ನಟ ರಣವೀರ್ ಸಿಂಗ್ ಮೇಲೆ ಹೇರಿದ್ದ ಬ್ಯಾನ್ ಹಿಂಪಡಿಕೆ
- ನಟ ರಣವೀರ್ ಸಿಂಗ್ ಮೇಲೆ ಹೇರಿದ್ದ ಬ್ಯಾನ್ ಹಿಂಪಡಿಕೆ
- ನಿಷೇಧವನ್ನು ಹಿಂಪಡೆದ ಪಶ್ಚಿಮ ಭಾರತ ಚಲನಚಿತ್ರ ನೌಕರರ ಒಕ್ಕೂಟ (FWICE)
- ನಮಗೆ ನಟನ ಮೇಲೆ ಯಾವುದೇ ದ್ವೇಷವಿಲ್ಲ ಎಂದು ಸ್ಪಷ್ಟನೆ
ಮುಂಬೈ: ಡಾನ್ 3 ಸಿನಿಮಾದಿಂದ ರಣವೀರ್ ಸಿಂಗ್ ಹೊರಬಂದ ಕಾರಣ ನಟನ ಇನ್ನಾವುದೇ ಸಿನಿಮಾದಲ್ಲಿ ಕೆಲಸ ಮಾಡುವುದಿಲ್ಲ ಎಂದು ಪಶ್ಚಿಮ ಭಾರತ ಚಲನಚಿತ್ರ ನೌಕರರ ಒಕ್ಕೂಟ (FWICE) ಹೇರಿದ್ದ ಅಸಹಕಾರ ಅಥವಾ ನಿರ್ಬಂಧವನ್ನು ಬುಧವಾರ (ಜೂ.3) ಒಕ್ಕೂಟದ ಅಧ್ಯಕ್ಷ ಬಿ.ಎನ್. ತಿವಾರಿ ರದ್ದು (FWICE lifts Ban on Ranveer Singh) ಪಡಿಸಿದ್ದಾರೆ.
ತನ್ನನ್ನು ಸಿನಿಮಾರಂಗದಿಂದ ಬ್ಯಾನ್ ಮಾಡಿದ್ದಕ್ಕೆ ನಟ ರಣವೀರ್ ಸಿಂಗ್ ಒಕ್ಕೂಟಕ್ಕೆ ಲೀಗಲ್ ನೋಟಿಸ್ ಕಳುಹಿಸಿದ ನಂತರ ಈ ನಿರ್ಧಾರ ಹೊರಬಿದ್ದಿದೆ.
ನಮಗೆ ನಟನ ಬಗ್ಗೆ ಯಾವುದೇ ಅಸಮಾಧಾನವಿಲ್ಲ!
ಬುಧವಾರ (ಜೂ.3) ಮುಂಬೈನಲ್ಲಿ ಸುದ್ದಿಗೋಷ್ಟಿ ನಡೆಸಿದ ಪಶ್ಚಿಮ ಭಾರತ ಚಲನಚಿತ್ರ ನೌಕರರ ಒಕ್ಕೂಟ (FWICE), ನಮಗೆ ರಣವೀರ್ ಮೇಲೆ ಯಾವುದೇ ದ್ವೇಷವಿಲ್ಲ. ನಿನ್ನೆ ರಣವೀರ್ ಅವರ ಲೀಗಲ್ ಟೀಮ್ ಅವರ ಮೇಲೆ ಹೇರಿರುವ ಬ್ಯಾನ್ನ್ನು ಹಿಂತೆಗೆದುಕೊಳ್ಳುವಂತೆ ಕೇಳಿ ಕೊಂಡಿತು ಎಂದು FWICE ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ತಿಳಿಸಿದ್ದಾರೆ.
ನಾನು ರಣವೀರ್ ಸಿಂಗ್ಗೆ ನಮ್ಮ ಜೊತೆ ಕುಳಿತು ವಿವಾದವನ್ನು ತಿಳಿಗೊಳಿಸಿ ಕೊಳ್ಳುವಂತೆ ಹೇಳಿದ್ದೆವೆ. ನಾವು ಅವರ ಸ್ಟಾರ್ಡಂ ಅನ್ನು ಗೌರವಿಸುತ್ತೆವೆ. ನಮಗೆ ಯಾವುದೇ ನಟನನ್ನು ಬ್ಯಾನ್ ಮಾಡುವ ಅಧಿಕಾರವಿಲ್ಲ. ಈಗಲಾದರೂ ನಟ ನಮ್ಮ ಜೊತೆ ಮಾತಕತೆಗೆ ಒಪ್ಪಿದ್ದಾರಲ್ಲ ಅದೇ ಖುಷಿಯ ವಿಷಯ ಎಂದು ಅವರು ಹೇಳಿದ್ದಾರೆ.
ರಣವೀರ್ ಬೆನ್ನಿಗೆ ನಿಂತಿದ್ದ ಖ್ಯಾತ ನಾಮರು!
ನಟ ರಣವೀರ್ ಸಿಂಗ್ನನ್ನು ಹೀಗೆ ಬ್ಯಾನ್ ಮಾಡುತ್ತಿದ್ದಂತೆ ಇದೊಂದು ವ್ಯವಸ್ಥಿತಿ ಸಂಚೆಂದು ಹಿರಿಯ ನಿರ್ದೇಶಕ, ರಾಮ್ ಗೋಪಾಲ್ ವರ್ಮಾ ಆರೋಪಿಸಿದ್ದರು. ಸಿನಿಮಾ ಒಕ್ಕೂಟಕ್ಕೆ ಥಿಯೇಟರ್ಗೆ ಜನರನ್ನು ಕರೆತರುವ ತಾಕತ್ತಿಲ್ಲ, ರಣವೀರ್ಗೆ ಆ ಶಕ್ತಿಯಿದೆ. ಒಕ್ಕೂಟದ ನಿರ್ಧಾರವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಖ್ಯಾತ ಕಾಂದಬರಗಾರ್ತಿ ಹಾಗೂ ಅಂಕಣಗಾರ್ತಿ ಶೋಭಾ ಡೇ, ರಣವೀರ್ ನಟನೆಯ ಧುರಂಧರ್ ಸಿನಿಮಾದ ಯಶಸ್ಸು ಬಾಲಿವುಡ್ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಇದರ ಹಿಂದೆ ಬಾಲಿವುಡ್ ಮಾಫಿಯಾದ ಕುತಂತ್ರವಿದೆ ಎಂದು ಆರೋಪಿಸಿದ್ದರು.
ನಟಿ, ಸಂಸದೆ ಕಂಗನಾ ರಣಾವತ್ ನೀವು ಏಳಿಗೆ ಕಾಣುತ್ತಿದ್ದಿರಿ ಎಂದರೆ ನಿಮಗೆ ಶತ್ರುಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ, ಇವೆಕ್ಕೆಲ್ಲ ತಲೆ ಕೆಡಿಸಿ ಕೊಳ್ಳಬಾರದೆಂದು ಕಂಗನಾ ಹೇಳಿಕೆ ನೀಡಿದ್ದರು.
FWICE ರಣವೀರ್ನನ್ನು ಏಕೆ ಬಹಿಷ್ಕರಿಸಿದೆ?
ನಿರ್ದೇಶಕ ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಡಾನ್ 3 ಸಿನಿಮಾದಲ್ಲಿ ರಣವೀರ್ ಸಿಂಗ್ ನಾಯಕ ನಟನಾಗಿ ಕಾಣಿಸಿಕೊಳ್ಳಬೇಕಿತ್ತು.
ಸಿನಿಮಾದ ಪ್ರಾರಂಭಿಕ ಹಂತದಲ್ಲಿ ತಂಡದ ಜೊತೆಗಿದ್ದ ರಣವೀರ್, ನಂತರ ಸಿನಿಮಾದಿಂದ ಹೊರ ನಡೆದಿದ್ದಾರೆ. ನಿರ್ದೇಶಕ ಫರ್ಹಾನ್ ಅಖ್ತರ್ ಹೇಳುವಂತೆ ಸಿನಿಮಾಗೆ ಈಗಾಗಲೇ ಸುಮಾರು 45 ಕೋಟಿ ಖರ್ಚಾಗಿದೆ. ಈಗ ಈ ಖರ್ಚನ್ನು ನಟನೇ ಭರಿಸಬೇಕು, ಇಲ್ಲವೇ ಸಿನಿಮಾದಲ್ಲಿ ನಟಿಸಬೇಕೆಂದು ಪಟ್ಟು ಹಿಡಿದು FWICE ಗೆ ದೂರು ನೀಡಿದ್ದಾರೆ. ಆದರೆ FWICE ನೀಡಿದ ನೋಟಿಸ್ಗಳಿಗೆ ನಟ ರಣವೀರ್ ಸಿಂಗ್ ಸರಿಯಾಗಿ ಪ್ರತಿಕ್ರಿಯಿಸದ ಹಿನ್ನಲೆಯಲ್ಲಿ ನಾವು ರಣವೀರ್ನ ಯ ಯಾವುದೇ ಸಿನಿಮಾದಲ್ಲಿ ಸಹಾಯಕ್ಕೆ ಬರುವುದಿಲ್ಲವೆಂದು ಒಕ್ಕೂಟ ತಿಳಿಸಿದೆ, (ಏಜನ್ಸೀಸ್).