ತಮ್ಮ ಬಾಲ್ಯದಿನದಲ್ಲಿ ಅನುಭವಿಸಿದ್ದ ನೋವನ್ನು ಹಂಚಿಕೊಂಡ ಜಾನ್ವಿ ಕಪೂರ್
- ತಮ್ಮ ಬಾಲ್ಯದಿನದಲ್ಲಿ ಅನುಭವಿಸಿದ್ದ ನೋವನ್ನು ಹಂಚಿಕೊಂಡ ಜಾನ್ವಿ ಕಪೂರ್
- ನನ್ನ 15ನೇ ವಯಸ್ಸಿನಲ್ಲೇ ನನ್ನ ಫೋಟೋವನ್ನು ಪಾರ್ನ್ ಸೈಟ್‌ಗೆ ಅಪ್‌ಲೋಡ್ ಮಾಡಿದ್ದರು
- ಸಹಪಾಠಗಳ ಕೃತ್ಯದಿಂದ ದುಃಖಿತಳಾದಿದ್ದ ನಟಿ
ಮುಂಬೈ: ಇತ್ತೀಚೆಗೆ ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಾಲಿವುಡ್ ನಟಿ ಜಾನ್ವಿ ಕಪೂರ್ (Janhvi Kapoor) ತಮ್ಮ ಶಾಲಾ ದಿನದಲ್ಲಿ ಅನುಭವಿಸಿದ ನೋವಿನ ಸಂಗತಿಯೊಂದರ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.
ಪಾರ್ನ್ ಸೈಟ್‌ನಲ್ಲಿ ನನ್ನ ಚಿತ್ರ ಹರಿದಾಡಿತ್ತು!
ಭಾರತದ ಖ್ಯಾತ ಯೂಟ್ಯೂಬ್ರ್ ರಾಜ್ ಶಮಾನಿ ಅವರ ಪಾಡ್ಕಾಸ್ಟ್ನಲ್ಲಿ ತಮ್ಮ ಜೀವನದ ಏಳು-ಬೀಳುಗಳ ಬಗ್ಗೆ ಮಾತನಾಡಿರುವ ಜಾನ್ವಿ ಕಪೂರ್, ತಮ್ಮ ಬಾಲ್ಯದಲ್ಲಿ ಸಂಭವಿಸಿದ ಆಘಾತಕಾರಿ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ.
ನನಗೆ ಆವಾಗ ಸುಮಾರು 15 ವರ್ಷ ಇರಬೇಕು, ಆಗ ನನ್ನ ಕೆಲ ಸಹಪಾಠಿಗಳು ನನ್ನ ಫೋಟೊವನ್ನು ಪಾರ್ನ್ ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಇದು ಅವರಿಗೆ ಏನೋ ಒಂದು ರೀತಿಯ ಸಂತೋಷವನ್ನು ತಂದಿರಬೇಕು, ಆದರೆ ನಾನು ಈ ಘಟನೆಯಿಂದ ತುಂಬಾ ನೊಂದುಕೊಂಡಿದ್ದೆ ಎಂದು ದುಃಖ ವ್ಯಕ್ತ ಪಡಿಸಿದ್ದಾರೆ.
ಈಗೀನ ದಿನದಲ್ಲಿ ಕೃತಕ ಬುದ್ಧಿಮತ್ತೆ (Ai) ಬಳಸಿಕೊಂಡು ನಿಮ್ಮ ಫೋಟೊಗಳನ್ನು ಮಾರ್ಪ್ ಮಾಡಿ ಎಲ್ಲೆಡೆ ಹರಡಲಾಗುತ್ತಿದೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ರಾಜ್ ಕೇಳಿದಾಗ ಜಾನ್ವಿ ತಮ್ಮ ಬಾಲ್ಯದಲ್ಲಿ ನಡೆದ ಈ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ನನ್ನ ಮಾನಸಿಕ ಅರೋಗ್ಯ ಹಾಳಾಗುತ್ತಿದೆ
ಕೃತಕ ಬುದ್ಧಿಮತ್ತೆ ಎನ್ನುವುದನ್ನು ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳಬೇಕು, ಆದರೆ ಕೆಲವೊಬ್ಬರು ಇದನ್ನು ತಪ್ಪು ಕೃತ್ಯಗಳನ್ನು ಎಸಗಲು ಬಳಸುತ್ತಿರುವುದು ಆತಂಕಕಾರಿಯಾಗಿದೆ ಎಂದು ಜಾನ್ವಿ ಹೇಳಿದ್ದಾರೆ.
ಎಐ ಅನ್ನು ಬಳಸಿಕೊಂಡು ನನ್ನ ಸಾವಿರಾರು ಫೋಟೊ ಮತ್ತು ವಿಡಿಯೋಗಳನ್ನು ಅಶ್ಲೀಲ ರೀತಿಯಲ್ಲಿ ಚಿತ್ರಿಸಿದ್ದಾರೆ. ಇದರಿಂದ ನನಗೆ ತುಂಬಾ ಕಿರಿಕಿರಿ ಮತ್ತು ಇದು ನನ್ನ ಮಾನಸಿಕ ಆರೋಗ್ಯದ ಮೇಲೆ ಸಹ ಪರಿಣಾಮ ಬೀರಿದೆ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನೈತಿಕತೆ ಇಲ್ಲದಾಗಿದೆ
ನನ್ನನ್ನು ನಿಜ ಜೀವನದಲ್ಲಿ ಒಮ್ಮೆಯೂ ನೋಡದವರಿಗೆ ಈ ಎಐ ವಿಡಿಯೋಗಳಲ್ಲಿ ಅಥವಾ ಮಾರ್ಪ್ ಆದ ಫೋಟೊಗಳಲ್ಲಿ ಹೇಗೆ ಕಾಣಿಸುತ್ತೇನೋ ನಾನು ನಿಜ ಜೀವನದಲ್ಲಿ ಸಹ ಹಾಗೆಯೇ ಇದ್ದೆನೆ ಅನ್ನಿಸುತ್ತದೆ.
ನಾನು ಎಂದಿಗೂ ಧರಿಸದ ಬಟ್ಟೆಯನ್ನು ನನ್ನ ಮೈಮೇಲೆ ಹಾಕುತ್ತಾರೆ, ಇದು ನಿಜಕ್ಕೂ ಅಸಹ್ಯಕರವಾಗಿದೆ. ಈ ರೀತಿಯ ಪೋಟೊಗಳನ್ನು ನನಗೆ ನೋಡಿ-ನೋಡಿ ಸಾಕಾಗಿದೆ, ಈ ಸೋಶಿಯಲ್ ಮೀಡಿಯಾದಲ್ಲಿ ಇರುವ ಕೆಲವರಿಗೆ ನೈತಿಕತೆಯೇ ಇಲ್ಲವಾಗಿದೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ನನಗೆ ಇದರ ಬಗ್ಗೆ ಮಾತನಾಡಲು ಇಷ್ಟವಾಗಲ್ಲ
ಈ ರೀತಿಯ ಫೋಟೊ ಮತ್ತು ವಿಡಿಯೋಗಳು ನನ್ನ ಮೇಲೆ ಪರಿಣಾಮ ಬೀರುತ್ತವಾದರೂ, ನಾನು ಈ ಕುರಿತು ಯಾವುದೇ ಹೇಳಿಕೆ ಅಥವಾ ದೂರನ್ನು ನೀಡಲು ಹೋಗುವುದಿಲ್ಲ. ಏಕೆಂದರೆ ನನ್ನ ಧ್ವನಿಗೆ ಇನ್ನೂ ಅಷ್ಟು ಶಕ್ತಿಯಿಲ್ಲ ಎಂದು ನಾನು ಭಾವಿಸುತ್ತೆನೆ.
ಹಾಗೆಯೇ ಇದು ನನ್ನೊಬ್ಬಳದೇ ಸಮಸ್ಯೆಯಲ್ಲ, ಚಿತ್ರರಂಗದ ಬಹುತೇಕ ನಟಿಯರು ಈ ಸಮಸ್ಯೆಯನ್ನು ಎದುರಿಸಿದ್ದಾರೆ ಮತ್ತು ಕೆಲವರು ಧ್ವನಿ ಎತ್ತಿದ್ದಾರೆ. ಆದರೆ ಇದು ಸಂಪೂರ್ಣವಾಗಿ ನಿಂತಿದೆಯೇ? ಇಲ್ಲವಲ್ಲ ಎನ್ನುವುದು ಜಾನ್ವಿ ಅವರ ವಾದವಾಗಿದೆ,(ಏಜನ್ಸೀಸ್).