ಆದಿತ್ಯ ಧರ್ ಒಬ್ಬ ಬಿಜೆಪಿ ಪ್ರಚಾರಕ: ಧ್ರುವ್ ರಾಟಿ
- ಬಾಕ್ಸ್ ಆಫೀಸ್ನಲ್ಲಿ ಧುರಂಧರ್ 2 ಅಬ್ಬರ
- ಆದಿತ್ಯ ಧರ್ ಒಬ್ಬ ಬಿಜೆಪಿ ಪ್ರಚಾರಕ: ಧ್ರುವ್ ರಾಟಿ
- ಇದೊಂದು ಪ್ರೊಪಗಾಂಡಾ ಸಿನಿಮಾ
ಬಾಲಿವುಡ್: ಗುರುವಾರ (ಮಾರ್ಚ್ 19) ಧುರಂಧರ್ 2: ದಿ ರಿವೆಂಜ್ ಸಿನಿಮಾ ತೆರೆಕಂಡ ಬೆನ್ನಲ್ಲೇ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಲು ಪ್ರಾರಂಭಿಸಿದೆ. ತೆರೆಕಂಡ ಮೊದಲ ದಿನವೇ ಸುಮಾರು 143 ಕೋಟಿ ಗಳಿಸುವ ಮೂಲಕ ಅತ್ಯಧಿಕ ಹಣ ಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅದರೆ ಈ ಸಿನಿಮಾ ಎಷ್ಟು ಹೆಗ್ಗಳಿಕೆ ಪಾತ್ರವಾಗುತ್ತಿದೆಯೋ ಅಷ್ಟೇ ವಿವಾದಕ್ಕೆ ಸಹ ದಾರಿ ಮಾಡಿಕೊಟ್ಟಿದೆ. ಪಾಕಿಸ್ತಾನವನ್ನು ಭಯೋತ್ಪಾದಕ ದೇಶ ಎಂದು ಚಿತ್ರಿಸಿದ ಹಿನ್ನಲೆ ಪಾಕ್ ಸೇರಿದಂತೆ ಗಲ್ಫ್ ದೇಶಗಳಲ್ಲಿ ಸಿನಿಮಾ ಪ್ರದರ್ಶನವನ್ನು ಬ್ಯಾನ್ ಮಾಡಲಾಗಿದ್ದು, ಇದೀಗ ಯೂಟ್ಯೂಬರ್ ಧ್ರುವ್ ರಾಟಿ (Dhruv Rathee about Dhurandhar 2) ತನ್ನ ವಿರೋಧವನ್ನು ವ್ಯಕ್ತ ಪಡಿಸಿದ್ದಾರೆ.
ಇದೊಂದು ಪ್ರೊಪಗಾಂಡಾ ಸಿನಿಮಾ!
ಧುರಂಧರ್ ಸಿನಿಮಾದ ಮೊದಲ ಭಾಗ ತೆರೆಕಂಡಾಗ ಸಹ ಈ ಧ್ರುವ್ ರಾಟಿ ನನ್ನ ಒಂದು ವಿಡಿಯೋ ಮೂಲಕ ಈ 300 ಕೋಟಿ ಸಿನಿಮಾವನ್ನು ನೆಲಕಚ್ಚುವಂತೆ ಮಾಡುತ್ತೇನೆ ಎಂದು ಹೇಳಿ ತಾನೇ ನೆಲಕಚ್ಚಿ ಹೋದ ಘಟನೆ ಎಲ್ಲರಿಗೂ ನೆನಪಿದೆ. ಈಗ ಧುರಂಧರ್ 2 ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೆ ಧ್ರುವ್ ರಾಟಿ ಟ್ವಿಟರ್ (ಎಕ್ಸ್) ನಲ್ಲಿ ಟ್ವಿಟ್ ಮಾಡುವ ಮೂಲಕ ಮತ್ತೊಮ್ಮೆ ಸಿನಿಮಾ ವಿರುದ್ಧ ತನ್ನ ಆಕ್ರೋಶವನ್ನು ಹೊರಹಾಕಿದ್ದಾನೆ.
ನಾನು ಮೂರು ತಿಂಗಳ ಹಿಂದೆಯೇ ಆಧಿತ್ಯ ಧರ್ ಒಬ್ಬ ಬಿಜೆಪಿ ಪ್ರಚಾರಕ ಎಂದು ಕರೆದಿದ್ದೆ, ಈಗ ಅದು ಮತ್ತೊಮ್ಮೆ ಸಾಭೀತಾಗಿದೆ. ಹಿಂದಿನ ಸಿನಿಮಾದ ಯಶಸ್ಸಿನಿಂದ ಅತಿಯಾದ ಆತ್ಮವಿಶ್ವಾಸದಿಂದ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಅದರೆ ಈ ಭಾರಿಯ ಸಿನಿಮಾ ಒಂದು ಒಳ್ಳೆಯ ಪ್ರೊಪಗಾಂಡಾ ಸಹ ಅಲ್ಲ ಎಂದು ವ್ಯಂಗ್ಯ ಭರಿತವಾಗಿ ಟ್ವಿಟ್ ಮಾಡಿದ್ದಾರೆ.
ಧುರಂಧರ್ 2 ಬಗ್ಗೆ
ಧುರಂಧರ್ 2 ಇದು ಧುರಂಧರ್ ಸಿನಿಮಾದ ಎರಡನೇ ಭಾಗವಾಗಿದೆ. ಈ ಸಿನಿಮಾವು ಕರಾಚಿಯ ಲಿಯಾರಿಗೆ ತೆರಳಿರುವ ಭಾರತದ ಗಪ್ತಚರನ ಕುರಿತು ನಿರ್ಮಿಸಲಾಗಿರುವ ಒಂದು ಕಾಲ್ಪನಿಕ ಕಥೆಯಾಗಿದೆ. ಅದರೆ ಈ ಸಿನಿಮಾದಲ್ಲಿ ಹಲವು ನೈಜ ಘಟನೆಗಳ ಸನ್ನಿವೇಶಗಳನ್ನು ಸೇರಿಸಿಕೊಂಡಿರುವ ಕಾರಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್, ರಾಕೇಶ್ ಬೇಡಿ, ಆರ್.ಮಾಧವನ್, ಅರ್ಜುನ್ ರಾಂಪಾಲ್, ಡ್ಯಾನಿಶ್ ಇಕ್ಬಾಲ್, ಸಾರಾ ಅರ್ಜುನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ,(ಏಜನ್ಸೀಸ್).