ಮನೆಯಲ್ಲಿ ಹಕ್ಕಿ ಗೂಡು ಕಟ್ಟಿದರೆ ಅದು ಶುಭ ಸಂಕೇತ ಆದ್ರೆ ಈ ಪಕ್ಷಿಯ ಗೂಡು ಕೆಡಕಿನ ಮುನ್ಸೂಚನೆ! Vastu 
ಜ್ಯೋತಿಷ್ಯ

ಮನೆಯಲ್ಲಿ ಹಕ್ಕಿ ಗೂಡು ಕಟ್ಟಿದರೆ ಅದು ಶುಭ ಸಂಕೇತ ಆದ್ರೆ ಈ ಪಕ್ಷಿಯ ಗೂಡು ಕೆಡಕಿನ ಮುನ್ಸೂಚನೆ! Vastu

ಪ್ರಮುಖ ಮುಖ್ಯಾಂಶಗಳು

  • ಮನೆಯ ವಿಚಾರಕ್ಕೆ ಬಂದಾಗ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ
  • ವಾಸ್ತು ನಿಯಮಗಳನ್ನು ಅನುಸರಿಸಿ ಯಾವುದೇ ಕೆಲಸ ಮಾಡಿದರೆ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತೆ
  • ಒಂದು ವೇಳೆ ವಾಸ್ತು ನಿಯಮ ಉಲ್ಲಂಘಿಸಿದ್ರೆ ಶ್ರೀಮಂತ ಮನೆಗಳು ಸಹ ಬಡವಾಗಲು ಹೆಚ್ಚು ಸಮಯ ತೆಗೆದುಕೊಳ್ಳಲ್ಲ
  • ಮನೆಯಲ್ಲಿ ಹಕ್ಕಿ ಗೂಡು ಕಟ್ಟಿದರೆ ಅದು ಶುಭ ಸಂಕೇತ ಆದ್ರೆ ಈ ಪಕ್ಷಿಯ ಗೂಡು ಕೆಡಕಿನ ಮುನ್ಸೂಚನೆ ಎಚ್ಚರ
Vastu : ಮನೆಯ ವಿಚಾರಕ್ಕೆ ಬಂದಾಗ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಈ ಗ್ರಂಥವು ಮನೆಯನ್ನು ನಿರ್ಮಿಸುವ ಮತ್ತು ಅದಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ತಿಳಿಸುತ್ತದೆ. ವಾಸ್ತು ನಿಯಮಗಳನ್ನು ಅನುಸರಿಸಿ ಯಾವುದೇ ಕೆಲಸವನ್ನು ಮಾಡಿದರೆ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ ಮತ್ತು ಕುಟುಂಬವು ಸಮೃದ್ಧವಾಗುತ್ತದೆ ಎಂದು ಬಲವಾಗಿ ನಂಬಲಾಗಿದೆ. ಅದೇ ಸಮಯದಲ್ಲಿ, ಅದನ್ನು ಉಲ್ಲಂಘಿಸಿದರೆ, ಶ್ರೀಮಂತ ಮನೆಗಳು ಸಹ ಬಡವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಹಿಂದು ಧರ್ಮದಲ್ಲಿ ಬಲವಾಗಿ ನಂಬಲಾಗಿದೆ.
ಅಂದಹಾಗೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪಕ್ಷಿಗಳು ಮಾನವ ಜೀವನದ ಪಾಸಿಟಿವ್​ ಹಾಗೂ ನೆಗೆಟಿವ್​ ಶಕ್ತಿಗಳೆರಡನ್ನೂ ಪ್ರತಿನಿಧಿಸುತ್ತವೆ. ವಾಸ ಮಾಡುವ ಮನೆಯಲ್ಲಿ ಹಕ್ಕಿಗಳು ಗೂಡು ಕಟ್ಟಿ ಮೊಟ್ಟೆಯಿಟ್ಟರೆ ಅದನ್ನು ಅತ್ಯಂತ ಶುಭ ಶಕುನವೆಂದು ಪರಿಗಣಿಸಲಾಗುತ್ತದೆಯಲ್ಲದೆ, ಇದು ಮನೆಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆಯಿದೆ.
ಆದರೆ, ಅದೇ ಸಮಯದಲ್ಲಿ ಕೆಲವು ನಿರ್ದಿಷ್ಟ ಪಕ್ಷಿಗಳ ಆಗಮನ ಅಥವಾ ಉಪಸ್ಥಿತಿಯು ಭವಿಷ್ಯದಲ್ಲಿ ಎದುರಾಗಬಹುದಾದ ಕಷ್ಟಗಳ ಮುನ್ಸೂಚನೆ ಅಥವಾ ಎಚ್ಚರಿಕೆಯ ಸಂಕೇತವೂ ಆಗಿರಬಹುದು. ಹಾಗಾಗಿ, ಮನೆಯಲ್ಲಿ ಹಕ್ಕಿ ಗೂಡು ಕಟ್ಟುವುದು ಒಳಿತೇ ಅಥವಾ ಕೆಡಕೇ ಎಂಬುದನ್ನು ಆಯಾ ಪಕ್ಷಿಗಳ ಸ್ವರೂಪ ಮತ್ತು ಅವು ಗೂಡು ಕಟ್ಟುವ ದಿಕ್ಕಿನ ಆಧಾರದ ಮೇಲೆ ಜ್ಯೋತಿಷ್ಯದಲ್ಲಿ ಸೂಕ್ಷ್ಮವಾಗಿ ವಿಶ್ಲೇಷಿಸಲಾಗುತ್ತದೆ.
ಮನೆಯಲ್ಲಿ ಹಕ್ಕಿಗಳು ಗೂಡು ಕಟ್ಟಿ ಮೊಟ್ಟೆಯಿಟ್ಟರೆ ಅದರಿಂದ ವಿಶೇಷ ಪ್ರಯೋಜನಗಳಿದ್ದು, ಹಕ್ಕಿಗಳು ವಾಸಿಸುವ ಜಾಗದಲ್ಲಿ ಸುಖ, ಶಾಂತಿ ಹಾಗೂ ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆಯಿದೆ. ಆದಾಗ್ಯೂ, ಕೆಲವು ನಿರ್ದಿಷ್ಟ ಪಕ್ಷಿಗಳ ಉಪಸ್ಥಿತಿಯನ್ನು ಜ್ಯೋತಿಷ್ಯದಲ್ಲಿ ಅಶುಭ ಎಂದು ಪರಿಗಣಿಸಲಾಗುತ್ತದೆ. ಶಕುನ ಶಾಸ್ತ್ರದ ಪ್ರಕಾರ, ಮನೆಯೊಳಗೆ ಕಾಡುಕೋಳಿ ಅಥವಾ ಬಟೇರ್ ಹಕ್ಕಿಯ ಮೊಟ್ಟೆ ಬಿದ್ದರೆ, ಆ ಕುಟುಂಬದ ಆರ್ಥಿಕ ಪ್ರಗತಿ ಹಾಗೂ ಅದೃಷ್ಟವು ದುಪ್ಪಟ್ಟಾಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ, ಅಂತಹ ಮನೆಯಲ್ಲಿ ಸದಾ ಪಾಸಿಟಿವ್​ ಶಕ್ತಿ ವೃದ್ಧಿಸುವುದರ ಜೊತೆಗೆ ನೆಮ್ಮದಿಯ ವಾತಾವರಣ ಇರಲಿದ್ದು, ಸಂಪತ್ತಿನ ಕೊರತೆ ಎದುರಾಗುವುದಿಲ್ಲ ಎನ್ನಲಾಗುತ್ತದೆ.
ಇನ್ನು ಮನೆಯಲ್ಲಿ ಬಾವಲಿ ಮತ್ತು ಜೇನುನೊಣಗಳ ಉಪಸ್ಥಿತಿಯನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬಾವಲಿಗಳು ನೆಗೆಟಿವ್​ ಶಕ್ತಿಯನ್ನು ಪ್ರತಿನಿಧಿಸುವುದರಿಂದ ಅವು ಮನೆಯಲ್ಲಿ ಗೂಡು ಕಟ್ಟಿದರೆ ಅದನ್ನು ದುರಾದೃಷ್ಟದ ಸಂಕೇತ ಎನ್ನಲಾಗುತ್ತದೆ.
ಅದೇ ರೀತಿ ವಾಸ್ತು ಶಾಸ್ತ್ರದ ಪ್ರಕಾರ, ಮನೆಯೊಳಗೆ ಜೇನುನೊಣಗಳು ಗೂಡು ಕಟ್ಟಿದರೆ ಅದನ್ನು ಅತ್ಯಂತ ಅಶುಭವೆಂದು ಭಾವಿಸಲಾಗುತ್ತದೆಯಲ್ಲದೆ, ತಕ್ಷಣವೇ ಅದನ್ನು ಅಲ್ಲಿಂದ ತೆರವುಗೊಳಿಸಲು ಸೂಚಿಸಲಾಗುತ್ತದೆ. ಏಕೆಂದರೆ ಮನೆಯಲ್ಲಿ ಜೇನುಗೂಡು ಇರುವುದರಿಂದ ಕುಟುಂಬದ ಸದಸ್ಯರ ನಡುವೆ ಅನಗತ್ಯ ಕಲಹಗಳು ಉಂಟಾಗಬಹುದು ಅಥವಾ ಭಾರಿ ಆರ್ಥಿಕ ನಷ್ಟ ಎದುರಾಗಬಹುದು ಎಂಬ ಬಲವಾದ ನಂಬಿಕೆಯಿದೆ.
ಮನೆಯಲ್ಲಿ ಜೇನುಗೂಡು ಇರುವುದರಿಂದ ಆರ್ಥಿಕ ಪ್ರಗತಿ ಕುಂಠಿತಗೊಳ್ಳುತ್ತದೆ ಮತ್ತು ಅನಗತ್ಯ ಖರ್ಚುಗಳು ಹೆಚ್ಚಾಗಿ ಸಾಲದ ಬಾಧೆ ಎದುರಾಗಬಹುದು ಎಂಬ ನಂಬಿಕೆಯಿದೆ. ಶಕುನ ಶಾಸ್ತ್ರದ ಪ್ರಕಾರ, ಜೇನುನೊಣಗಳು ಮನೆಯೊಳಗೆ ಗೂಡು ಕಟ್ಟಿ ಮೊಟ್ಟೆಯಿಡುವುದು ಭವಿಷ್ಯದಲ್ಲಿ ಎದುರಾಗಬಹುದಾದ ದೊಡ್ಡ ಕಷ್ಟಗಳು ಅಥವಾ ಆಕಸ್ಮಿಕ ತೊಂದರೆಗಳ ಮುನ್ಸೂಚನೆ ಎನ್ನಲಾಗುತ್ತದೆ. ವೈಜ್ಞಾನಿಕವಾಗಿ ಹಾಗೂ ಪ್ರಾಯೋಗಿಕವಾಗಿ ನೋಡುವುದಾದರೆ, ಮನೆಯಲ್ಲಿ ಜೇನುಗೂಡು ಇದ್ದರೆ ಮಕ್ಕಳಿಗೆ ಅಥವಾ ಇತರರಿಗೆ ಜೇನುನೊಣಗಳು ಕಚ್ಚುವ ಅಪಾಯ ಸದಾ ಇರುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್​ ನೆಟ್​ ಸೈಟ್ ಜವಾಬ್ದಾರರಾಗಿರುವುದಿಲ್ಲ.