ಈ ಫೋಟೋದಲ್ಲಿರುವ ಬಾಲಕಿ ಯಾರೆಂದು ಗುರುತಿಸುವಿರಾ?
- ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇರುತ್ತದೆ
- ಬಾಲ್ಯದಲ್ಲಿ ಹೇಗಿದ್ದರು? ಸಿನಿಮಾಗೆ ಬರುವ ಮುಂಚೆ ಹೇಗೆ ಕಾಣುತ್ತಿದ್ದರು ಎಂದು ತಿಳಿಯುವ ಬಯಕೆ ಇರುತ್ತೆ
- ನಾವೊಂದು ಫೋಟೋವನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇವೆ ಅದನ್ನು ಮೇಲೆ ನೋಡಬಹುದು
- ಈ ಫೋಟೋದಲ್ಲಿರುವ ಬಾಲಕಿ ಭಾರತೀಯ ಚಿತ್ರರಂಗದ ಮೊದಲ ಲೇಡಿ ಸೂಪರ್‌ಸ್ಟಾರ್
Actress Childhood Photo : ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್ ಹಾಗೂ ವಾಚ್ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಬಾಲ್ಯದಲ್ಲಿ ಹೇಗಿದ್ದರು? ಸಿನಿಮಾಗೆ ಬರುವ ಮುಂಚೆ ಹೇಗೆ ಕಾಣುತ್ತಿದ್ದರು ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ.
ಪ್ರಸ್ತುತ ನಾವೊಂದು ಫೋಟೋವನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇವೆ. ಆ ಫೋಟೋವನ್ನು ನೀವು ಮೇಲೆ ನೋಡಬಹುದು. ಅದೊಂದು ವೈಟ್ ಅಂಡ್ ಬ್ಲ್ಯಾಕ್ ಫೋಟೋ ಆಗಿದ್ದು, ಅದರಲ್ಲಿ ಬಾಲಕಿಯೊಬ್ಬಳು ಹೇರ್ ಬ್ಯಾಂಡ್ ಧರಿಸಿ, ಮಂದಹಾಸ ಬೀರುತ್ತಾ, ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈಕೆ ಸಾಮಾನ್ಯ ಬಾಲಕಿ ಅಲ್ಲ ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗವನ್ನು ಆಳಿದ ಮಹಾನ್ ಕಲಾವಿದೆ. ಕೇವಲ ಬಾಲಿವುಡ್ ಮಾತ್ರವಲ್ಲ, ತೆಲುಗು ಮತ್ತು ತಮಿಳಿನಲ್ಲೂ ನಟನೆ ಮಾಡುವ ಮೂಲಕ ಬಹುಭಾಷಾ ನಟಿ ಎಂಬ ಹೆಗ್ಗಳಿಕೆ ಪಡೆದರು. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುವ ಮೂಲಕ ಭಾರತೀಯ ಸಿನಿಮಾ ರಂಗದ ಮೊದಲ ಲೇಡಿ ಸೂಪರ್‌ಸ್ಟಾರ್ ಎಂಬ ಹೆಗ್ಗಳಿಕೆ ಗಳಿಸಿದರು. ಕೇವಲ ನಟನೆ ಮಾತ್ರವಲ್ಲ ತಮ್ಮ ಸೌಂದರ್ಯದಿಂದಲೇ ಬಹುದೊಡ್ಡ ಅಭಿಮಾನಿ ಬಳಗವನ್ನು ಕಟ್ಟಿದ ಈ ನಟಿ ಇಂದು ನೆನಪು ಮಾತ್ರ. ಈ ನಟಿ ದುಬೈನಲ್ಲಿ ದುರಂತ ಸಾವಿಗೀಡಾದರು. ಇವರ ಪತಿ ಬಾಲಿವುಡ್ನ ಖ್ಯಾತ ನಿರ್ಮಾಪಕ. ಇನ್ನು ಈ ನಟಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅದರಲ್ಲಿ ಒಬ್ಬಳು ಪ್ರಸ್ತುತ ಬಾಲಿವುಡ್ನ ಸ್ಟಾರ್ ನಟಿಯಾಗಿದ್ದಾಳೆ. ಇಷ್ಟೆಲ್ಲ ಸುಳಿವು ನೀಡಿದ ಬಳಿಕ ಆಕೆ ಯಾರೆಂದು ಎಲ್ಲರಿಗೂ ಗೊತ್ತಾಗಿರುತ್ತದೆ. ಇನ್ನೂ ಗೊತ್ತಾಗಿಲ್ಲ ಅಂದರೆ, ಮುಂದೆ ಓದಿ ಉತ್ತರ ಸಿಗಲಿದೆ.
ಅಂದಹಾಗೆ, ಈ ಮೇಲಿನ ಫೋಟೋದಲ್ಲಿರುವುದು ಬೇರೆ ಯಾರೂ ಅಲ್ಲ ಅವರೇ ಭಾರತೀಯ ಚಿತ್ರರಂಗದ ರಾಣಿ ದಿವಂಗತ ಶ್ರೀದೇವಿ.
ಅಂದಹಾಗೆ, ಶ್ರೀದೇವಿ ಅವರು ಭಾರತೀಯ ಸಿನಿಮಾ ಜಗತ್ತಿನ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಒಬ್ಬರಾಗಿದ್ದರು. 1963ರ ಫೆಬ್ರವರಿ 13ರಂದು ತಮಿಳುನಾಡಿನ ಶಿವಕಾಶಿಯಲ್ಲಿ ಜನಿಸಿದರು. ಬಾಲ್ಯದಿಂದಲೇ ನಟನೆಯಲ್ಲಿ ಆಸಕ್ತಿ ತೋರುತ್ತಿದ್ದರು. ತಮ್ಮ ಮೂರನೇ ವಯಸ್ಸಿನಲ್ಲಿ ತೆಲುಗು ಚಿತ್ರ 'ಕಂದನ್ ಕರ್ಣನ್'ನಲ್ಲಿ ನೃತ್ಯ ಮಾಡುವ ಮೂಲಕ ಚಿತ್ರರಂಗ ಪ್ರವೇಶಿಸಿದರು.
ತಮಿಳು, ತೆಲುಗು, ಹಿಂದಿ ಸೇರಿದಂತೆ ಬಹುಭಾಷಾ ಚಿತ್ರಗಳಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡರು. ಅವರ ವೃತ್ತಿಜೀವನದ ಸುವರ್ಣ ಯುಗವು 1980ರ ದಶಕದಲ್ಲಿ ಶುರುವಾಯಿತು. ಹಿಂದಿಯ 'ಚಾಲ್ಬಾಜ್', ನಾಗಿನಾ, ಮಿಸ್ಟರ್ ಇಂಡಿಯಾ ಹಾಗೂ ಚಾಂದಿನಿ ಸಿನಿಮಾಗಳಲ್ಲಿ ಅವರ ಅಭಿನಯ ಎಲ್ಲರ ಗಮನ ಸೆಳೆದವು. ದಕ್ಷಿಣ ಭಾರತದಲ್ಲಿ '16 ವಯತ್ತಿನಿಲಿ', ಕ್ಷಣ ಕ್ಷಣಂ, ಜದಗೇಕ ವೀರುಡು ಮತ್ತು 'ವರ್ಗಂ' ಸಿನಿಮಾಗಳಲ್ಲಿ ನಟಿಸಿ ಸೂಪರ್‌ಸ್ಟಾರ್ ಆದರು.
ಪದ್ಮಶ್ರೀ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಶ್ರೀದೇವಿ ಪಡೆದಿದ್ದಾರೆ. 2018ರ ಫೆಬ್ರುವರಿ 24ರಂದು ದುಬೈನಲ್ಲಿ ಶ್ರೀದೇವಿ ನಿಧನರಾದರು. ಕೆಲವರು ಕಾಲು ಜಾರಿ ಬಿದ್ದು ಗಾಯಗೊಂಡು ನಿಧನರಾದರು ಎನ್ನುತ್ತಾರೆ. ಆದರೆ, ಅವರ ಸಾವಿನ ನಿಗೂಢತೆ ಇನ್ನೂ ಹಾಗೇ ಉಳಿದಿದೆ. ಅವರ, ಪತಿ ಬೋನಿ ಕಪೂರ್ ಬಾಲಿವುಡ್ನ ಖ್ಯಾತ ನಿರ್ಮಾಪಕರು. ಅವರು ಮಗಳು ಜಾಹ್ನವಿ ಕಪೂರ್ ಬಾಲಿವುಡ್ನ ಸ್ಟಾರ್ ನಟಿಯಲ್ಲಿ ಒಬ್ಬರು.
ಅಂದಹಾಗೆ, ಶ್ರೀದೇವಿ ಅವರು ಭಾರತೀಯ ಸಿನಿಮಾ ರಂಗದ ಮಹಿಳಾ ಶಕ್ತಿಯ ಸಂಕೇತವಾಗಿ ಉಳಿದಿದ್ದಾರೆ. ಅವರ ನಟನೆ, ನೃತ್ಯ ಮತ್ತು ಕಾಮಿಡಿ ಟೈಮಿಂಗ್ ಸಿನಿಮಾ ಪ್ರಿಯರ ಹೃದಯದಲ್ಲಿ ಇಂದಿಗೂ ಶಾಶ್ವತವಾಗಿ ಉಳಿದಿದೆ, (ಏಜೆನ್ಸೀಸ್).