Astrology: ನಗುವೆಂಬುದು ಮಾನವನ ನೈಸರ್ಗಿಕ ಗುಣ. ನಾವು ದುಃಖವಾದಾಗ ಹೇಗೆ ಅಳುತ್ತೀವೋ ಸಂತೋಷವಾದಾಗ ಹಾಗೇ ನಗುತ್ತೇವೆ. ಪ್ರತಿನಿತ್ಯ ನಗುವುದರಿಂದ ಇದು ನಮ್ಮ ಮಾನಸಿಕ ಆರೋಗ್ಯದ (mental health) ಮೇಲೆ ಧನಾತ್ಮಕ ಪರಿಣಾಮ ಬರುತ್ತದೆ ಎಂದು ನಂಬಲಾಗಿದೆ. ಯಾವ ವ್ಯಕ್ತಿ ನಗುವುದಿಲ್ಲವೋ ಅವರು ಹೃದಯಘಾತದಂತಹ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.
ಹಿಂದಿನ ಜನರು ನಗುವಿನ ಚಿಕಿತ್ಸೆ ಅಗತ್ಯವಿರಲಿಲ್ಲ ಏಕೆಂದರೆ ಆಗ ಇವರು ನೈಸರ್ಗಿಕವಾಗಿ ನಗುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಜನರ ಒತ್ತಡದ ಜೀವನಶೈಲಿಯಲ್ಲಿ ನಗುವುದನ್ನೇ ಮರೆತಿದ್ದಾರೆ. ಈ ಸಮಸ್ಯೆಗಳನ್ನೆಲ್ಲಾ ಮರೆಮಾಚುವ ಸಲುವಾಗಿ ನಗು ಚಿಕಿತ್ಸೆಯನ್ನು (Laughter therapy) ಬಳಸಲಾಗುತ್ತದೆ. (Astrology) ಜ್ಯೋತಿಷ್ಯದ ಪ್ರಕಾರ, ನಗು ಮತ್ತು ಮಾನಸಿಕ ಆರೋಗ್ಯ ಮತ್ತು ನಡವಳಿಕೆಯ ಬಗ್ಗೆ ಸಾಕಷ್ಟು ಹೇಳುತ್ತದೆ. ಆದರಿಂದ ನಿಮ್ಮ ನಗು ನಿಮ್ಮ ಬಗ್ಗೆ ಏನು ಹೇಳುತ್ತದೆ ಎಂದು ನೋಡೋಣ...
ಇದನ್ನೂ ಓದಿ: ಚಿಂತೆ ಹೆಚ್ಚಿಸಿದ ಚಿನ್ನ: ಇಂದು ಒಂದೇ ದಿನ ಬೆಳ್ಳಿ 8,600 ರೂ. ಏರಿಕೆ; ಶೀಘ್ರವೇ 2 ಲಕ್ಷ ರೂ.ನತ್ತ! | Gold Rates
ಜ್ಯೋತಿಷ್ಯದ ಪ್ರಕಾರ ಯಾವುದೇ ವ್ಯಕ್ತಿಯು ಆತನಲ್ಲಿರುವ ಒತ್ತಡವನ್ನು ನಿರ್ಲಕ್ಷಿಸಿ ಮುಕ್ತವಾಗಿ ನಗುತ್ತಾನೋ ಅವರನ್ನು ಬುದ್ಧಿವಂತರೆಂದು ಕರೆಯುತ್ತಾರೆ. ಹಾಗೆಯೇ ಈ ಜನರು ಗುರು ಗ್ರಹದ ಬಲವಂತಿಕೆಯ ಜನರೆಂದು ಗುರುತಿಸಿಕೊಳ್ಳುತ್ತಾರೆ. ಇದು ಅವರ ಜೀವನದಲ್ಲಿ ಶುಭತೆ, ಜ್ಞಾನ ಮತ್ತು ಸುಖದ ಸೂಚನೆಯನ್ನು ತೋರಿಸುತ್ತದೆ. ಅಂತಹವರು ವಿಶಾಲ ಹೃದಯದವರು, ಸುಖ ಮತ್ತು ಸಮಾಜದಲ್ಲಿ ಆಕರ್ಷಣೀಯರಾಗಿರುತ್ತಾರೆ.
ಜ್ಯೋತಿಷ್ಯದ ಪ್ರಕಾರ ಜೋರಾಗಿ ನಗುವ ಜನರು ಸೂರ್ಯ ಮತ್ತು ಮಂಗಳ ಗ್ರಹಗಳ ಬಲವಂತಿಕೆಯವರೆಂದು ಹೇಳಲಾಗುತ್ತದೆ. ಹಾಗೆಯೇ ಇವರಲ್ಲಿ ಅತಿಯಾದ ಆತ್ಮವಿಶ್ವಾಸ, ನಾಯಕತ್ವ ಗುಣಗಳನ್ನು ಹೊಂದಿರುತ್ತಾರೆ. ಈ ಜನರಿಗೆ ಮಂಗಳ ಗ್ರಹವು ಉತ್ಸಾಹ, ಧೈರ್ಯವನ್ನು ಹೇಳಿ, ನಗುವನ್ನು ಆಕರ್ಷಣೀಯವಾಗಿ ಮಾಡುತ್ತದೆ. ಇದು ಸಿಂಹ ಮತ್ತು ಮೇಷ ರಾಶಿಗಳ ಸೂಚನೆ, ಜೀವನದಲ್ಲಿ ಉತ್ಸಾಹ ಮತ್ತು ಜಯದ ಲಕ್ಷಣ. ಅಂತಹವರು ಧೈರ್ಯಶಾಲಿಗಳು, ಸಮಾಜದಲ್ಲಿ ಆಕರ್ಷಕರಾಗಿರುತ್ತಾರೆ.
ಜ್ಯೋತಿಷ್ಯದ ಪ್ರಕಾರ, ಪದೇಪದೇ ನಗುವ ಜನರನ್ನು ಬುಧ ಗ್ರಹದ ಬಲವಂತಿಕೆಯವರೆಂದು ಕರೆಯುತ್ತಾರೆ. ಬುಧ ಬುದ್ಧಿ, ವಾಕ್ಚಾತುರ್ಯ ಮತ್ತು ಸಾಮಾಜಿಕತೆಯ ಕಾರಕನಾಗಿದ್ದು, ಅವರ ನಗು ತ್ವರಿತ, ಚತುರ ಮತ್ತು ಸೌಹಾರ್ದಪೂರ್ಣವಾಗಿ ಹರಡುತ್ತದೆ. ಇದು ಜೀವನದಲ್ಲಿ , ಸಂತೋಷ ಮತ್ತು ಸುಖವನ್ನು ನೀಡುತ್ತದೆ. ಈ ರೀತಿಯ ಜನರು ಸಮಾಜದಲ್ಲಿ ಆಕರ್ಷಕವಾಗಿರುತ್ತಾರೆ.
ಇದನ್ನೂ ಓದಿ: ಗೆಲುವಿನ ಪತಾಕೆ ಹಾರಿಸಿದ ಕೆ.ಎಲ್. ರಾಹುಲ್! ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಗೆದ್ದ ಭಾರತ | IND vs WI
ಜ್ಯೋತಿಷ್ಯದ ಪ್ರಕಾರ, ಯಾವ ವ್ಯಕ್ತಿ ಮುಗುಳ್ನಗೆಯನ್ನು ಬೀರುತ್ತಾರೋ ಅಂತಹ ಜನರನ್ನು ಶುಕ್ರ ಗ್ರಹದ ಬಲವಂತಿಕೆಯವರೆಂದು ಕರೆಯುತ್ತಾರೆ. ಶುಕ್ರ ಸೌಂದರ್ಯ, ಆಕರ್ಷಣೆ ಮತ್ತು ಸೌಖ್ಯದ ಕಾರಕನಾಗಿದ್ದು, ಅವರ ನಗು ಮೃದು, ಮನಮೋಹಕ ಮತ್ತು ಸೌಮ್ಯವಾಗಿ ಹರಡುತ್ತದೆ. ಇದು ಜೀವನದಲ್ಲಿ ಪ್ರೀತಿ, ಸೌಭಾಗ್ಯ ಮತ್ತು ಸೌಂದರ್ಯದ ಸೂಚನೆ. ಅಂತಹವರು ಸೌಜನ್ಯವಂತರೂ, ಸಮಾಜದಲ್ಲಿ ಆಕರ್ಷಣೀಯರಾಗಿರುತ್ತಾರೆ. ಹಾಗೆಯೇ ಈ ಜನರು ಆದಷ್ಟು ಧೈರ್ಯಶಾಲಿಗಳಾಗಿ ಇರುತ್ತಾರೆ ಎಂದು ನಂಬಲಾಗಿದೆ. (ಏಜೆನ್ಸೀಸ್)
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.