ಜ್ಯೋತಿಷ್ಯ

ಸೂರ್ಯನ ಚಲನೆಯಿಂದ ಈ 3 ರಾಶಿಯವರಿಗೆ ಅದೃಷ್ಟ ಲಕ್ಷ್ಮಿ ಒಲಿದು ಬರುತ್ತಾಳೆ! Astrology

Astrology : ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಪ್ರತಿ ತಿಂಗಳು ಸೂರ್ಯನು ಸಂಚಾರದೊಂದಿಗೆ ಒಂದು ನಕ್ಷತ್ರವು ಬದಲಾಗುತ್ತದೆ. ಇದರಿಂದ ಜನರ ಜೀವನದಲ್ಲಿ ಕೆಲವೊಂದು ಘಟನೆಗಳು ಸಂಭವಿಸಬಹುದು. ಜ್ಯೋತಿಷ್ಯದ ಪ್ರಕಾರ, ಸೂರ್ಯನು (ನ.19) ರಂದು ಅನುರಾಧ ನಕ್ಷತ್ರವನ್ನು ಪ್ರವೇಶಿಸಿ ಡಿಸೆಂಬರ್​ 2 ರವರೆಗೂ ಅಲ್ಲೇ ಇರುತ್ತಾನೆ.

ಈ ವೇಳೆ ಸೂರ್ಯನು ತನ್ನ ಪಥವನ್ನು ಬದಲಾಯಿಸಿಕೊಂಡು ಶನಿಯ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಇದು ಆ ರಾಶಿಯವರ ಜೀವನಕ್ಕೆ ಶಕ್ತಿ, ಸ್ಥಾನ, ಗೌರವ ಮತ್ತು ಆತ್ಮ ವಿಶ್ವಾಸವನ್ನು ತರುತ್ತದೆ. ಹಾಗೆಯೇ ಜೀವನದಲ್ಲಿ ಅಪಾರ ಬದಲಾವಣೆಯನ್ನು ತೋರುತ್ತದೆ ಎಂದು ನಂಬಲಾಗಿದೆ. ಈ ಸಮಯದಲ್ಲಿ ಶನಿಯ ನಕ್ಷತ್ರಕ್ಕೆ ಸೂರ್ಯ ಆಗಮನವಾಗುವುದರಿಂದ ಅನೇಕ ರಾಶಿಚಕ್ರದವರಿಗೆ ಅದೃಷ್ಟ ಎಂದು ನಿರೀಕ್ಷಿಸಲಾಗಿದೆ. ಹಾಗಿದ್ದರೆ ಈ ಬಾರಿ ಸೂರ್ಯ ಯಾವ ರಾಶಿಯನ್ನು ಪ್ರವೇಶಿಸುತ್ತಾನೆ. ಹಾಗೆಯೇ ಅದರ ಲಾಭಗಳೇನು ಎಂದು ನೋಡೋಣ ಬನ್ನಿ...

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಸೂರ್ಯನ ಪ್ರವೇಶದಿಂದ ವೃತ್ತಿಜೀವನದಲ್ಲಿ ಪ್ರಗತಿ ಮತ್ತು ಮನ್ನಣೆಯನ್ನು ಸಾಧಿಸಲು ಒಳ್ಳೆಯ ಸಮಯ ಇದಾಗಿದೆ. ಈ ವೇಳೆ ಕೆಲಸ ಕಾರ್ಯಗಳು ಭರದಿಂದ ಸಾಗುತ್ತವೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಪ್ರಶಂಸೆ ಸಿಗುವಂತಹ ಸಮಯ. ಸರ್ಕಾರಿ ಕೆಲಸಗಳಲ್ಲಿದ್ದ ಅಡತಡೆಗಳು ಕೊನೆಗೊಳ್ಳುತ್ತವೆ. ಈ ದಿನಗಳಲ್ಲಿ ಸಂತೋಷದಿಂದ ಕಾಲ ಕಳೆಯುವಿರಿ.

ಸಿಂಹ ರಾಶಿ

ಸಿಂಹ ರಾಶಿಯವರ ಮೇಲೆ ಸೂರ್ಯ ಪ್ರವೇಶ ಪಡೆಯುವುದರಿಂದ ಉನ್ನತ ಶಿಕ್ಷಣ ಹಾಗೂ ವಿದೇಶ ಪ್ರಯಾಣ ಮಾಡಬೇಕೆಂದು ಯೋಜನೆ ಹಾಕಿದವರಿಗೆ ಶುಭ ದಿನವಾಗಿದೆ. ದೀರ್ಘ ಪ್ರಯಾಣದ ಸಾಧ್ಯತೆಗಳಿದ್ದು, ಸರ್ಕಾರಿ ಉದ್ಯೋಗಗಳು ಹಾಗೂ ಬಡ್ತಿ ಹುಡುಕುವವರಿಗೆ ಒಳ್ಳೆಯ ಸಮಯ ಇದಾಗಿದೆ. ಕುಟುಂಬಸ್ಥರಿಂದ ಬೆಂಬಲ ಸಿಗುತ್ತದೆ. ನೀವು ಮಾಡುವಂತಹ ಕೆಲಸಗಳು ಉತ್ಸಾಹದಿಂದ ಸಾಗುತ್ತದೆ.

ವೃಶ್ಚಿಕ ರಾಶಿ

ಈ ರಾಶಿಯವರು ಹಣ ಮತ್ತು ಹೂಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಒಳ್ಳೆಯ ಸುದ್ಧಿ ಸಿಗುವಂತಹ ಸಮಯ ಇದಾಗಿದೆ. ಪೂರ್ವಜರ ಆಸ್ತಿಯಿಂದ ಉತ್ತಮ ಲಾಭವನ್ನು ಪಡೆಯಲಿದ್ದೀರಿ. ಪಾಲುದಾರಿಕೆಯನ್ನು ಹೊಂದಿದಂತವರು ಆದಷ್ಟು ಎಚ್ಚರಿಕೆ ವಹಿಸುವುದು ಉತ್ತಮವಾಗಿದೆ. ಸೂರ್ಯ ಮತ್ತು ಶನಿಯ ಸಂಯೋಜನೆಯು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಸಂಬಂಧಗಳನ್ನು ಬಲಪಡಿಸುತ್ತದೆ. ಸಂಗಾತಿಯೊಂದಿಗಿನ ಸಾಮರಸ್ಯವು ಕೆಲಸ ಕಾರ್ಯಗಳು ಸುಗಮವಾಗಿ ಸಾಗುವಂತೆ ಮಾಡುತ್ತದೆ. (ಏಜೆನ್ಸೀಸ್​)ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.