ನಟಿ ಕತ್ರಿನಾ ಕೈಫ್ ಓಟಿಟಿ (OTT) ಮೂಲಕ ಚಿತ್ರರಂಗಕ್ಕೆ ಕಮ್‌ಬ್ಯಾಕ್?
- ನಟಿ ಕತ್ರಿನಾ ಕೈಫ್ ಓಟಿಟಿ (OTT) ಮೂಲಕ ಚಿತ್ರರಂಗಕ್ಕೆ ಕಮ್‌ಬ್ಯಾಕ್?
- ತಾಯಿಯಾದ ಬಳಿಕ ಕ್ಯಾಟ್ ಹೊಸ ಪ್ಲಾನ್ ಏನು?
- ಕತ್ರಿನಾ ಮರುಪ್ರವೇಶದ ವದಂತಿಗೆ ಆಪ್ತವಲಯ ಹೇಳಿದ್ದೇನು?
ಮುಂಬೈ: ಬಾಲಿವುಡ್ನ ಖ್ಯಾತ ನಟಿ ಕತ್ರಿನಾ ಕೈಫ್ ಮದುವೆ, ಮಕ್ಕಳು ಎಂದು ಸಿನಿರಂಗದಿಂದ ಸಾಕಷ್ಟು ವರ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ ಈಗ ಅವರು ಓಟಿಟಿ ಸಿರೀಸ್ವೊಂದರ ಮೂಲಕ ಮತ್ತೆ ರಂಗಪ್ರವೇಶ (Katrina Kaif Comeback) ಮಾಡಲಿದ್ದಾರೆ ಎಂಬ ವದಂತಿ ಹಬ್ಬಿತ್ತು.
ಆದರೆ ಈ ವದಂತಿಗಳಿಗೆ ತೆರೆ ಎಳೆದಿರುವ ನಟಿ ಕತ್ರಿನಾ ಕೈಫ್ ಆಪ್ತವಲಯ, ಇದೊಂದು ಸುಳ್ಳು ಮಾಹಿತಿಯಾಗಿದೆ, ಸದ್ಯ ನಟಿ ಮಗುವಿನ ಆರೈಕೆ ಹಾಗೂ ತನ್ನ ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಬಯಸಿದ್ದಾರೆ. ಹೀಗಾಗಿ ಸಿನಿಮಾ ಅಥವಾ ಓಟಿಟಿ ಪ್ರವೇಶ ಇವೆಲ್ಲಾ ಕೇವಲ ರೂಮರ್ಸ್ ಅಷ್ಟೇ ಎಂಬ ಮಾಹಿತಿ ಲಭ್ಯವಾಗಿದೆ.
2024 ರಲ್ಲಿ ಕೊನೆ ಸಿನಿಮಾ
ಬಾಲಿವುಡ್ನ ಯಶಸ್ವಿ ನಟಿಯರಲ್ಲಿ ಒಬ್ಬರಾದ ಕತ್ರಿನಾ ಕೈಫ್ 2024 ರಲ್ಲಿ ನಟ ವಿಜಯ್ ಸೇತುಪತಿ ಜೊತೆ ಮೇರಿ ಕ್ರಿಸ್ಮಸ್ ಎಂಬ ಸಿನಿಮಾದಲ್ಲಿ ಕೊನೆಯ ಬಾರಿಗೆ ಕಾಣಿಸಿ ಕೊಂಡಿದ್ದರು. ನಂತರ ನವೆಂಬರ್ 2025 ರಲ್ಲಿ ವಿಕ್ಕಿ-ಕತ್ರಿನಾ ದಂಪತಿಗೆ ಮೊದಲ ಮಗು ಜನಿಸಿದ ನಂತರ ನಟಿ ಯಾವುದೇ ಸಿನಿಮಾಗಳಿಗೆ ಸಹಿ ಮಾಡಿಲ್ಲ.
ನವೆಂಬರ್ನಲ್ಲಿ ತಾಯಿಯಾದ ಕತ್ರಿನಾ, ಮಗುವಿನ ಲಾಲನೆ-ಪಾಲನೆ, ಪತಿ, ಅತ್ತೆ-ಮಾವ ಹೀಗೆ ಕೌಟುಂಬಿಕ ಜೀವನದಲ್ಲಿ ವ್ಯಸ್ತವಾಗಿರುವ ಕಾರಣ, ಸಿನಿಮಾ ಬಗ್ಗೆಯಾಗಲೀ, ಮತ್ತೆ ನಟಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳುವ ಬಗ್ಗೆ ಸದ್ಯ ಯಾವುದೇ ಯೋಜನೆ ಹೊಂದಿಲ್ಲ ಎಂದು ನಟಿಯ ಆಪ್ತವಲಯ ಮಾಹಿತಿ ನೀಡಿದೆ.
ಬಾಲಿವುಡ್ನಿಂದ ಅಂತರ ಕಾಯ್ದುಕೊಂಡಿರುವ ನಟಿ, ತನ್ನ ಬ್ಯುಟಿ ಬ್ರಾಂಡ್ ಆದ ಕೇ ಬ್ಯುಟಿ (Kay Beauty,) ಯ ಉದ್ಯಮದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು, ಅದರ ಬೆಳವಣಿಗೆ, ಉನ್ನತಿಕರಣದತ್ತ ಹೆಚ್ಚಿನ ಗಮನವಹಿಸಿದ್ದಾರೆ ಎನ್ನಲಾಗುತ್ತಿದೆ, (ಏಜನ್ಸೀಸ್).