ಜ್ಯೋತಿಷ್ಯ

ದೀಪಾವಳಿ ಹಬ್ಬದ ದಿನ ಈ 3 ತಪ್ಪುಗಳನ್ನು ಮಾಡಿದರೆ, ಲಕ್ಷ್ಮೀ ದೇವಿಯು ನಿಮ್ಮ ಮನೆಯಿಂದ ಹೊರಹೋಗುತ್ತಾಳೆ..Astrology

Astrology: ಸಾಮಾನ್ಯವಾಗಿ ದೀಪಾವಳಿಯನ್ನು ಲಕ್ಷ್ಮೀ ದೇವಿಯನ್ನು ಮೆಚ್ಚಿಸುವ ದಿನ ಎಂದು ಕರೆಯಲಾಗುತ್ತದೆ. ಧರ್ಮ ನಿಷ್ಟೆಯಿಂದ ಪೂಜೆಯ ಕಾರ್ಯವನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ. ಇದನ್ನು ಲಕ್ಷ್ಮಿಯ ಉಪಸ್ಥಿತಿ ಎಂದು ಕರೆಯಲಾಗುತ್ತದೆ. ಲಕ್ಷ್ಮೀ ದೇವಿಯ ಸ್ವಭಾವತಃ ಚಂಚಲಳು ಹಾಗೂ ಕೆಲವೊಮ್ಮೆ ವಿರಳವಾಗಿ ಒಂದೇ ಸ್ಥಳದಲ್ಲಿ ಇರಲು ಬಯಸುತ್ತಾಳೆ. ಹಾಗಾಗಿ ಈ ದಿನದಂದು ಬಹಳ ಎಚ್ಚರದಿಂದ ಇರಬೇಕು.

1. ಸೂರ್ಯೋದಯದ ನಂತರ ಮಲಗಬೇಡಿ

ದೀಪಾವಳಿ ಸಮಯದಲ್ಲಿ ಸಂಪತ್ತು ವೃದ್ಧಿಸಲು ಉಪವಾಸ ಮಾಡುವಂತಹವರು ಸೂರ್ಯೋದಯಕ್ಕೂ ಮುನ್ನ ಹಾಸಿಗೆಯಿಂದ ಎದ್ದೇಳದಿದ್ದರೆ ಲಕ್ಷ್ಮೀ ದೇವಿಯು ಕೋಪಗೊಳ್ಳುತ್ತಾಳೆ. ಆದಾಗ್ಯೂ, ರಾತ್ರಿ ಮಲಗುವ ಮುನ್ನ ಮೊಸರು, ಹಣ್ಣುಗಳ ಆಹಾರ ಸೇವನೆ, ಬೆಳಿಗ್ಗೆ ದೇವರಿಗೆ ತುಪ್ಪ ಮತ್ತು ಪವಿತ್ರ ವಸ್ತುಗಳ ನೈವೇದ್ಯ ಮಾಡುವುದು, ಹಗಲಿನಲ್ಲಿ ನಿದ್ರೆ ಮಾಡದೇ ಇರುವವರ ಮನೆಯಲ್ಲಿ ಲಕ್ಷ್ಮೀ ದೇವಿಯು ನೆನಸಿರುತ್ತಾಳೆ.

2. ನಿಮ್ಮ ಕೊಳಕು ಕೈಗಳಿಂದ ತುಪ್ಪ ಮುಟ್ಟಿದಾಗ ಲಕ್ಷ್ಮೀ ದೇವಿಯು ಕೋಪಗೊಳ್ಳುತ್ತಾಳೆ

ಯಾವುದೇ ಗೃಹಣಿಯು ಮನೆಯಲ್ಲಿ ಅಡುಗೆ ಮಡುವಾಗ ಕೊಳಕಾದ ಕೈಗಳಿಂದ ತುಪ್ಪವನ್ನು ಮುಟ್ಟುತ್ತಾಳೋ ಅಲ್ಲಿ ಲಕ್ಷ್ಮಿ ವಾಸಿಸುವುದಿಲ್ಲ ಎಂದು ಹೇಳುತ್ತಾಳೆ. ಹಾಗೆಯೇ ಯಾವ ಮನೆಯಲ್ಲಿ ಸೊಸೆ ತನ್ನ ಅತ್ತೆಯನ್ನು ಸೇವಕಿಯಂತೆ ಭಾವಿಸುತ್ತಾಳೋ ಅಥವಾ ತೊಂದರೆ ನೀಡುತ್ತಾಳೋ ಅಂತಹ ಮನೆಯಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ ಎಂದು ತಿಳಿಸಲಾಗುತ್ತದೆ.

3. ಪ್ರತಿನಿತ್ಯ ಗಂಡ ಹೆಂಡತಿ ಜಗಳವಾಡಿದಾಗ ಅಂತಹ ಮನೆಯಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ

ಪ್ರತಿಯೊಬ್ಬರ ಮನೆಯಲ್ಲೂ ಗಂಡ ಹೆಂಡತಿ ಜಗಳ ಸಾಮಾನ್ಯವಾಗಿರುವಂತಹದು. ಕೆಲವೊಮ್ಮೆ ಈ ಜಗಳಗಳು ವಾದ ವಿವಾದಕ್ಕೆ ಭಗುಲೆದ್ದಾಗ ಅಥವಾ ತಮ್ಮ ಅರ್ಧಾಂಗಿಗಳ ನಷ್ಟವನ್ನು ನೋಡಿ ಕುಷಿಪಡುತ್ತಾರೆ. ಇಂತಹ ಮನೆಯಲ್ಲಿ ಲಕ್ಷ್ಮಿ ದೇವಿಯು ಇರಲು ಬಯಸುವುದಿಲ್ಲ. ಹಾಗೆಯೇ ಸ್ನೇಹಿತರ ಏಳೆಗೆಯನ್ನು ಕಂಡು ಅಸೂಯೆ ಮತ್ತು ದ್ವೇಷ ಮಾಡುವಂತವರ ಮನೆಯಲ್ಲಿ ಲಕ್ಷ್ಮೀ ವಾಸಿಸುವುದಿಲ್ಲ. ಅಂತಹ ಜನರು ಜೀವನ ಪರ್ಯಂತ ಬಡತನ ಹೊಂದುತ್ತಾರೆ ಎಂದು ಜ್ಯೋತಿಷ್ಯವು ತಿಳಿಸುತ್ತದೆ.

ಈ ಎಲ್ಲಾ ಕಾರಣದಿಂದ ದೀಪಾವಳಿಯಂದು ಲಕ್ಷ್ಮೀ ದೇವಿಯನ್ನು ಪೂಜಿಸುವುದರೊಂದಿಗೆ, ಅವಳು ಯಾವ ಮನೆಯಲ್ಲಿ ವಾಸಿಸುತ್ತಾಳೆಂದು ಗಮನಿಸಿ, ಜೀವನದಲ್ಲಿ ನಡವಳಿಕೆಯನ್ನು ಅಳವಡಿಸಿಕೊಳ್ಳಬೇಕು. ವಾಸ್ತವದಲ್ಲಿ, ಲಕ್ಷ್ಮೀ ದೇವಿಯ ಹೆಸರು, ಲಕ್ಷ್ಮೀ ದೇವಿಯ ಚಿನ್ಹೆಗಳನ್ನು ಪಾಲಿಸಿದಾಗ ನಮ್ಮ ಮನೆಯ ಸಮೃದ್ಧಿಗೆ ಕಾರಣವಾಗುತ್ತದೆ. ಹಾಗಾಗಿ ದೀಪಾವಳಿಯಂದು ಶ್ರದ್ಧೆ ಹಾಗೂ ಭಕ್ತಿಯಿಂದ ದೀಪಾವಳಿಯನ್ನು ಆಚರಣೆ ಮಾಡಿ.. (ಏಜೆನ್ಸೀಸ್​)

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.