ಪತಿ ಗೋವಿಂದಾ ಜತೆ ಸುನೀತಾ ಅಹುಜಾ 
ಬಾಲಿವುಡ್

ನನ್ನ ಕೈಲಿ ಕತ್ತಿ ಹಿಡಿಸಬೇಡ! ಪತಿ ಗೋವಿಂದಾ ಅನೈತಿಕ ಸಂಬಂಧಗಳ ಬಗ್ಗೆ ಪತ್ನಿ ಸುನೀತಾ ಸ್ಫೋಟಕ ಹೇಳಿಕೆ | Govinda

ಬಾಲಿವುಡ್​: ಬಾಲಿವುಡ್​ ಖ್ಯಾತ ನಟ ಗೋವಿಂದಾ (Govinda) ಮತ್ತು ಅವರ ಪತ್ನಿ ಸುನೀತಾ ಅಹುಜಾ ನಡುವಿನ ದಾಂಪತ್ಯ ಜೀವನದ ಬಗ್ಗೆ ಕಳೆದೊಂದು ವರ್ಷದಿಂದ ನಿರಂತರ ಸುದ್ದಿಯಾಗುತ್ತಿದ್ದು, ಈಗ ಸುನೀತಾ ಹೊಸದೊಂದು ಬಾಂಬ್​ ಸಿಡಿಸಿದ್ದಾರೆ.
ಸುನೀತಾ ಅಹುಜಾ ಮತ್ತು ಗೋವಿಂದ ನಡುವೆ ಈಗಾಗಲೇ ವಿಚ್ಛೇದನವಾಗಿದೆ ಎಂಬ ಸುದ್ದಿ ಹರಿದಾಡಿದ ಸಂದರ್ಭದಲ್ಲಿ ಸುನೀತಾ ಈ ಇವೆಲ್ಲಾ ಕೇವಲ ಕಟ್ಟುಕತೆ, ನಾನು ಮತ್ತು ನನ್ನ ಗಂಡ ಸುಖವಾಗಿ ಇರುವುದಾಗಿ ಪ್ರತಿಕ್ರಿಯೆ ನೀಡಿದ್ದರು.
ವಿಚ್ಛೇದನದ ವರದಿಯನ್ನು ಸುನೀತಾ ನಿರಾಕರಿಸಿದರೂ, ಗೋವಿಂದಾ ಅವರ ಅನೈತಿಕ ಸಂಬಂಧಗಳ ಬಗ್ಗೆ ಸುನೀತಾ ಹಲವು ಬಾರಿ ಮಾತನಾಡಿದ್ದಾರೆ. ಇತ್ತಿಚೆಗೆ ಖಾಸಗಿ ಸಂದರ್ಶನವೊಂದರಲ್ಲಿ ಮತ್ತೆ ಗೋವಿಂದಾ ಅವರ ಇತರೆ ಹುಡುಗಿಯರೊಂದಿನ ಸಂಬಂಧದ ಬಗ್ಗೆ ಸುನೀತಾ ಮನಬಿಚ್ಚಿ ಮಾತನಾಡಿದ್ದಾರೆ.
ಗೋವಿಂದಾ ಜೀವನದಲ್ಲಿ ಇಂತಹ ಹುಡುಗಿಯರು ಬಹಳ ಜನ ಬಂದಿದ್ದಾರೆ ಎಂದು ಹೇಳುವ ಮೂಲಕ ಗೋವಿಂದಾ ಅವರ ಅನೈತಿಕ ಸಂಬಂಧಗಳ ವರದಿಗಳಿಗೆ ಪುಷ್ಟಿ ನೀಡಿದ್ದಾರೆ.
ನಾನು ಈ ವಿಷಯದಲ್ಲಿ ಗೋವಿಂದಾನನ್ನು ಯಾವತ್ತು ಕ್ಷಮಿಸುವುದಿಲ್ಲ, ನಾನು ಮೊದಲೇ ನೇಪಾಳದವಳು. ನನ್ನ ಬಳಿ ಖುಕ್ರಿ(ನೇಪಾಳಿ ಕತ್ತಿ) ಯನ್ನು ತೆಗೆದರೆ ಎಲ್ಲರ ಜೀವನ ತಲೆಕೆಳಗಾಗುತ್ತದೆ. ಅದಕ್ಕೆ ನಾನು ಇವತ್ತಿನಿಂದಾರೂ ಸುಧಾರಿಸಿಕೊ ಎಂದು ಅವ(ಗೋವಿಂದಾ)ನಿಗೆ ಹೇಳುತ್ತೆನೆ ಎಂದಿದ್ದಾರೆ.
ಹಾಗೆಯೇ ಮಾತು ಮುಂದುವರಿಸಿದ ಸುನೀತಾ, ಇಂತಹ ಹುಡುಗಿಯರು ಬಹಳ ಜನ ಬರುತ್ತಾರೆ, ಆದರೆ ನಿನಗೆ 63 ವರ್ಷವಾಗಿದೆ ಅನ್ನುವುದನ್ನು ಮರೆಯಬೇಡ, ಮಗಳು ಟೀನಾನ ಮದುವೆ ಮಾಡಕೇಕು, ಮಗ ಯಶ್​ ಈಗ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಿದ್ದಾನೆ, ಇವುಗಳ ಮೇಲೆ ನಿನ್ನ ಗಮನ ಇರಲಿ ಎಂದು ಅವನಿಗೆ ಹೇಳುತ್ತಾ ಇರುತ್ತೆನೆ ಎಂದು ಹೇಳಿದ್ದಾರೆ.
ಮಗ ಯಶ್​ನ ಬಗ್ಗೆ ಮಾತನಾಡುತ್ತಾ, ಅವನು ಯಾವತ್ತು ಗೋವಿಂದಾನ ಬಳಿ ತನಗೆ ಸಹಾಯ ಮಾಡಿ ಎಂದು ಕೇಳಿಲ್ಲ, ಹಾಗೆಯೇ ಗೋವಿಂದಾ ಸಹ ತನ್ನ ಮಗನ ವೃತ್ತಿ ಜೀವನದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಾನೇ ಒಮ್ಮೊಮ್ಮೆ ಕೋಪ ಸಹಿಕಿಕೊಳ್ಳಲಾಗದೇ ನೀನು ನಿಜವಾಗಿಯೂ ಯಶ್​ನ ತಂದೆಯೇ?ಎಂದು ಗೋವಿಂದಾನನ್ನು ಕೇಳಿದ್ದೇನೆ ಎಂದು ಹೇಳಿದ್ದಾರೆ.

ವಿಚ್ಛೇದನದ ವದಂತಿಗಳನ್ನು ನಿರಾಕರಿಸಿದ ಸುನಿತಾ

2025 ರ ಗಣೇಶ ಚತುರ್ಥಿ ಆಚರಣೆಯ ಸಂದರ್ಭದಲ್ಲಿ, ಸುನೀತಾ ಮಾಧ್ಯಮದೊಂದಿಗೆ ಸಂವಹನ ನಡೆಸಿ ವಿಚ್ಛೇದನದ ವದಂತಿಗಳನ್ನು ತಳ್ಳಿಹಾಕಿದ್ದರು. ನಾನು ಮತ್ತು ಗೋವಿಂದಾ ಬಹಳ ಚೆನ್ನಾಗಿ ಇದ್ದೇವೆ, ನಮ್ಮನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದರು,(ಏಜನ್ಸೀಸ್).