ನಟಿ ಮೃಣಾಲ್ ಠಾಕೂರ್ ಮತ್ತು ಎಲ್ವಿಶ್ ಯಾದವ್ ಅವರ ವೈರಲ್ ವಿಡಿಯೋ
ವೈರಲ್: ಬಿಗ್ ಬಾಸ್ ಒಟಿಟಿ ವಿನ್ನರ್ ಎಲ್ವಿಶ್ ಯಾದವ್ ಮತ್ತು ಸೀತಾರಾಮಂ ಬ್ಯೂಟಿ ಮೃಣಾಲ್ ಠಾಕೂರ್ ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿದ್ದಾರೆ. ಇವರಿಬ್ಬರ (Elvish Yadav and Mrunal Thakur) ರೋಮ್ಯಾಂಟಿಕ್ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ.
ಈ ವಿಡಿಯೋ ನೋಡಿದ ಇವರಿಬ್ಬರ ಫ್ಯಾನ್ಸ್ ಅಂತೂ ಫುಲ್ ಶಾಕ್ ಆಗಿದ್ದಾರೆ. ಏನಿದು.. ಇವರಿಬ್ಬರು ಸದ್ದಿಲ್ಲದೆ ಡೇಟಿಂಗ್ ಮಾಡ್ತಿದ್ದಾರಾ? ಎಂದು ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ.
ಲಾಫ್ಟರ್ ಚೆಫ್ಸ್ ಶೋನಲ್ಲಿ ಶುರುವಾದ ಕೆಮಿಸ್ಟ್ರಿ!
ಇತ್ತೀಚೆಗೆ ಲಾಫ್ಟರ್ ಚೆಫ್ಸ್ ಅನ್‌ಲಿಮಿಟೆಡ್ ಎಂಟರ್‌ಟೈನ್‌ಮೆಂಟ್ ಎಂಬ ರಿಯಾಲಿಟಿ ಶೋ ಸೆಟ್‌ಗೆ ಮೃಣಾಲ್ ಠಾಕೂರ್ ತಮ್ಮ ಹೊಸ ಸಿನಿಮಾಗಳಾದ ಡಕಾಯತ್ ಮತ್ತು ಹೈ ಜವಾನಿ ತೋ ಇಷ್ಕ್ ಹೋನಾ ಹೈ ಪ್ರಚಾರಕ್ಕಾಗಿ ಬಂದಿದ್ದರು. ಈ ಶೋನಲ್ಲಿ ಎಲ್ವಿಶ್ ಯಾದವ್ ಪ್ರಮುಖ ಕಂಟೆಸ್ಟೆಂಟ್ ಆಗಿದ್ದಾರೆ. ಶೋ ಮುಗಿಯುವಷ್ಟರಲ್ಲಿ ಇವರಿಬ್ಬರ ನಡುವೆ ಸಖತ್ ಬಾಂಡಿಂಗ್ ಕ್ರಿಯೇಟ್ ಆಗಿದೆ. ಎಲ್ವಿಶ್ ಮತ್ತು ಮೃಣಾಲ್ ಒಬ್ಬರಿಗೊಬ್ಬರು ಲೈಟಾಗಿ ಫ್ಲರ್ಟಿಂಗ್ ಮಾಡಿದ್ದು, ಇಬ್ಬರ ನಡುವಿನ ಒಡನಾಟ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು.
ವೈರಲ್ ಆದ ಡೇಟಿಂಗ್ ವಿಡಿಯೋ
ಆದರೆ ಇತ್ತೀಚೆಗೆ ಇವರಿಬ್ಬರ ವಿಡಿಯೋ ಒಂದು ಇನ್‌ಸ್ಟಾಗ್ರಾಮ್, ಎಕ್ಸ್‌ನಲ್ಲಿ ವೈರಲ್ ಆಯಿತು. ವಿಡಿಯೋದಲ್ಲಿ ಎಲ್ವಿಶ್ ಮತ್ತು ಮೃಣಾಲ್ ಇಬ್ಬರೂ ತುಂಬಾ ಕ್ಲೋಸ್ ಆಗಿ, ಒಟ್ಟಿಗೆ ರೋಮ್ಯಾಂಟಿಕ್ ಡೇಟ್‌ಗೆ ಹೋದಂತೆ ಕಾಣಿಸುತ್ತಿದ್ದಾರೆ. ಇದನ್ನು ನೋಡಿದ ತಕ್ಷಣ ಇಬ್ಬರ ನಡುವೆ ಲವ್ ಸ್ಟೋರಿ ಶುರುವಾಗಿದೆ ಎಂದೇ ಎಲ್ಲರೂ ಅಂದುಕೊಂಡಿದ್ದರು.
ವಿಡಿಯೋದ ಅಸಲಿ ಸತ್ಯ ಇಲ್ಲಿದೆ!
ಆದರೆ ಟ್ವಿಸ್ಟ್ ಏನೆಂದರೆ, ಆ ವಿಡಿಯೋ ಅಸಲಿಯಲ್ಲ! ಹೌದು, ಅದು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (Ai) ಮೂಲಕ ತಯಾರು ಮಾಡಲಾದ ವಿಡಿಯೋ. ಯಾರೋ ಕಿಡಿಗೇಡಿಗಳು ಎಐ ತಂತ್ರಜ್ಞಾನ ಬಳಸಿ ಇಬ್ಬರೂ ಒಟ್ಟಿಗೆ ಡೇಟಿಂಗ್ ಮಾಡುತ್ತಿರುವಂತೆ ನಕಲಿ ವಿಡಿಯೋ ರೆಡಿ ಮಾಡಿದ್ದಾರೆ. ಅದು ನೋಡಲು ಎಷ್ಟು ನೈಜವಾಗಿತ್ತೆಂದರೆ ಯಾರೂ ಕೂಡ ಅದನ್ನು ನಕಲಿ ಎಂದು ಪತ್ತೆ ಹಚ್ಚಲು ಸಾಧ್ಯವೇ ಇರಲಿಲ್ಲ, (ಏಜನ್ಸೀಸ್).