಂಡು ಈ ರೀತಿ ಕೆಟ್ಟ ಪ್ರದರ್ಶನ ಕೊಡುವ ಧೈರ್ಯ ಇದೆಯಲ್ಲಾ... ಎಂದು ಟ್ರೋಲ್ ಮಾಡುತ್ತಿದ್ದಾರೆ.
ಟೀಕೆಗಳ ಸರಮಾಲೆ
ಕ್ರಿಸ್ತ ಪೂರ್ವ 200ರಲ್ಲಿ ಉಗಮವಾದ ಭರತನಾಟ್ಯವೆಂಬ ಶಾಸ್ತ್ರೀಯ ಕಲೆಯನ್ನು 2026ರಲ್ಲಿ ನಟಿ ಅನನ್ಯಾ ಪಾಂಡೆ ಮೂಲಕ ಅಂತ್ಯಗೊಂಡಿತು ಎಂದು ಲೇವಡಿ ಮಾಡಿದ್ದಾರೆ.
"ಯಾವುದೇ ಸರಿಯಾದ ತರಬೇತಿ ಇಲ್ಲದೆ ಶಾಸ್ತ್ರೀಯ ನೃತ್ಯ ಪ್ರಕಾರವನ್ನು ಈ ರೀತಿ ಅಪಹಾಸ್ಯ ಮಾಡುವುದು ಸರಿಯಲ್ಲ" ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಕೆಲವರು, "ಬಾಲಿವುಡ್‌ನಲ್ಲಿ ಸ್ಟಾರ್ ಕಿಡ್ಸ್‌ಗಳಿಗೆ ಕನಿಷ್ಠ ತರಬೇತಿಯೂ ಇಲ್ಲದೆ ಇಂತಹ ದೊಡ್ಡ ಅವಕಾಶಗಳನ್ನು ನೀಡಲಾಗುತ್ತದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಕಥಕ್ ಡ್ಯಾನ್ಸರ್ ಅರ್ಚನಾ ಪವಾರ್ ಹೇಳಿದ್ದು ಹೀಗೆ
ಇದೇನಿದು ಅನನ್ಯಾ ಪಾಂಡೆಯವರೆ ಸ್ವತಃ ಒಬ್ಬ ಕಥಕ್ ನೃತ್ಯಗಾರ್ತಿಯಾಗಿ, ದೈವಿಕವಾದ ಭರತನಾಟ್ಯವನ್ನು ಈ ರೀತಿ ಲೇವಡಿ ಮಾಡಿರುವುದನ್ನು ನೋಡಿ ನನಗೆ ನಿಜಕ್ಕೂ ತುಂಬಾ ನೋವಾಗುತ್ತಿದೆ. ಶಾಸ್ತ್ರೀಯ ನೃತ್ಯಕ್ಕೆ ಗೌರವ ಮತ್ತು ಘನತೆ ಸಿಗಲೇಬೇಕು ಎಂದಿದ್ದಾರೆ. ಈ ಕ್ಲಿಪ್ ಅನ್ನು ನೋಡುವುದು, ಭರತನಾಟ್ಯ ನೃತ್ಯ ಪ್ರಕಾರವನ್ನು ಅದರ ತಪ್ಪು ಗ್ರಹಿಕೆಯು ಒತ್ತೆಯಾಗಿ ಇಟ್ಟುಕೊಂಡಂತೆ ಭಾಸವಾಯಿತು ಎಂದು ಅನಿತಾ ಆರ್ ರತ್ನಮ್ ಕಿಡಿಕಾರಿದ್ದಾರೆ, (ಏಜೆನ್ಸೀಸ್).