- ರಣವೀರ್ ಸಿಂಗ್ ನಟನೆಯ ಧುರಂಧರ್2 ಸಿನಿಮಾ ಭಾರತದಲ್ಲಿ 1,000 ಕೋಟಿ ರೂಪಾಯಿ ಗಳಿಕೆ
- 'ಧುರಂಧರ್ 2' ಯಶಸ್ಸನ್ನು ದೀಪಿಕಾ ಪಡುಕೋಣೆ ಸಂಭ್ರಮಿಸಿಲ್ಲ ಯಾಕೆ ಎಂದ ನೆಟ್ಟಿಗರು?
- ನಿಮ್ಮೆಲ್ಲರಿಗಿಂತ ಮೊದಲೇ ನಾನು ಈ ಸಿನಿಮಾ ನೋಡಿದ್ದೇನೆ ಎಂದು ಟ್ರೋಲಿಗರ ಬಾಯಿ ಮುಚ್ಚಿಸಿದ ರಣವೀರ್
Dhurandhar 2: ಸಿನಿಮಾವು ಬಾಕ್ಸ್ ಆಫೀಸಿನಲ್ಲಿ ಧೂಳೆಬ್ಬಿಸಿದೆ. ಸಿನಿ ತಾರೆಯರು ರಣವೀರ್ ಸಿಂಗ್ ಆಕ್ಟಿಂಗ್, ಚಿತ್ರದ ಮೇಕಿಂಗ್ ಬಗ್ಗೆ ಹೊಗಳಿಕೆಯ ಮಹಾಪೂರವೇ ಹರಿಸುತ್ತಿದ್ದಾರೆ. ಆದರೆ, ದೀಪಿಕಾ ಪಡುಕೋಣೆ ಮಾತ್ರ ಮೌನವಾಗಿರೋದ್ಯಾಕೆ ತನ್ನ ಪತಿ ಸಿನಿಮಾದ ಬಗ್ಗೆ ಮಾತನಾಡದೆ, ಹೊಗಳದೆ, ಪೋಸ್ಟ್ ಹಾಕಿಕೊಳ್ಳದೆ ಇರೋದು ಯಾಕೆ ಎಂದು ಟ್ರೋಲರ್ಸ್ಗಳು ಟ್ರೋಲ್ ಮಾಡಿದ್ದರು. ಸದ್ಯ ಈ ಪ್ರಶ್ನೆಗಳಿಗೆ ದೀಪಿಕಾ ಪಡುಕೋಣೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ.
ಡಿಂಪಿ ಏಕೀ ಮೌನ?
ದೀಪಿಕಾ ಪಡುಕೋಣೆಯವರು, 500 ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗಿರುವ ಧುರಂಧರ್-2 ಸಿನಿಮಾಗೆ ಸೈಲೆಂಟ್ ಆಗಿ ಟ್ರೀಟ್ಮೆಂಟ್ ಕೊಟ್ಟಿದ್ದಾರೆ. ಧುರಂಧರ್-2 ಸಿನಿಮಾಗೆ ಇಡೀ ದೇಶದಲ್ಲೇ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದ್ರೆ, ಅವರು ಮಾತ್ರ ಪ್ರೀಮಿಯರ್ ಶೋ ಮಿಸ್ ಮಾಡಿ, ತಮ್ಮ ಅತ್ತೆ ಮಾವನ ಜೊತೆ ಸಿತಾರ್ ಸಂಗೀತ ಕಾನ್ಸೆರ್ಟ್ ಅಟೆಂಡ್ ಮಾಡಿದ್ದರು. ಸಿನಿಮಾ ಬಗ್ಗೆ ಯಾವುದೇ ಪೋಸ್ಟ್ ಹಂಚಿಕೊಂಡಿಲ್ಲ. ತನ್ನ ಪತಿ ಬಗ್ಗೆ ಮಾತನಾಡಿಲ್ಲ. ಹೊಗಳಿಲ್ಲ. ಇದು ಉದ್ದೇಶಪೂರ್ವಕ ನಿರ್ಲಕ್ಷ್ಯವೇ? ಎಂದು ಕಲ್ಚರಲ್ ಸರ್ಕಲ್ ಪೋಸ್ಟ್ವೊಂದನ್ನು ಹಂಚಿಕೊಂಡಿತ್ತು.
ದೀಪಿಕಾ ಹೇಳಿದ್ದೇನು?
ಇದಕ್ಕೆ ನೇರವಾಗಿ ಪ್ರತಿಕ್ರಿಯಿಸಿದ ದೀಪಿಕಾ, "ನಿಮ್ಮೆಲ್ಲರಿಗಿಂತ ಮೊದಲೇ ನಾನು ಸಿನಿಮಾ ನೋಡಿದ್ದೇನೆ. ಈಗ ಹೇಳಿ, ನೀವು ಟ್ರೋಲ್ ಮತ್ತು ಜೋಕ್ ಮಾಡ್ತಿರೋದು ಯಾರ ಮೇಲೆ? ಎಂದು ಬರೆಯುವ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ.
ಈ ಹಿಂದೆಯೂ ದೀಪಿಕಾ ಅವರು ಧುರಂಧರ್ ಚಿತ್ರದ ಮೊದಲ ಭಾಗವನ್ನು ಶ್ಲಾಘಿಸಿದ್ದರು ಮತ್ತು ನಿರ್ದೇಶಕ ಆದಿತ್ಯ ಧರ್ ಸೇರಿದಂತೆ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದರು. ತಮ್ಮ ಹುಟ್ಟುಹಬ್ಬದ ಕಾರ್ಯಕ್ರಮದಲ್ಲೂ ಚಿತ್ರದ ಯಶಸ್ಸಿನ ಬಗ್ಗೆ ಅವರು ಹೆಮ್ಮೆ ವ್ಯಕ್ತಪಡಿಸಿದ್ದರು.
ಧುರಂಧರ್ ಗಳಿಸಿದ್ದೆಷ್ಟು?
ಆದಿತ್ಯ ಧರ್ ನಿರ್ದೇಶನದ 'ಧುರಂಧರ್: ದಿ ರಿವೇಂಜ್' ಸಿನಿಮಾ ಭಾರತೀಯ ಚಿತ್ರರಂಗದ ಅತಿದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಭಾರತದಲ್ಲಿ ಈ ಚಿತ್ರ ಬರೋಬ್ಬರಿ 1,000 ಕೋಟಿ ರೂಪಾಯಿ ನಿವ್ವಳ ಸಂಗ್ರಹ ಮಾಡಿದೆ. ಬಿಡುಗಡೆಯಾದ 20ನೇ ದಿನದಂದು ಈ ಸಿನಿಮಾ 'ಬಾಹುಬಲಿ 2' ದಾಖಲೆಯನ್ನು ಮೀರಿಸಿದ್ದು, ಸದ್ಯ ಪುಷ್ಪ 2 ಚಿತ್ರದ ನಂತರದ ಸ್ಥಾನದಲ್ಲಿದೆ, (ಏಜೆನ್ಸೀಸ್).