ಎಐ ಸಹಾಯದಿಂದ ನಿರ್ಮಿಸಿದ ಚಿತ್ರ 
ಜ್ಯೋತಿಷ್ಯ

ಸಂಪತ್ತು, ಆರೋಗ್ಯಕ್ಕಾಗಿ ದೀಪಾವಳಿ ಹಬ್ಬಕ್ಕೆ ಮೊದಲ ದೀಪ ಎಲ್ಲಿ ಹಚ್ಚಬೇಕು; ವಾಸ್ತು ಶಾಸ್ತ್ರ ಹೇಳೋದೇನು?..Vastu Tips

  • ದೀಪಾವಳಿ ಹಬ್ಬದ ಮೊದಲ ದಿನ ದೀಪವನ್ನು ಯಾವ ದಿಕ್ಕಿನಲ್ಲಿ ಹಚ್ಚಬೇಕು?.

  • ಈಶಾನ್ಯ ದಿಕ್ಕಿನಲ್ಲಿ ದೀಪ ಹಚ್ಚಿದರೆ ದಾರಿದ್ರ್ಯ ದೂರ, ಆರ್ಥಿಕ ಸಮೃದ್ಧಿ ಗ್ಯಾರಂಟಿ.

  • ದೇವರ ಕೋಣೆಯ ಮುಂದೆ ಮೊದಲ ದೀಪವನ್ನು ಹಚ್ಚುವುದು...ವಾಸ್ತು ಶಾಸ್ತ್ರದ ಪ್ರಕಾರ ಶ್ರೇಷ್ಠ.

Diya direction as per Vastu Shastra: ದೀಪಾವಳಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ದೀಪ, ದಿನಸಿ ಬಟ್ಟೆ, ಹೂ, ಹಣ್ಣು-ಕಾಯಿ ಖರೀದಿಯ ಭರಾಟೆ ಜೋರಾಗಿದೆ. ಸಾಮಾನ್ಯವಾಗಿ ಹಬ್ಬದ ದಿನ ಸಂಜೆ ಹೊತ್ತು ದೀಪ ಹಚ್ಚಲಾಗುತ್ತದೆ. ಆದರೆ..ವಾಸ್ತು ಶಾಸ್ತ್ರದ ಪ್ರಕಾರ ಹಬ್ಬದ ದಿನ ಹಚ್ಚುವ ದೀಪ ಯಾರು ಹಚ್ಚಬೇಕು, ಮೊದಲು ಎಲ್ಲಿಡಬೇಕು? . ದೀಪದ ಬತ್ತಿ ಯಾವ ದಿಕ್ಕಿಗೆ ಮುಖ ಮಾಡಿರಬೇಕು? ಎಂಬ ಚರ್ಚೆ ಪ್ರತಿ ಮನೆಯಲ್ಲೂ ಸಾಮಾನ್ಯವಾಗಿ ನಡೆಯುತ್ತದೆ;

ಆದರೆ, ವಾಸ್ತು ಶಾಸ್ತ್ರವು ದೀಪದ ದಿಕ್ಕಿನ ಬಗ್ಗೆ ಸ್ಪಷ್ಟವಾದ ಮಾರ್ಗದರ್ಶನವನ್ನು ನೀಡುತ್ತದೆ. ದೀಪದ ಬತ್ತಿಯು ಯಾವ ದಿಕ್ಕಿನತ್ತ ಮುಖ ಮಾಡಿದೆ ಎಂಬುದು ನಮ್ಮ ಮನೆಗೆ ಬರುವ ಆಶೀರ್ವಾದ ಮತ್ತು ಧನಾತ್ಮಕ ಶಕ್ತಿಯನ್ನು ನಿರ್ಧರಿಸುತ್ತದೆ ಎಂದು ನಂಬಲಾಗಿದೆ.

ಪೂರ್ವ ದಿಕ್ಕಿನಲ್ಲಿ ದೀಪದ ಬತ್ತಿ ಇಡಬೇಕು

ನಿಮ್ಮ ಮೊಬೈಲ್​ನಲ್ಲಿರುವ ಕಾಂಪಾಸ್ ಎನ್ನುವ ಅಪ್ಲಿಕೇಷನ್​ ಬಳಕೆ ಮಾಡಿ ನಿಮ್ಮ ಮನೆಯ ಪೂರ್ವ ದಿಕ್ಕನ್ನು ಪತ್ತೆ ಹಚ್ಚಿ, ನಂತರ ದೀಪದ ಬತ್ತಿಯನ್ನು ಪೂರ್ವ ದಿಕ್ಕಿನತ್ತ ಮುಖ ಮಾಡಿ ಇಡಿ. ಇದು ಮನೆಗೆ ಮತ್ತು ಸದಸ್ಯರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಸೂಚಿಸುತ್ತದೆ. ಪೂರ್ವವು ಉದಯಿಸುವ ಸೂರ್ಯನ ದಿಕ್ಕು ಆಗಿರುವುದರಿಂದ, ಪೂಜಾ ಕೋಣೆಯಲ್ಲಿ ಮೊದಲ ದೀಪವನ್ನು ಪೂರ್ವಕ್ಕೆ ಮುಖ ಮಾಡಿ ಹಚ್ಚುವುದು ಆರೋಗ್ಯಕ್ಕೆ ಮತ್ತು ಶಕ್ತಿಗೆ ಅತ್ಯಂತ ಶ್ರೇಷ್ಠ.

ಉತ್ತರ ದಿಕ್ಕಿಗೆ ದೀಪ ಹಚ್ಚಿ

ಉತ್ತರ ದಿಕ್ಕಿಗೆ ಬತ್ತಿ ಹಾಕಿ ಹಚ್ಚುವ ದೀಪವು ಸಂಪತ್ತು ಮತ್ತು ಅವಕಾಶಗಳನ್ನು ಆಕರ್ಷಿಸುತ್ತದೆ. ಉತ್ತರ ದಿಕ್ಕು ಧನಾಧಿಪತಿ ಕುಬೇರ ಹಾಗೂ ತಾಯಿ ಲಕ್ಷ್ಮಿಯ ಕೃಪೆಗೆ ಪಾತ್ರವಾಗಿದೆ. ಲಕ್ಷ್ಮಿ ಪೂಜೆಯ ರಾತ್ರಿ ಹಣದ ಪೆಟ್ಟಿಗೆ ಅಥವಾ ಲಾಕರ್ ಬಳಿ ಉತ್ತರ ದಿಕ್ಕಿಗೆ ಮುಖ ಮಾಡಿದ ದೀಪ ಹಚ್ಚುವುದು ಬಹಳ ಮಂಗಳಕರ.

ದಕ್ಷಿಣ ಮತ್ತು ಪಶ್ಚಿಮ ದಿಕ್ಕು

ಪಶ್ಚಿಮ ದಿಕ್ಕಿನ ಬತ್ತಿಯನ್ನು ಸಾಮಾನ್ಯವಾಗಿ ವಾಸ್ತುವಿನಲ್ಲಿ ತಪ್ಪಿಸಲಾಗುತ್ತದೆ. ಇನ್ನು ದಕ್ಷಿಣ ದಿಕ್ಕು ಯಮನ ದಿಕ್ಕಾಗಿರುವುದರಿಂದ ಸಾಮಾನ್ಯ ದೀಪಗಳನ್ನು ಆ ದಿಕ್ಕಿಗೆ ಹಚ್ಚುವುದಿಲ್ಲ. ಆದರೆ ಧನತ್ರಯೋದಶಿ ದಿನದಂದು ಮಾತ್ರ ಮನೆಯ ಹೊರಗೆ 'ಯಮ ದೀಪದಾನ'ಕ್ಕಾಗಿ ದಕ್ಷಿಣ ದಿಕ್ಕಿಗೆ ಮುಖ ಮಾಡಿ ದೀಪ ಹಚ್ಚುವ ವಿಶೇಷ ನಿಯಮವಿದೆ.

ಮೊದಲ ದೀಪ ಎಲ್ಲಿಡಬೇಕು?

ಮನೆಯ ಪವಿತ್ರ ಸ್ಥಳ ಎಂದು ನಂಬುವುದು ದೇವರಕೋಣೆಯನ್ನು ಅಂದರೆ ಈಶಾನ್ಯ ಮೂಲೆ. ಹಬ್ಬದ ಮೊದಲ ದಿನ ದೀಪವನ್ನು ಈಶಾನ್ಯ ಮೂಲೆಯಲ್ಲಿ ಹಚ್ಚಿ. ಲಕ್ಷ್ಮಿ ಮತ್ತು ಗಣೇಶನ ಮೂರ್ತಿಯ ಮುಂದೆ ದೀಪವಿಟ್ಟು ಪೂಜೆ ಆರಂಭಿಸಬೇಕು.

ತುಪ್ಪದ ದೀಪ ಹಚ್ಚಿ

ದೀಪಾವಳಿಯ ಮೊದಲ ದಿನ ದೇವರ ಕೋಣೆಯ ಎಡ ಮತ್ತು ಬಲ ಬದಿ ಎರಡು ದೀಪವಿಡಿ. ಪ್ಲಾಸ್ಟಿಕ್​ ಅಥವಾ ಲೋಹದ ದೀಪ..ಗಾಜಿನದ್ದು ಬೇಡ. ಮಣ್ಣಿನ ದೀಪ ಧನಾತ್ಮಕ ಶಕ್ತಿಯನ್ನು ಹೆಚ್ಚು ಹಿಡಿದಿಟ್ಟುಕೊಳ್ಳುತ್ತವೆ, (ಏಜೆನ್ಸೀಸ್).