ಪೆದ್ದಿ ಚಿತ್ರಕ್ಕೆ 8 ಕೋಟಿ ಸಂಭಾವನೆ ಪಡೆದ ಜಾನ್ವಿ ಕಪೂರ್​ 
ಬಾಲಿವುಡ್

ವಿವಾದದ ನಡುವೆಯೂ 250 ಕೋಟಿ ಲೂಟಿ ಮಾಡಿದ ಪೆದ್ದಿ: ಸಂಭಾವನೆಯಲ್ಲಿ ಹೊಸ ದಾಖಲೆ ಬರೆದ ಜಾನ್ವಿ ಕಪೂರ್! Janhvi Kapoor Remuneration

ಪ್ರಮುಖ ಮುಖ್ಯಾಂಶಗಳು

  • ತೆಲುಗಿನಲ್ಲಿ ಜಾನ್ವಿ ಕಪೂರ್ ಹೊಸ ದಾಖಲೆ!
  • ಪೆದ್ದಿ ಚಿತ್ರಕ್ಕೆ 8 ಕೋಟಿ ಸಂಭಾವನೆ ಪಡೆದ ನಟಿ
  • ವಾದಗಳ ನಡುವೆಯೂ 250 ಕೋಟಿ ಕಲೆಕ್ಷನ್ ಮಾಡಿದ ಪೆದ್ದಿ
ಸಿನಿಮಾ: ಇತ್ತೀಚೆಗೆ ತೆರೆಕಂಡಿದ್ದ ತೆಲುಗು ನಟ ರಾಮ್​ಚರಣ್​ ಹಾಗೂ ಜಾನ್ವಿ ಕಪೂರ್ ನಟನೆಯ ಪೆದ್ದಿ ಸಿನಿಮಾ ಕೇವಲ ವಿವಾದದ ಮೂಲಕವೇ ಕೋಟ್ಯಾಂತರ ರೂಪಾಯಿ ಕಲೆಕ್ಷನ್​ ಮಾಡಿತ್ತು. ಸಿನಿಮಾದಲ್ಲಿ ನಾಯಕ ನಟಿ ಜಾನ್ವಿ ಕಪೂರ್​ಳನ್ನು ಕೇವಲ ದೇಹ ಪ್ರದರ್ಶನ, ಹಾಗೂ ಲೈಂಗಿಕ ಲುಕ್​ಗೊಸ್ಕರ ಮಾತ್ರ ಸಿನಿಮಾದಲ್ಲಿ ಇಟ್ಟುಕೊಳ್ಳಲಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿತ್ತು.
ಆದರೆ, ಏನೇ ವಿವಾದವಾದರೂ ಸಿನಿಮಾ 250 ಕೋಟಿಗೂ ಅಧಿಕ ಸಂಪಾದನೆ ಮಾಡಿದೆ. ಜೊತೆಗೆ ಜಾನ್ವಿ ಕಪೂರ್​ (Janhvi Kapoor Remuneration) ಕೂಡ ನೂತನ ವೈಯಕ್ತಿಕ ದಾಖಲೆಯೊಂದನ್ನು ಬರೆದಿದ್ದಾರೆ.

8 ಕೋಟಿ ಸಂಭಾವನೆ ಪಡೆದ ನಟಿ!

ಪೆದ್ದಿ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಚ್ಚಿಯಮ್ಮಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜಾನ್ವಿ ಕಪೂರ್​ ಈ ಸಿನಿಮಾದಲ್ಲಿ ಅವರು ಬರೊಬ್ಬರಿ 8 ಕೋಟಿ ರೂಪಾಯಿ ಪಡೆದಿದ್ದಾರೆಂದು ತಿಳಿದು ಬಂದಿದೆ.
ಈ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ದಿನದಿಂದ ಜಾನ್ವಿ ಪಡೆದಿರುವ ಅತ್ಯಧಿಕ ಚೆಕ್​ ಇದಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಜೂನಿಯರ್​ ಎನ್​ಟಿಆರ್​ ಜೊತೆ ನಟಿಸಿದ್ದ ದೇವರಾ ಸಿನಿಮಾಗೆ ಜಾನ್ವಿ 5 ಕೋಟಿ ಸಂಭಾವನೆ ಪಡೆದಿದ್ದರು.
ಸದ್ಯ ಬಾಲಿವುಡ್​​ಗಿಂತ ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿರುವ ಜಾನ್ವಿ ಕಪೂರ್​, ನಟಿಸಿರುವ ಎರಡು ಸಿನಿಮಾ(ದೇವರಾ ಮತ್ತು ಪೆದ್ದಿ) ಗಳು ಸೂಪರ್​ ಹಿಟ್​ ಆಗಿದ್ದು ಶೇ.100 ರಷ್ಟು ಸಕ್ಸಸ್​ ರೇಟ್​ ಹೊಂದಿರುವ ನಟಿಯಾಗಿ ಹೊರಹೊಮ್ಮಿದ್ದಾರೆ. ಮುಂದಿನ ದಿನಗಳಲ್ಲಿ ನಟಿ ಅಲ್ಲು ಅರ್ಜುನ್​ ನಟನೆಯ ರಾಖಾ ಸಿನಿಮಾದಲ್ಲಿ ಸಹ ಕಾಣಿಸಿಕೊಳ್ಳಲ್ಲಿದ್ದು, ತೆಲುಗು ಪ್ರೇಕ್ಷಕರು ಜಾನ್ವಿಗೆ ಮಣೆಹಾಕಿದ್ದಾರೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್​).