ಆದಿತ್ಯ ಧರ್​ ಒಬ್ಬ ಸೂಪರ್​ ಸ್ಟಾರ್​ ನಿರ್ದೇಶಕ: ಕಂಗನಾ 
ಬಾಲಿವುಡ್

ಹಾಲಿವುಡ್​ ನಿರ್ದೇಶಕರ ಸಾಲಿಗೆ ಸೇರಿದ ಆದಿತ್ಯ ಧರ್​: ಇವನೊಬ್ಬ ಸೂಪರ್​ ಸ್ಟಾರ್​ ನಿರ್ದೇಶಕ ಎಂದಿದ್ದೇಕೆ ಕಂಗನಾ?Kangana Ranaut Praises Aditya Dhar

ಪ್ರಮುಖ ಮುಖ್ಯಾಂಶಗಳು

  • ಬಾಕ್ಸ್​ ಆಫೀಸಿನಲ್ಲಿ ಧೂಳೆಬ್ಬಿಸುತ್ತಿರುವ ಧುರಂಧರ್​ 2
  • ಆದಿತ್ಯ ಧರ್​ ಒಬ್ಬ ಸೂಪರ್​ ಸ್ಟಾರ್​ ನಿರ್ದೇಶಕ: ಕಂಗನಾ
  • ಸೂಪರ್ ಸ್ಟಾರ್ ನಟರು ನಿರ್ದೇಶಕರನ್ನು ಬೆಳೆಯಲು ಬಿಡಲ್ಲ
  • ಆದಿತ್ಯ ಧರ್​ ಈಗ ಹಾಲಿವುಡ್​ ನಿರ್ದೇಶಕರ ಖ್ಯಾತಿಯನ್ನು ಗಳಿಸಿದ್ದಾರೆ
ಬಾಲಿವುಡ್​: ಗುರುವಾರ (ಮಾರ್ಚ್​ 19) ಧುರಂಧರ್​ 2: ದಿ ರಿವೆಂಜ್​ ಸಿನಿಮಾ ತೆರೆಕಂಡ ಬೆನ್ನಲ್ಲೇ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಲು ಪ್ರಾರಂಭಿಸಿದೆ. ತೆರೆಕಂಡ ಮೊದಲ ದಿನವೇ ಸುಮಾರು 143 ಕೋಟಿ ಗಳಿಸುವ ಮೂಲಕ ಅತ್ಯಧಿಕ ಹಣ ಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಸಿನಿಮಾ ಬಿಡುಗಡೆಯಾದ ದಿನದಿಂದ ಪರ-ವಿರೋಧ ಚರ್ಚೆಗೆ ವೇದಿಕೆಯಾಗಿ ಪರವರ್ತನೆಗೊಂಡಿದ್ದು, ಕೆಲವರು ಈ ಸಿನಿಮಾವನ್ನು ಮೆಚ್ಚಿ ಹೊಗಳಿದರೆ, ಇನ್ನು ಕೆಲವರು ಈ ಸಿನಿಮಾ ಕೇವಲ ಒಂದು ಪ್ರೊಪಗಾಂಡಾ ಎಂದು ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.

ಆದಿತ್ಯ ಧರ್​ ಒಬ್ಬ ಸೂಪರ್​ ಸ್ಟಾರ್​ ನಿರ್ದೇಶಕ!

ಧುರಂಧರ್​ ಸಿನಿಮಾ ವೀಕ್ಷಿಸಿದ ಬಳಿಕ ಬಾಲಿವುಡ್​ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಸಿನಿಮಾದ ನಿರ್ದೇಶಕ ಆದಿತ್ಯ ಧರ್​ನನ್ನು ಒಬ್ಬ ಸೂಪರ್​ ಸ್ಟಾರ್​ ನಿರ್ದೇಶಕ (Kangana Ranaut Praises Aditya Dhar) ಎಂದು ಹೊಗಳಿದ್ದಾರೆ.
ಹಾಲಿವುಡ್​ನಲ್ಲಿ ಕೆಲ ಸಿನಿಮಾಗಳು ಅಲ್ಲಿ ಅಭಿನಯಿಸುವ ನಟರಿಗಿಂತ ನಿರ್ದೇಶಕರ ಕಾರಣದಿಂದಲೇ ಸಿನಿಮಾ ಯಶಸ್ವಿಯಾಗುತ್ತದೆ. ಅಲ್ಲಿ ಕೆಲ ನಿರ್ದೇಶಕರು ನಟರಿಗಿಂತ ಖ್ಯಾತನಾಮರಾಗಿರುತ್ತಾರೆ. ಉದಾ: ಕ್ವಿನ್​ಟಂನ್​ ಟರಾನ್​ಟಿನೋ, ನೋಲನ್​ ಇತ್ಯಾದಿ.
ಆದರೆ ನಮ್ಮ ಭಾರತದಲ್ಲಿ ಈ ಸೂಪರ್ ಸ್ಟಾರ್​ಗಳು ನಿರ್ದೇಶಕರು ಖ್ಯಾತಿ ಗಳಿಸುವುದನ್ನು ತಡೆಯುತ್ತಾರೆ. ಒಂದು ಸಿನಿಮಾ ಗೆಲ್ಲ ಬೇಕೆಂದರೆ ಅಲ್ಲಿ ಎಲ್ಲರಿಗಿಂತ ಹೆಚ್ಚು ಕೆಲಸ ಮಾಡಿ ಕಡಿಮೆ ಸಂಭಾವನೆ ಪಡೆಯುವವರೆಂದರೆ ಅದು ನಿರ್ದೇಶಕರು. ಆದರೆ ನಮ್ಮ ಚಿತ್ರರಂಗಕ್ಕೆ ಈಗ ಒಬ್ಬ ಸೂಪರ್​ ಸ್ಟಾರ್​ ನಿರ್ದೇಶಕ ದೊರೆತ್ತಿದ್ದಾರೆ.
ಆದಿತ್ಯ ಧರ್ ತನ್ನ ಸಿನಿಮಾದ ಮೂಲಕ ಜನರ ಮನಸ್ಸನ್ನು ಗೆಲ್ಲುವ ಜೊತೆಗೆ ತನ್ನ ರೀತಿಯಲ್ಲಿ ಕಥೆ ಹೇಳ ಬಯಸುವ ಸಾಕಷ್ಟು ಯುವ ನಿರ್ದೇಶಕರಿಗೆ ಸಹ ಮಾದರಿಯಾಗಿದ್ದಾರೆ ಎಂದು ಕಂಗನಾ ತನ್ನ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಧುರಂಧರ್​ 2 ಬಗ್ಗೆ

ಧುರಂಧರ್​ 2 ಇದು ಧುರಂಧರ್​ ಸಿನಿಮಾದ ಎರಡನೇ ಭಾಗವಾಗಿದೆ. ಈ ಸಿನಿಮಾವು ಕರಾಚಿಯ ಲಿಯಾರಿಗೆ ತೆರಳಿರುವ ಭಾರತದ ಗುಪ್ತಚರನ ಕುರಿತು ನಿರ್ಮಿಸಲಾಗಿರುವ ಒಂದು ಕಾಲ್ಪನಿಕ ಕಥೆಯಾಗಿದೆ. ಅದರೆ ಈ ಸಿನಿಮಾದಲ್ಲಿ ಹಲವು ನೈಜ ಘಟನೆಗಳ ಸನ್ನಿವೇಶಗಳನ್ನು ಸೇರಿಸಿಕೊಂಡಿರುವ ಕಾರಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್​, ರಾಕೇಶ್​ ಬೇಡಿ, ಆರ್​.ಮಾಧವನ್​, ಅರ್ಜುನ್​ ರಾಂಪಾಲ್​, ಡ್ಯಾನಿಶ್​ ಇಕ್ಬಾಲ್​, ಸಾರಾ ಅರ್ಜುನ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉರಿ: ದಿ ಸರ್ಜಿಕಲ್​ ಸ್ಟ್ರೈಕ್​ ಸಿನಿಮಾದ ನಿರ್ದೇಶಕ ಆದಿತ್ಯ ಧರ್​ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ,(ಏಜನ್ಸೀಸ್​).