ನಟ ರಾಕೇಶ್ ಬೇಡಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಿರ್ದೇಶಕಿ ಫರಾ ಖಾನ್
- ರಾಕೇಶ್ ಬೇಡಿ ಜಾವೇದ್ ಅಖ್ತರ್ ಮನೆಗೆ ಎಣ್ಣೆ ಕುಡಿಯಲು ಬರುತ್ತಿದ್ದ
- ಧುರಂಧರ್ ಸಿನಿಮಾದ ನಿಜವಾದ ಹಿರೋ ಜಮೀಲ್ ಜಮಾಲಿ
- ನಟ ರಾಕೇಶ್ ಬೇಡಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಿರ್ದೇಶಕಿ ಫರಾ ಖಾನ್
ಮುಂಬೈ: ಇತ್ತೀಚೆಗೆ ಬಿಡುಗಡೆಯಾಗಿದ್ದ ಧುರಂಧರ್ ಸಿನಿಮಾದಲ್ಲಿ ಜಮೀಲ್ ಜಮಾಲಿ ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದಿರುವ ನಟ ರಾಕೇಶ್ ಬೇಡಿ ಕುರಿತು ನಿರ್ದೇಶಕಿ ಫರಾ ಖಾನ್ (Farah Khan on Rakesh Bedi) ಹೇಳಿರುವ ಒಂದು ಮಾತು ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಜಾವೇದ್ ಅಖ್ತರ್ ಮನೆಗೆ ಬಿಟ್ಟಿ ಎಣ್ಣೆ ಕುಡಿಯಲು ಬರುತ್ತಿದ್ದ!
ಇತ್ತೀಚೆಗೆ ಫರಾ ಖಾನ್, ತನ್ನ ಯೂಟ್ಯೂಬ್ ವ್ಲಾಗ್ ಮಾಡಲು ನಟ ರಾಕೇಶ್ ಬೇಡಿ ಮನೆಗೆ ಭೇಟಿ ನೀಡಿದ್ದರು. ಅ ಸಂದರ್ಭದಲ್ಲಿ ನಾನು ರಾಕೇಶ್ ಬೇಡಿಯನ್ನು ಕಳೆದ 25 ವರ್ಷಗಳಿಂದ ನೋಡುತ್ತಿದ್ದನೆ.
ರಾಕೇಶ್ ಫಿಲ್ಮ್ ಎಂಡ್ ಟೆಲಿವಿಷನ್ ಇನ್ಸಿಟ್ಯೂಟ್ ಆಫ್ ಇಂಡಿಯಾದಲ್ಲಿ ವಿದ್ಯಾರ್ಥಿಯಾಗಿದ್ದಾಗ ಬಾಲಿವುಡ್ನ ಖ್ಯಾತ ಗೀತ ಮತ್ತು ಸಂಭಾಷಣಾಕಾರರಾದ ಜಾವೇದ್ ಅಖ್ತರ್ ಅವರ ಮನೆಗೆ ಫ್ರೀ ಊಟಕ್ಕೆ ಮತ್ತು ಮದ್ಯ(ಎಣ್ಣೆ) ಸೇವಿಸಲಿಕ್ಕೆ ರಾಕೇಶ್ ಬರುತ್ತಿದ್ದರು ಎಂದು ಹೇಳಿದ್ದಾರೆ.
ಧುರಂಧರ್ನ ಅಸಲಿ ಹಿರೋ
ವಿಡಿಯೋನಲ್ಲಿ ಇನ್ನಷ್ಟು ಮಾತನಾಡಿದ ಫರಾ ಖಾನ್, ನಾನು ಧುರಂಧರ್ನಲ್ಲಿ ರಾಕೇಶ್ ಬೇಡಿಯನ್ನಲ್ಲ, ಸಕ್ಷಾತ್ ಜಮೀಲ್ ಜಮಾಲಿಯನ್ನೇ ನೋಡಿದೆ. ಈ ಸಿನಿಮಾದ ಅಸಲಿ ಧುರಂಧರ್ ಎಂದರೆ ಅದು ರಾಕೇಶ್ ಬೇಡಿಯೇ ಆಗಿದ್ದಾರೆ ಎಂದು ಅವರು ಹೇಳಿದರು. ಕ್ಲೈಮಾಕ್ಸ್ ಸೀನ್ವರೆಗೆ ಜಮೀಲ್ ಜಮಾಲಿ ಕೂಡ ಒಬ್ಬ ಗುಪ್ತಚರ ಎಂದು ತಿಳಿಯುವುದೇ ಇಲ್ಲ. ನನಗೆ ನಿಜಕ್ಕೂ ಈ ಸಿನಿಮಾ ಬಹಳ ಇಷ್ಟವಾಯಿತು, ಅದರಲ್ಲೂ ಜಮೀಲ್ ಜಮಾಲಿ ಪಾತ್ರ ನನ್ನ ಫೇವರೆಟ್ ಎಂದು ಫರಾ ಹೇಳಿದ್ದಾರೆ.
ಧುರಂಧರ್ನಲ್ಲಿ ಜಮೀಲ್ ಜಮಾಲಿ
ಈ ಸಿನಿಮಾದಲ್ಲಿ ಜಮೀಲ್ ಜಮಾಲಿಯದು ಪ್ರಮುಖ ಪಾತ್ರಗಳಲ್ಲಿ ಒಂದಾಗಿದೆ. ಈ ಪಾತ್ರವನ್ನು ರಾಕೇಶ್ ಬೇಡಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ಜಮೀಲ್ ಜಮಾಲಿ ಪಾಕಿಸ್ತಾನದ, ಕರಾಚಿಯ ಒಬ್ಬ ರಾಜಕಾರಣಿಯಾಗಿದ್ದು ಅಲ್ಲಿಯ ರಾಜಕಾರಣದಲ್ಲಿ ತನ್ನ ಹಿಡಿತವನ್ನು ಸ್ಥಾಪಿಸಿರುತ್ತಾನೆ.
ಸಿನಿಮಾದ ಕೊನೆಯಲ್ಲಿ ಈ ಜಮೀಲ್ ಜಮಾಲಿ ಕೂಡ ಭಾರತದ ಒಬ್ಬ ಗುಪ್ತವರನೇ ಆಗಿದ್ದ, ಇವನನ್ನು 40 ವರ್ಷಗಳ ಹಿಂದೆ ಪಾಕಿಸ್ತಾನದ ರಾಜಕಾರಣದಲ್ಲಿ ಹಿಡಿತವನ್ನು ಸಾಧಿಸಲು ಕಳುಹಿಸಲಾಗಿತ್ತು ಎಂದು ತಿಳಿದು ಬರುತ್ತದೆ, (ಏಜನ್ಸೀಸ್).