Skin care ಸಾಂದರ್ಭಿಕ ಚಿತ್ರ
- ಚಳಿಗಾಲದಲ್ಲಿ ಹೊಳೆಯುವ ಚರ್ಮವನ್ನು ಕಾಪಾಡಿಕೊಳ್ಳುವುದು ಸುಲಭ ಅಲ್ಲ
- ಅನೇಕರಿಗೆ ಚರ್ಮದ ಹೊಳಪನ್ನು ಕಾಪಾಡಿಕೊಳ್ಳಲು ಬಹಳ ಕಷ್ಟಕರವಾಗಿರುತ್ತದೆ
- ಚರ್ಮದ ಆರೈಕೆಗೆ ಬಾಳೆಹಣ್ಣಿನ ಸಿಪ್ಪೆ ಪ್ರಯೋಜನವಾಗಿದೆ
- ಬಾಳೆಹಣ್ಣಿನ ಉಪಯೋಗವು ಚರ್ಮವನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ
Skin care: ಚಳಿಗಾಲದಲ್ಲಿ ಹೊಳೆಯುವ ಚರ್ಮವನ್ನು ಕಾಪಾಡಿಕೊಳ್ಳುವುದು ಸುಲಭದ ಕೆಲಸವೇನಲ್ಲ. ಅನೇಕರಿಗೆ ಚರ್ಮದ ಹೊಳಪನ್ನು ಕಾಪಾಡಿಕೊಳ್ಳಲು ಬಹಳ ಕಷ್ಟಕರವಾಗಿರುತ್ತದೆ. ಹಾಗಾಗಿ ನಾನಾ ರೀತಿಯ ಕ್ರೀಮ್ಗಳನ್ನು ಬಳಸುತ್ತಾರೆ. ಅಥವಾ ಇನ್ನಿತರ ಔಷಧಿಗಳನ್ನು ಬಳಸಲು ಪ್ರಾರಂಭಿಸುತ್ತಾರೆ. ಆದರೆ, ಚರ್ಮದ ಆರೈಕೆಗೆ ಬಾಳೆಹಣ್ಣಿನ ಸಿಪ್ಪೆ ಪ್ರಯೋಜನವಾಗಿದೆ ಎಂದು ಹಲವಾರು ಜನರಿಗೆ ತಿಳಿದಿಲ್ಲ. ಇದರ ಉಪಯೋಗವು ಚರ್ಮವನ್ನು ಬಿಗಿಗೊಳಿಸಲು ಸಹಾಯ ಮಾಡಿ, ಯೌವನವನ್ನು ಮರಕಳಿಸುವಂತೆ ಮಾಡುತ್ತದೆ.
1. ಹಣ್ಣಿನ ಸಿಪ್ಪೆಯಿಂದ ಚರ್ಮವನ್ನು ಉಜ್ಜಿರಿ
ಬಾಳೆಹಣ್ಣು ನೈಸರ್ಗಿಕವಾಗಿ ಚರ್ಮದ ಆರೋಗ್ಯವನ್ನು ಕಾಪಾಡಲು ಬಳಸುವಂತಹ ಪದಾರ್ಥವಾಗಿದೆ. ಆದರಿಂದ ಇದರ ಸಿಪ್ಪೆಯನ್ನು ನಿಮ್ಮ ಚರ್ಮಕ್ಕೆ ಉಜ್ಜುವುದರಿಂದ ಇದು ಶುಷ್ಕತೆಯನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಉರಿಯೂತವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಮೊದಲಿಗೆ ಮುಖ ತೊಳೆದು ಒಣಗಿಸಿಕೊಳ್ಳಿ. ನಂತರ ಬಾಳೆಹಣ್ಣಿನ ಸಿಪ್ಪೆಯ ಒಳಭಾಗವನ್ನು ತೆಗೆದುಕೊಂಡು ನಿಮ್ಮ ಮುಖದ ಮೇಲೆ 10 ನಿಮಿಷಗಳ ಕಾಲ ಮಸಾಜ್ ಮಾಡಿ ನಂತರ ತಣ್ಣೀರಿನಿಂದ ತೊಳೆಯಿರಿ.
2. ಹಣ್ಣಿನ ಸಿಪ್ಪೆಯ ಫೇಸ್ಪ್ಯಾಕ್
ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6, ಬಿ12, ಆಂಟಿಆಕ್ಸಿಡೆಂಟ್‌ಗಳು ಮತ್ತು ಸತು ಹೆಚ್ಚಾಗಿ ಇರುತ್ತದೆ. ಇದು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ಅರ್ಧ ಬಾಳೆ ಹಣ್ಣನ್ನು ಮತ್ತು ಅದರ ಸಿಪ್ಪೆಯನ್ನು ಮಿಕ್ಸ್ ಮಾಡಿ. ಅದಕ್ಕೆ ಒಂದು ಟೀ ಚಮಚ ಮೊಸರು, ಜೇನುತುಪ್ಪ ಮತ್ತು ರೋಸ್ ವಾಟರ್ ಸೇರಿಸಿ ಪೇಸ್ಟ್ ತಯಾರಿಸಿಕೊಂಡು 10 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ.
3. ಹಣ್ಣಿನ ಸಿಪ್ಪೆ ಸ್ಕ್ರಬ್
ಈ ಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು ಚರ್ಮದ ಸುತ್ತಲೂ ಸ್ಕ್ರಬ್ ಮಾಡುವುದರಿಂದ ಇದು ಚರ್ಮದಿಂದ ಸತ್ತ ಜೀವಕೋಶಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಹಾಗಾಗಿ ಕತ್ತರಿಸಿದ ಹಣ್ಣಿನ ಸಿಪ್ಪೆಯಲ್ಲಿ 1 ಟೀ ಚಮಚ ಅರಿಶಿನ, ಕಂದು ಸಕ್ಕರೆ ಮತ್ತು ಜೇನುತುಪ್ಪವನ್ನು ಬೆರೆಸಿ, ಅದನ್ನು ನಿಮ್ಮ ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
4. ಬಾಳೆಹಣ್ಣಿನ ಕಣ್ಣಿನ ಪ್ಯಾಚ್
ನಿಮ್ಮ ಕಣ್ಣುಗಳಲ್ಲಿ ಊತ, ಕಪ್ಪು ಕಲೆಗಳು ಕಂಡುಬಂದರೆ, ಕಣ್ಣಿನ ಮೇಲೆ ಈ ಹಣ್ಣುಗಳನ್ನು ಕತ್ತರಿಸಿ ಇಟ್ಟುಕೊಳ್ಳಿ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಜೀವಸತ್ವಗಳು ಕಣ್ಣುಗಳ ಕೆಳಗೆ ಊತ ಮತ್ತು ಕಪ್ಪು ವೃತ್ತಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಬಾಳೆಹಣ್ಣಿನ ಸಿಪ್ಪೆಯನ್ನು ಎರಡು ತುಂಡುಗಳಾಗಿ ಕತ್ತರಿಸಿ ಫ್ರಿಜ್ನಲ್ಲಿಡಿ. ನಂತರ ಅದನ್ನು ತೆಗೆದು ನಿಮ್ಮ ಕಣ್ಣುಗಳ ಕೆಳಗೆ ಇರಿಸಿ 20 ನಿಮಿಷಗಳ ನಂತರ ತೆಗೆಯಿರಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.