Lipstick Removal Tips 
ಸೌಂದರ್ಯ

ತುಟಿ ಆರೋಗ್ಯ ಕಾಪಾಡಿಕೊಳ್ಳುತ್ತಾ..ಲಿಪ್​ಸ್ಟಿಕ್​​​ ತೆಗೆದು ಹಾಕೋದು ಹೇಗೆ; ಇಲ್ಲಿವೆ ಸುಲಭ ಟಿಪ್ಸ್​..Lipstick Removal Tips

ಮಮತಾ

ಪ್ರಮುಖ ಮುಖ್ಯಾಂಶಗಳು

  • ತುಟಿಗೆ ದೀರ್ಘಕಾಲ ಅಂಟಿಕೊಂಡ ಲಿಪ್​ಸ್ಟಿಕ್ ತೆಗೆದು ಹಾಕೋದು ಹೇಗೆ?.
  • ಎಣ್ಣೆ, ವ್ಯಾಸ್​ಲಿನ್​ ಬಳಕೆ ಮಾಡಿ ಸುಲಭವಾಗಿ ಲಿಪ್​ಸ್ಟಿಕ್​ ರಿಮೂವ್​ ಮಾಡಬಹುದು.
  • ತುಟಿಗೆ ಗ್ಲಿಸರಿನ್​ ಲೇಪಿಸಿ ಮೆತ್ತನೆ ಮಸಾಜ್​ ಮಾಡಿ ತೊಳೆದುಕೊಳ್ಳುವುದಲೂ ಸುಲಭವಾಗಿ ತೆಗೆದು ಹಾಕಬಹುದು.
Lipstick Removal Tips: ಲಿಪ್​ಸ್ಟಿಕ್​​​​ ಮಹಿಳೆಯರ ಅಂದವನ್ನು ದುಪ್ಪಟ್ಟು ಮಾಡುತ್ತದೆ. ಲಿಪ್​ಸ್ಟಿಕ್​ ಹಚ್ಚಿದ ಮಹಿಳೆಯರನ್ನು ನೋಡುತ್ತಲೇ ಇರಬೇಕು ಎನಿಸುತ್ತದೆ ಎನ್ನುವುದರಲ್ಲಿ ತಪ್ಪಾಗೋದಿಲ್ಲ. ಇದಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಈ ಹಿಂದೆ ರಾಜಮನೆತನದ ರಾಣಿಯರು ನೈಸರ್ಗಿಕವಾಗಿ ತಯಾರಿ ಮಾಡಲಾದ ಬಣ್ಣ ಬಳಕೆ ಮಾಡುತ್ತಿದ್ದರು. ಆದರೆ, ಕಾಲಕ್ರಮೇಣ ಬಂದ 24 ಗಂಟೆಗಳ ಕಾಲ ಲಿಪ್​ಸ್ಟಿಕ್​​ಗಳು ಕೆಲವೊಮ್ಮೆ ಕಿರಿಕಿರಿ ಮಾಡುತ್ತದೆ. ಹೀಗಾಗಿ ಇಂದು ಇದನ್ನು ಸಲೀಸಾಗಿ ತೆಗೆಯೋದು ಹೇಗೆ ಎನ್ನುವುದರ ಬಗ್ಗೆ ಮಾಹಿತಿ ಪಡೆದುಕೊಳ್ಳೋಣ.
ಲಿಪ್​ಸ್ಟಿಕ್​ ಖರೀದಿ ಮಾಡುವಾಗ ಕಡಿಮೆ ದರದ, ಹಾನಿಕಾರಕ ವಸ್ತು ಖರೀದಿ ಮಾಡುವುದಕ್ಕಿಂತ ಒಂದೇ ಬಾರಿಗೆ ಹೆಚ್ಚು ಬೆಲೆಯ, ಗುಣಮಟ್ಟದ ವಸ್ತು ಖರೀದಿ ಮಾಡುವುದು ಬೆಸ್ಟ್. ಕೆಲವೊಂದು ಬೇಗನೇ ಮಾಯವಾಗಿ ಬಿಟ್ಟರೆ, ಕೆಲವೊಂದು ಎಷ್ಟೇ ತಿಕ್ಕಿ ತೊಳೆದರೂ ಹೋಗೋದಿಲ್ಲ ಅಂತಹ ಸಮಯದಲ್ಲಿ ಸಿಂಪಲ್​​ ಟ್ರಿಕ್ಸ್​ಗಳನ್ನು ಬಳಕೆ ಮಾಡಿ.

ಲಿಪ್​ಸ್ಟಿಕ್​​ ರಿಮೂವ್​ ಮಾಡಲು ಏನು ಮಾಡಬೇಕು?
ವ್ಯಾಸ್ಲಿನ್​ ಬಳಕೆ ಮಾಡಿ

ಗಟ್ಟಿಯಾಗಿ ಅಂಟಿಕೊಂಡ ಲಿಪ್​ಸ್ಟಿಕ್​ ಸೋಪ್​ ಹಾಕಿ ಉಜ್ಜಿದರೂ ರಿಮೂವ್​ ಆಗದೇ ಇದ್ದಾಗ ವ್ಯಾಸ್​ಲಿನ್​​ ಬಳಕೆ ಮಾಡಿ. ವ್ಯಾಸ್​ಲಿನ್​ ಅನ್ನು ತುಟಿಗೆ ಹಚ್ಚಿ ಟಿಶ್ಯೂ ಅಥವಾ ಹತ್ತಿಯಿಂದ ನಿಧಾನವಾಗಿ ರಿಮೂವ್​ ಮಾಡಿ. ಆಗ ಕಿಂಚಿತ್ತು ಇಲ್ಲದೆ, ನಿಮ್ಮ ಆಹಾರಕ್ಕೆ ಅಡ್ಡಿ ಮಾಡದೆ ಹೋಗಲಾಡಿಸಬಹುದು.

ಫೇಸ್​ವಾಶ್ ಬಳಸಿ

ನೀವು ನಿತ್ಯ ನಿಮ್ಮ ಮುಖ ತೊಳೆಯಲು ಬಳಕೆ ಮಾಡುವ ಕ್ಲೆನ್ಸರ್​ ಅಥವಾ ಫೇಸ್​​ವಾಶ್ ಎಂದು ಕರೆಸಿಕೊಳ್ಳುವ ಈ ಸಾಧನವನ್ನು ಹತ್ತಿಯಲ್ಲಿ ಅದ್ದಿ ತುಟ್ಟಿಗೆ ನಿಧಾನವಾಗಿ ರಬ್​ ಮಾಡಿ. ಬಾಯಿಯ ಒಳಗೆ ಹೋಗದಂತೆ ನೋಡಿಕೊಳ್ಳಿ.
ಇದನ್ನೂ ಓದಿ:

ಎಣ್ಣೆ ಬಳಕೆ ಮಾಡಿ

ಸಾಮಾನ್ಯವಾಗಿ ಮೇಕಪ್​ ರಿಮೂವ್​ ಮಾಡಲು ಹಿಂದಿನ ಕಾಲದಲ್ಲಿ ತೆಂಗಿನ ಎಣ್ಣೆ ಬಳಕೆ ಮಾಡಲಾಗುತ್ತಿತ್ತು. ಈಗ ರಿಮೂವ್​ಗೆ ಕ್ರೀಂಗಳಿವೆ. ನಿಮ್ಮ ಬಳಿ ಇಷ್ಟೆಲ್ಲ ಖರೀದಿ ಮಾಡಲು ಹಣವಿಲ್ಲದೇ ಹೋದಲ್ಲಿ ತೆಂಗಿನ ಎಣ್ಣೆ ಅಥವಾ ಆಲಿವ್​ ಎಣ್ಣೆಯನ್ನು ಬಳಕೆ ಮಾಡಬಹುದಾಗಿದೆ.

ಗ್ಲಿಸರಿನ್​ ಬಳಕೆ ಮಾಡಬಹುದು

ತುಟಿಗೆ ಗ್ಲಿಸರಿನ್​ ಲೇಪಿಸಿ ಮೆತ್ತನೆ ಮಸಾಜ್​ ಮಾಡಿ ತೊಳೆದುಕೊಳ್ಳುವುದರಿಂದ ಬಹು ಬೇಗನೇ ಕಲೆ ಮಾಯವಾಗುತ್ತದೆ ಎನ್ನಲಾಗಿದೆ.

ದೀರ್ಘಾವಧಿ ಲಿಪ್​​ಸ್ಟಿಕ್​ ಇರುವಂತೆ ನೋಡಿಕೊಳ್ಳೋದು ಹೇಗೆ?

ಸಾಮಾನ್ಯವಾಗಿ ಕೆಲವರಿಗೆ ಲಿಪ್​ಸ್ಟಿಕ್​ ತುಂಬಾ ಹೊತ್ತು ನಿಲ್ಲೋದಿಲ್ಲ. ಹೀಗಾಗಿ ತುಟಿಗೆ ಮೊದಲು ಲಿಪ್​ಲೈನರ್​ ಹಚ್ಚಿ ನಂತರ ಲಿಪ್​​ಸ್ಟಿಕ್​ ಸ್ಪ್ರೆಡ್​ ಮಾಡಿ. ಇದರಿಂದ ತುಂಬಾ ಹೊತ್ತು ಲಿಪ್​ಸ್ಟಿಕ್​ ತುಟಿಯಲ್ಲಿಯೇ ಉಳಿದುಕೊಳ್ಳುವಂತೆ ನೋಡಿಕೊಳ್ಳಬಹುದಾಗಿದೆ, (ಏಜೆನ್ಸೀಸ್).