​Kangana Ranaut Jodhpur Temple Visit 
ಬಾಲಿವುಡ್

PM Modi Record-Breaking Tenure: ಜೋಧ್​ಪುರದ ಪ್ರಸಿದ್ಧ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಟಿ ಕಂಗನಾ ರಣಾವತ್

ಪ್ರಮುಖ ಮುಖ್ಯಾಂಶಗಳು

  • ​ಪ್ರಧಾನಿ ನರೇಂದ್ರ ಮೋದಿಯವರ ಸುದೀರ್ಘಾವಧಿಯ ಐತಿಹಾಸಿಕ ಆಡಳಿತಾವಧಿಯ ಹಿನ್ನೆಲೆ ಕಂಗನಾ ಟೆಂಪಲ್​ ರನ್
  • ​ಜೋಧ್‌ಪುರದ ಪ್ರಸಿದ್ಧ ಮಾ ಚಾಮುಂಡಾ ದೇವಿ ಮತ್ತು ಗಣೇಶ ದೇವಾಲಯಗಳಿಗೆ ಭೇಟಿ
  • ​ದೇಶದ ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿಯನ್ನು ಶ್ಲಾಘಿಸಿದ ಕಂಗನಾ ರಣಾವತ್.
ಜೋಧ್​ಪುರ: ಭಾರತ್​ ಭಾಗ್ಯ ವಿದಾತ ಸಿನಿಮಾ ರಿಲೀಸ್ ಆಗಿರುವ​ ಜೋಶ್​​ ಮಧ್ಯೆ,  ಪ್ರಧಾನಿ ನರೇಂದ್ರ ಮೋದಿಯವರು ಸತತ 12 ವರ್ಷಗಳ ಕಾಲ ಪ್ರಧಾನಿಯಾಗಿ ಮಂತ್ರಿಯಾಗಿ ಐತಿಹಾಸಿಕ ಮೈಲಿಗಲ್ಲು ಸಾಧಿಸಿರುವ ಹಿನ್ನೆಲೆ ನಟಿ ಹಾಗೂ ಸಂಸದೆ ಕಂಗನಾ ರಣಾವತ್​ (​Kangana Ranaut)ಅವರು, ಜೋಧ್​ಪುರದ ಪ್ರಸಿದ್ಧ ದೇಗುಲಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಸಿನಿಮಾ ರಿಲೀಸ್​ ಮಧ್ಯೆ ಟೆಂಪಲ್​ ರನ್

ಮುಂಬೈನಲ್ಲಿ ನಡೆದ ಉಗ್ರರ ದಾಳಿ ವೇಳೆ ಪ್ರಾಣವನ್ನು ಪಣಕ್ಕಿಟ್ಟು  ಹೋರಾಡಿದ ಮುಂಬೈನ ಕಾಮಾ ಮತ್ತು ಅಲ್ಬ್ಲೆಸ್ ಆಸ್ಪತ್ರೆಯ ಸಿಬ್ಬಂದಿ, ನರ್ಸ್‌ಗಳು ಹಾಗೂ ವಾರ್ಡ್ ಬಾಯ್‌ಗಳು ಹೇಗೆ ಪ್ರಾಣದ ಹಂಗು ತೊರೆದು 400 ಕ್ಕೂ ಹೆಚ್ಚು ರೋಗಿಗಳನ್ನು ಅದ್ಭುತವಾಗಿ ರಕ್ಷಿಸಿದರು ಎಂಬ ಶೌರ್ಯದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿರುವ ಮಧ್ಯೆ ಕಂಗನಾ ಅವರು ಪ್ರಧಾನಿ ಮೋದಿಯವರ  ಐತಿಹಾಸಿಕ ಸಾಧನೆಯ ಸಂಭ್ರಮವನ್ನು ಜೋಧ್‌ಪುರದ ಪ್ರಸಿದ್ಧ ಮಾ ಚಾಮುಂಡಾ ದೇವಿ ಹಾಗೂ ಗಣೇಶ ದೇವಸ್ಥಾನಗಳಿಗೆ ಭೇಟಿನೀಡಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕೃತಜ್ಞತೆ ಹೇಳಿದ್ದಾರೆ. 
"ನರೇಂದ್ರ ಮೋದಿಯವರು ಸುದೀರ್ಘವಾಗಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿ ದೇಶದ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ದೇವರಿಗೆ ಧನ್ಯಾವದ ಅರ್ಪಿಸಲು ಬಂದಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ನಾಯಕತ್ವದ ಪಯಣದಲ್ಲಿ ಈ ಐತಿಹಾಸಿಕ ಮೈಲಿಗಲ್ಲನ್ನು ತಲುಪಿರುವುದು ಇಡೀ ದೇಶಕ್ಕೇ ಅತ್ಯಂತ ಹೆಮ್ಮೆಯ ಸಂದರ್ಭವಾಗಿದೆ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ನಾಯಕತ್ವದ ಅವಧಿಯನ್ನು ಮೀರಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ" ಎಂದು ಮಾಧ್ಯಮಗಳ ಮುಂದೆ ನಟಿ ಮತ್ತು ಸಂಸದೆ ಕಂಗನಾ ರಣಾವತ್​​ ಅವರು ಮಾತನಾಡಿದರು. 
"ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವದ ಆಡಳಿತದಿಂದಾಗಿ, ದೇಶದ ಆರ್ಥಿಕತೆ ಬಲಿಷ್ಠವಾಗಿದೆ. ಸರ್ಕಾರದ ಪ್ರಮುಖ ಯೋಜನೆ ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಸರ್ಕಾರದ ಅಧಿಕಾರಿಗಳು, ಸಿಬ್ಬಂದಿ, ಬಿಜೆಪಿಯ ಕಾರ್ಯಕರ್ತರು ಸರಿಯಾದ ಮಾರ್ಗದಲ್ಲಿ ತಮ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ" ಎಂದರು, (ಏಜೆನ್ಸೀಸ್).