ಸಲ್ಮಾನ್ ಖಾನ್ ಲೀಗಲ್ ನೋಟಿಸ್ ಹರಿದು ಹಾಕಿದ ನಿರ್ಮಾಪಕ ಅಮಿತ್ ಜಾನಿ
- ಸಲ್ಮಾನ್ ಖಾನ್ ಲೀಗಲ್ ನೋಟಿಸ್ ಹರಿದು ಹಾಕಿದ ನಿರ್ಮಾಪಕ ಅಮಿತ್ ಜಾನಿ
- ಧಾರಾವಿ, ಡೋಂಗ್ರಿ ಹಾಗೂ ಡಿ-ಕಂಪನಿಯಿಂದ ಕೊಲೆ ಬೆದರಿಕೆ ಬಂದಿದೆ
- ಲೈವ್ ವಿಡಿಯೋದಲ್ಲಿ ಸಲ್ಲು ಭಾಯ್ ನೋಟಿಸ್ ಹರಿದು ಸವಾಲು ಹಾಕಿದ ಅಮಿತ್ ಜಾನಿ!
ಮುಂಬೈ: ಬಾಲಿವುಡ್‌ನಲ್ಲಿ ವಿವಾದಗಳ ಮೂಲಕವೇ ಖ್ಯಾತಿಗಳಿಸಿದ ನಟನೆಂದರೆ ಅದು ಸಲ್ಮಾನ್ ಖಾನ್. ಸದ್ಯ ಸಲ್ಲು ಭಾಯ್ಗೆ ಸಂಬಂಧಿಸಿದ ಮತ್ತೊಂದು ಸೆನ್ಸೇಷನಲ್ ನ್ಯೂಸ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸೌಂಡ್ ಮಾಡುತ್ತಿದೆ.
ಸಲ್ಮಾನ್ ಖಾನ್ ಅವರ 1998ರ ಫೇಮಸ್ ಕೃಷ್ಣಮೃಗ ಬೇಟೆ ಪ್ರಕರಣವನ್ನು ಆಧರಿಸಿ ಸಿನಿಮಾ ಮಾಡುವುದಾಗಿ ಘೋಷಿಸಿದ್ದ ಬಾಲಿವುಡ್ ನಿರ್ಮಾಪಕ ಅಮಿತ್ ಜಾನಿ (Amit Jani on Salman Khan) ಈಗ ನೇರವಾಗಿ ಸಲ್ಮಾನ್ ಖಾನ್ ವಿರುದ್ಧವೇ ತೊಡೆ ತಟ್ಟಿದ್ದಾರೆ. ಸಲ್ಮಾನ್ ಲೀಗಲ್ ಟೀಮ್ ಕಳುಹಿಸಿದ್ದ ನೋಟಿಸ್ ಅನ್ನು ಲೈವ್ ವಿಡಿಯೋನಲ್ಲಿ ಹರಿದು ಹಾಕಿ ಸವಾಲು ಹಾಕಿದ್ದಾರೆ.
ಏನಿದು ಕಾಲಾ ಹೀರನ್ ವಿವಾದ?
ಕೆಲವು ದಿನಗಳ ಹಿಂದಷ್ಟೇ ನಿರ್ಮಾಪಕ ಅಮಿತ್ ಜಾನಿ ಸಲ್ಮಾನ್ ಖಾನ್ ಅವರ ಕೃಷ್ಣಮೃಗ ಬೇಟೆ ಪ್ರಕರಣದ ಕಥೆಯನ್ನಿಟ್ಟುಕೊಂಡು ಕಾಲಾ ಹೀರನ್ (Kala Heeran) ಎಂಬ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ಈ ಅನೌನ್ಸ್‌ಮೆಂಟ್ ಕೇಳಿ ಸಲ್ಮಾನ್ ಖಾನ್ ಲೀಗಲ್ ಟೀಮ್ ಫುಲ್ ಗರಂ ಆಗಿತ್ತು.
ತಕ್ಷಣವೇ ಅಮಿತ್ ಜಾನಿಗೆ ನೋಟಿಸ್ ಕಳುಹಿಸಿದ್ದ ನಟನ ತಂಡ, ಸಿನಿಮಾದಿಂದ ಸಲ್ಮಾನ್‌ಗೆ ಸಂಬಂಧಿಸಿದ ಯಾವುದೇ ಕಂಟೆಂಟ್ ಅಥವಾ ವಿಷಯವನ್ನು ಬಿಟುಗಡೆ ಮಾಡದಂತೆ ಎಚ್ಚರಿಕೆ ನೀಡಿತ್ತು. ಅಷ್ಟೇ ಅಲ್ಲದೆ, ಸಲ್ಮಾನ್ ಖಾನ್ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ನೋಟಿಸ್‌ನಲ್ಲಿ ಡಿಮ್ಯಾಂಡ್ ಮಾಡಲಾಗಿತ್ತು.
ಲೈವ್‌ನಲ್ಲೇ ನೋಟಿಸ್ ಹರಿದ ನಿರ್ಮಾಪಕ!
ಈ ಲೀಗಲ್ ನೋಟಿಸ್‌ಗೆ ಅಮಿತ್ ಜಾನಿ ಕೊಟ್ಟಿರುವ ರಿಪ್ಲೈ ಈಗ ಇಡೀ ಬಾಲಿವುಡ್‌ನಲ್ಲಿ ಧೂಳೆಬ್ಬಿಸಿದೆ. ಗುರುವಾರ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಜಾನಿ, ಸಲ್ಮಾನ್ ಕಳುಹಿಸಿದ್ದ ಲೀಗಲ್ ನೋಟಿಸ್ ಅನ್ನು ಕ್ಯಾಮೆರಾ ಮುಂದೆಯೇ ಹರಿದು ಮುದ್ದೆ ಮಾಡಿ ಎಸೆದಿದ್ದಾರೆ.
ವಿಡಿಯೋ ಜೊತೆಗೆ ಟ್ವೀಟ್ ಮಾಡಿರುವ ಅವರು, ಸಲ್ಮಾನ್ ಖಾನ್ ಪರವಾಗಿ ನನಗೆಡಿ-ಕಂಪನಿಯಿಂದ ಬೆದರಿಕೆಗಳು ಬರ್ತಿವೆ. ನಾನು ಯಾರಿಗೆ ಅಂತ ಉತ್ತರ ಕೊಡಲಿ? ನಿಮ್ಮ ನೋಟಿಸ್‌ಗಾ ಅಥವಾ ಈ ಅಂಡರ್‌ವರ್ಲ್ಡ್ ಬೆದರಿಕೆಗಳಿಗಾ? ಸಲ್ಮಾನ್ ಭಾಯ್, ನಿಮ್ಮ ಲೀಗಲ್ ನೋಟಿಸ್ನ್ನು ನಾನು ಹರಿದು ಹಾಕಿದ್ದೇನೆ, ಇನ್ನು ನಿಮ್ಮ ಗ್ಯಾಂಗ್ ಅನ್ನು ನೀವೇ ನೋಡ್ಕೊಳ್ಳಿ ಎಂದು ಕಿಡಿಕಾರಿದ್ದಾರೆ.
ಧಾರಾವಿ, ಡೋಂಗ್ರಿಯಿಂದ 1000 ಕೊಲೆ ಬೆದರಿಕೆಗಳು!
ವಿಡಿಯೋನಲ್ಲಿ ಇನ್ನು ಶಾಕಿಂಗ್ ವಿಷಯಗಳನ್ನು ಬಿಚ್ಚಿಟ್ಟಿರುವ ಅಮಿತ್ ಜಾನಿ, ನನ್ನ ಗೆಳೆಯರು ಮತ್ತು ಮೀಡಿಯಾದವರು ಸಲ್ಮಾನ್ ನೋಟಿಸ್‌ಗೆ ಏನು ಉತ್ತರ ಕೊಡ್ತೀರಾ ಅಂತ ಕೇಳ್ತಿದ್ದಾರೆ. ಆದರೆ ಕಳೆದ 36 ಗಂಟೆಗಳಲ್ಲಿ ನನಗೆ ಮುಂಬೈನ ಡೋಂಗ್ರಿ, ಧಾರಾವಿ ಮತ್ತು ಜೋಗೇಶ್ವರಿಯಿಂದ ಸಲ್ಮಾನ್ ಖಾನ್ ಅವರ ಅಭಿಮಾನಿಗಳಿಂದ ಬರೋಬ್ಬರಿ 1000ಕ್ಕೂ ಹೆಚ್ಚು ಕೊಲೆ ಬೆದರಿಕೆಗಳು ಬಂದಿವೆ. ನಾನು ಮುಂಬೈಗೆ ಬಂದರೆ ನನ್ನ ಶಿರಚ್ಛೇದ ಮಾಡುವುದಾಗಿ ಹೇಳುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.
ಮೂಲಗಳ ಪ್ರಕಾರ, ಇದು ನಿಜವೋ ಸುಳ್ಳೋ ಗೊತ್ತಿಲ್ಲ, ಆದರೆ ಡಿ-ಕಂಪನಿ (ದಾವುದ್ ಇಬ್ರಾಹಿಂ ಗ್ಯಾಂಗ್) ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಮೆಸೇಜ್‌ಗಳು ನನಗಿಲ್ಲಿ ಬರುತ್ತಿವೆ. ಹಾಗಾಗಿ ನಾನು ಯಾರಿಗೆ ರಿಪ್ಲೈ ಮಾಡಬೇಕು? ಈ ಗೂಂಡಾಗಳಿಗಾ ಅಥವಾ ಕೋರ್ಟ್ ನೋಟಿಸ್‌ಗಾ? ಎಂದು ಜಾನಿ ಪ್ರಶ್ನಿಸಿದ್ದಾರೆ.
ಡಿ-ಕಂಪನಿಯನ್ನೇ ಕಳುಹಿಸಿ, ನಾವೂ ನೋಡ್ತೀವಿ!
ವಿಡಿಯೋ ಕೊನೆಯಲ್ಲಿ ಮತ್ತಷ್ಟು ಆಕ್ರೋಶ ಹೊರಹಾಕಿರುವ ನಿರ್ಮಾಪಕ, ನೋಟಿಸ್‌ಗೆ ನನ್ನ ಉತ್ತರ ಇದೇ (ನೋಟಿಸ್ ಹರಿಯುವುದು). ಇನ್ನು ನಿಮ್ಮ ಬೆದರಿಕೆಗಳ ವಿಷಯಕ್ಕೆ ಬಂದರೆ ನಿಮ್ಮ ಗ್ಯಾಂಗ್‌ಗಳಿಗೆ, ನಿಮ್ಮ ಕೆಟ್ಟ ನಡವಳಿಕೆಯ ಫ್ಯಾನ್ಸ್‌ಗೆ, ಧಾರಾವಿ ಜೋಗೇಶ್ವರಿಯ ಗೂಂಡಾಗಳಿಗೆ ನಾನು ಹೆದರಲ್ಲ. ಬೇಕಿದ್ದರೆ ಆ ಡಿ-ಕಂಪನಿಯನ್ನೇ ನನ್ನ ಬಳಿಗೆ ಕಳುಹಿಸಿ, ನಾವೂ ಅವರನ್ನೊಂದು ಕೈ ನೋಡ್ತೀವಿ ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ, (ಏಜನ್ಸೀಸ್).