ಧುರಂಧರ್​ನಲ್ಲಿ ದಾವೂದ್​ ಪಾತ್ರದ ಬಗ್ಗೆ ಆರ್​ಜಿವಿ ಬೇಸರ 
ಬಾಲಿವುಡ್

ದಾವೂದ್ ಕಾಯಿಲೆ ಬಿದ್ದಿರುವುದು ಸುಳ್ಳು: ಧುರಂಧರ್​ನಲ್ಲಿ ಬಡೇ ಸಾಬ್​​ ಪಾತ್ರ ಸರಿಯಾಗಿ ಮೂಡಿ ಬಂದಿಲ್ಲ; ಆರ್​ಜಿವಿ ಬೇಸರ! Ram Gopal Varma on Dawood Ibrahim

ಪ್ರಮುಖ ಮುಖ್ಯಾಂಶಗಳು

  • ಧುರಂಧರ್​ನಲ್ಲಿ ದಾವೂದ್​ ಪಾತ್ರದ ಬಗ್ಗೆ ಆರ್​ಜಿವಿ ಬೇಸರ
  • ದಾವೂದ್​ ಕಾಯಿಲೆ ಬಿದ್ದಿರುವುದು ಸುಳ್ಳೆಂದು ನಾನು ಹೇಳುತ್ತೇನೆ
  • ಸಿನಿಮಾ ಬಹಳ ಚೆನ್ನಾಗಿದೆ ಆದರೆ ನನಗೆ ಈ ದಾವೂದ್​ನ ಪಾತ್ರವನ್ನು ತೋರಿಸಿದ ರೀತಿ ಇಷ್ಟವಾಗಿಲ್ಲ
ಮುಂಬೈ: ಬಾಂಬೆ ಭೂಗತ ಜಗತ್ತಿನ ಮಾಜಿ ಡಾನ್​, ಭಾರತದ ಮೋಸ್ಟ್ ವಾಂಟೆಡ್​ ಕ್ರಿಮಿನಲ್​​ ದಾವೂದ್ ಇಬ್ರಾಹಿಂನನ್ನು ಧುರಂಧರ್​ 2 ಸಿನಿಮಾದಲ್ಲಿ ಸರಿಯಾಗಿ ಚಿತ್ರಿಸಿಲ್ಲ ಎಂದು ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ (Ram Gopal Varma on Dawood Ibrahim) ಬೇಸರ ವ್ಯಕ್ತ ಪಡಿಸಿದ್ದಾರೆ.

ದಾವೂದ್​ ಪಾತ್ರ ನನಗೆ ಇಷ್ಟವಾಗಿಲ್ಲ!

ಧುರಂಧರ್​ ಸಿನಿಮಾದ ಬಗ್ಗೆ ಮೊದಲಿಂದಲೂ ಹೊಗಳಿಕೆ ಮಾತನ್ನು ಹೇಳುತ್ತಿದ್ದ ಬಾಲಿವುಡ್​ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ, ಇತ್ತೀಚೆಗೆ ಯೂಟ್ಯೂಬ್​ ಚಾನೆಲ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಧುರಂದರ್​ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ, ಆದರೆ ನನಗೆ ದಾವೂದ್​ ಪಾತ್ರ ಇಷ್ಟವಾಗಿಲ್ಲ ಎಂದು ಹೇಳಿದ್ದಾರೆ.
ಆದಿತ್ಯ ಅವನಿಗಿರುವ ಮಾಹಿತಿ ಆಧರಿಸಿ ದಾವೂದ್​ ಇಬ್ರಾಹಿಂ ಪಾತ್ರವನ್ನು ಸೃಷ್ಟಿಸಿದ್ದಾನೆ. ಆದರೆ ನನಗೆ ಈ ಪಾತ್ರದ ನಿರ್ವಹಣೆ ಹಿಡಿಸಲಿಲ್ಲ ಎಂದು ಆರ್​ಜಿವಿ ಹೇಳಿದ್ದಾರೆ. ನನ್ನ ಪ್ರಕಾರ ದಾವೂದ್​ ತಾನಾಗಿಯೇ ಈ ಭೂಗತ ಲೋಕಕ್ಕೆ ವಿದಾಯ ಹೇಳಿದ್ದಾನೆ, ಅವನು ಕಾಯಿಲೆ ಬಿದ್ದಿರುವುದು ಸುಳ್ಳೆಂದು ನಾನು ನಂಬುತ್ತೆನೆ ಎಂದು ಅವರು ಹೇಳಿದರು.

ಭೂಗತ ಪಾತಕಿಗಳಿಗೆ ನನ್ನ ಸಿನಿಮಾಗಳು ಇಷ್ಟ!

ಇದೇ ಪಾಡ್​ಕಾಸ್ಟ್​ನಲ್ಲಿ ತಮ್ಮ ಸಿನಿಮಾಗಳ ಬಗ್ಗೆ ಮಾತನಾಡಿದ ನಿರ್ದೇಶಕ, ನನ್ನ ಕಂಪನಿ ಮತ್ತು ಸತ್ಯಾ ಸಿನಿಮಾಗಳಲ್ಲಿ ಬಾಂಬೆ ಭೂಗತ ಜಗತ್ತನ್ನು ಬಹಳ ನೈಜವಾಗಿ ತೋರಿಸಿದ್ದೆ. ಈ ಸಿನಿಮಾ ನಿರ್ಮಿಸುವಾಗ ಜನ ಅಂಡರ್​ವರ್ಲ್ಡ್​ನವರು ನಿನ್ನ ಹಿಂದೆ ಬೀಳುತ್ತಾರೆ ಎಂದು ಹೆದರಿಸಿದ್ದರು.
ಆದರೆ ಈ ಭೂಗತ ಪಾತಕಿಗಳಿಗೆ ನನ್ನ ಸಿನಿಮಾಗಳು ಬಹಳ ಇಷ್ಟವಾದವು, ಒಂದರ್ಥದಲ್ಲಿ ಇವರಿಂದಲೇ ನನ್ನ ಮನೆ ನಡೆಯುತ್ತಿದೆ, ಹಾಗೆಯೇ ನನಗೆ ಇಲ್ಲಿಯವರೆಗೆ ಭೂಗತ ಲೋಕದಿಂದ ಒಂದೇ ಒಂದು ಸಲ ಕೂಡ ಬೆದರಿಕೆ ಕರೆ ಬಂದಿಲ್ಲ ಎಂದು ಆರ್​ಜಿವಿ ಹೇಳಿದ್ದಾರೆ.

ಧುರಂಧರ್​ 2 ಬಗ್ಗೆ

ಧುರಂಧರ್​ 2 ಇದು ಧುರಂಧರ್​ ಸಿನಿಮಾದ ಎರಡನೇ ಭಾಗವಾಗಿದೆ. ಈ ಸಿನಿಮಾವು ಕರಾಚಿಯ ಲಿಯಾರಿಗೆ ತೆರಳಿರುವ ಭಾರತದ ಗುಪ್ತಚರನ ಕುರಿತು ನಿರ್ಮಿಸಲಾಗಿರುವ ಒಂದು ಕಾಲ್ಪನಿಕ ಕಥೆಯಾಗಿದೆ. ಅದರೆ ಈ ಸಿನಿಮಾದಲ್ಲಿ ಹಲವು ನೈಜ ಘಟನೆಗಳ ಸನ್ನಿವೇಶಗಳನ್ನು ಸೇರಿಸಿಕೊಂಡಿರುವ ಕಾರಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್​, ರಾಕೇಶ್​ ಬೇಡಿ, ಆರ್​.ಮಾಧವನ್​, ಅರ್ಜುನ್​ ರಾಂಪಾಲ್​, ಡ್ಯಾನಿಶ್​ ಇಕ್ಬಾಲ್​, ಸಾರಾ ಅರ್ಜುನ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉರಿ: ದಿ ಸರ್ಜಿಕಲ್​ ಸ್ಟ್ರೈಕ್​ ಸಿನಿಮಾದ ನಿರ್ದೇಶಕ ಆದಿತ್ಯ ಧರ್​ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ,(ಏಜನ್ಸೀಸ್​).