Shani Margi 2026 : ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಕರ್ಮಫಲದಾತ ಎಂದು ಕರೆಯಲ್ಪಡುವ ಶನಿದೇವನು ತನ್ನ ವಕ್ರ ನಡೆಯನ್ನು ಬಿಟ್ಟು ನೇರ ಸಂಚಾರಕ್ಕೆ (Shani Margi 2026) ಮರಳುತ್ತಿದ್ದು, ಇದು 12 ರಾಶಿಗಳ ಜೀವನದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಲಿದೆ. ವಿಶೇಷವಾಗಿ ಆರ್ಥಿಕ ಸಂಕಷ್ಟ, ಉದ್ಯೋಗದ ಅಡೆತಡೆ ಮತ್ತು ಕೆಲಸದಲ್ಲಿನ ವಿಳಂಬದಿಂದ ಬಳಲುತ್ತಿದ್ದ ಮೂರು ರಾಶಿಗಳ ಜನರಿಗೆ ಶನಿಯ ಈ ಚಲನೆಯು ಅದೃಷ್ಟದ ಬಾಗಿಲನ್ನು ತೆರೆಯಲಿದ್ದು, ಮುಟ್ಟಿದ್ದೆಲ್ಲಾ ಚಿನ್ನವಾಗುವ ಸುವರ್ಣ ಕಾಲ ಆರಂಭವಾಗಲಿದೆ.
ಪಂಚಾಂಗ ಮತ್ತು ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, 2026ರ ಡಿಸೆಂಬರ್ 11ರಂದು ಮುಂಜಾನೆ 5:01ಕ್ಕೆ ಶನಿದೇವನು ಮೀನ ರಾಶಿಯಲ್ಲಿ ಮಾರ್ಗಿಯಾಗಲಿದ್ದಾನೆ (ನೇರ ಸಂಚಾರ ಆರಂಭಿಸಲಿದ್ದಾನೆ). ಇದಕ್ಕೂ ಮುನ್ನ ಅಂದರೆ ಜುಲೈ 27, 2026ರಿಂದ ಶನಿಯು ವಕ್ರಗತಿಯಲ್ಲಿ ಸಂಚರಿಸುತ್ತಿದ್ದನು. ಸುಮಾರು ನಾಲ್ಕೂವರೆ ತಿಂಗಳ ಕಾಲ ವಕ್ರ ನಡೆಯಲ್ಲಿದ್ದ ಶನಿದೇವನು, ಈಗ ತನ್ನ ಸಾಮಾನ್ಯ ನೇರ ದಿಕ್ಕಿನಲ್ಲಿ ಪ್ರಯಾಣವನ್ನು ಆರಂಭಿಸಲಿದ್ದು, ಮುಂದಿನ ಸುಮಾರು 241 ದಿನಗಳ ಕಾಲ ಇದೇ ಮಾರ್ಗಿ ಸ್ಥಿತಿಯಲ್ಲಿ ಇರಲಿದ್ದಾನೆ ಎಂದು ಜ್ಯೋತಿಷ್ಯ ಗಣನೆಗಳು ತಿಳಿಸುತ್ತವೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ಶಿಸ್ತು, ತಾಳ್ಮೆ, ಕಠಿಣ ಪರಿಶ್ರಮ, ಜವಾಬ್ದಾರಿ ಮತ್ತು ನ್ಯಾಯದ ಕಾರಕ ಎಂದು ಪರಿಗಣಿಸಲಾಗುತ್ತದೆ. ಶನಿಯು ವಕ್ರಗತಿಯಲ್ಲಿದ್ದಾಗ ಹಿಂದೆ ಆರಂಭಿಸಿದ ಕೆಲಸಗಳಲ್ಲಿ ವಿಳಂಬ, ಜವಾಬ್ದಾರಿಗಳ ಒತ್ತಡ ಮತ್ತು ಅನಿರೀಕ್ಷಿತ ಆರ್ಥಿಕ ಸವಾಲುಗಳು ಎದುರಾಗುವುದು ಸಹಜ. ಆದರೆ, ಶನಿಯು ಮಾರ್ಗಿಯಾದಾಗ ಪರಿಸ್ಥಿತಿಯು ಹಂತಹಂತವಾಗಿ ಬದಲಾಗಲಿದ್ದು, ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಕೆಲಸಗಳು ವೇಗ ಪಡೆದುಕೊಳ್ಳುತ್ತವೆ ಮತ್ತು ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಾರಂಭಿಸುತ್ತದೆ. ಡಿಸೆಂಬರ್ 11ರ ಈ ಶನಿ ಮಾರ್ಗಿಯು ವೃಷಭ, ಮಕರ ಮತ್ತು ತುಲಾ ರಾಶಿಯವರಿಗೆ ವಿಶೇಷ ಶುಭಫಲಗಳನ್ನು ತರಲಿದೆ.
ಶನಿಯ ಈ ನೇರ ಸಂಚಾರವು ವೃಷಭ ರಾಶಿಯವರಿಗೆ ಅತ್ಯಂತ ಅನುಕೂಲಕರವಾಗಿರಲಿದೆ ಎಂದು ಜ್ಯೋತಿಷ್ಯ ಭವಿಷ್ಯವಾಣಿಗಳು ಹೇಳುತ್ತವೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಈಗ ಯಶಸ್ವಿಯಾಗಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಈ ಹಿಂದೆ ಎದುರಿಸುತ್ತಿದ್ದ ಎಲ್ಲಾ ಅಡೆತಡೆಗಳು ಕ್ರಮೇಣ ನಿವಾರಣೆಯಾಗಿ ಅದೃಷ್ಟವು ನಿಮ್ಮ ಕೈಹಿಡಿಯಲಿದೆ. ಉದ್ಯೋಗಸ್ಥರು ಕೆಲಸದ ಸ್ಥಳದಲ್ಲಿ ಎದುರಿಸುತ್ತಿದ್ದ ಸಮಸ್ಯೆಗಳಿಂದ ಮುಕ್ತಿ ಪಡೆಯಲಿದ್ದು, ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಮತ್ತು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವ ಸುವರ್ಣಾವಕಾಶಗಳು ಒದಗಿಬರಲಿವೆ. ಆರ್ಥಿಕ ವಿಚಾರದಲ್ಲಿ ಆದಾಯ ಹೆಚ್ಚಾಗುವ ಸ್ಪಷ್ಟ ಸೂಚನೆಗಳಿದ್ದು, ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಹಣ ಉಳಿತಾಯ ಮಾಡುವಲ್ಲಿಯೂ ನೀವು ಯಶಸ್ವಿಯಾಗಲಿದ್ದೀರಿ.
ಮಕರ ರಾಶಿಯವರಿಗೆ ಶನಿಯ ಮಾರ್ಗಿ ಚಲನೆಯು ಆರ್ಥಿಕವಾಗಿ ಭಾರಿ ಬದಲಾವಣೆಗಳನ್ನು ತರಲಿದೆ. ದೀರ್ಘಕಾಲದಿಂದ ಬೇರೆಯವರ ಬಳಿ ಸಿಲುಕಿಕೊಂಡಿದ್ದ ಅಥವಾ ಬಾಕಿ ಉಳಿದಿದ್ದ ಹಣವು ಈಗ ನಿಮ್ಮ ಕೈಸೇರುವ ಯೋಗವಿದೆ. ಈ ಹಿಂದೆ ಕಾಡುತ್ತಿದ್ದ ಆರ್ಥಿಕ ಸಂಕಷ್ಟಗಳು ಹಂತಹಂತವಾಗಿ ಕಡಿಮೆಯಾಗಲಿವೆ. ಸ್ವಂತ ವ್ಯಾಪಾರ-ವ್ಯವಹಾರ ನಡೆಸುವವರಿಗೆ ಹೊಸ ಲಾಭದಾಯಕ ಅವಕಾಶಗಳು ತೆರೆದುಕೊಳ್ಳಲಿದ್ದು, ಮಧ್ಯದಲ್ಲೇ ಸ್ಥಗಿತಗೊಂಡಿದ್ದ ಹಳೆಯ ವ್ಯಾಪಾರ ಯೋಜನೆಗಳನ್ನು ಮತ್ತೆ ಆರಂಭಿಸಲು ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ. ಆದಾಯ ಹೆಚ್ಚಿಸಿಕೊಳ್ಳಲು ಹೊಸ ಮಾರ್ಗಗಳು ಗೋಚರಿಸಲಿದ್ದು, ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.
ತುಲಾ ರಾಶಿಯವರಿಗೆ ಶನಿದೇವನ ನೇರ ಸಂಚಾರವು ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಪ್ರಗತಿಯನ್ನು ತಂದುಕೊಡಲಿದೆ. ನೀವು ಇದುವರೆಗೆ ಮಾಡಿದ ಕಠಿಣ ಪರಿಶ್ರಮಕ್ಕೆ ಈಗ ಸೂಕ್ತ ಮನ್ನಣೆ ಮತ್ತು ಗೌರವ ಸಿಗುವ ಸಾಧ್ಯತೆಯಿದೆ. ಬಹಳ ದಿನಗಳಿಂದ ಬಡ್ತಿಗಾಗಿ ಕಾಯುತ್ತಿರುವ ಉದ್ಯೋಗಿಗಳಿಗೆ ಸಿಹಿ ಸುದ್ದಿ ಸಿಗುವ ನಿರೀಕ್ಷೆಯಿದ್ದು, ಕಚೇರಿಯಲ್ಲಿ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ದೊರೆಯಲಿದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳನ್ನು ಪಡೆಯುವ ಅಥವಾ ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳುವ ಅವಕಾಶಗಳು ಒದಗಿಬರಲಿವೆ. ಅಲ್ಲದೆ, ತುಲಾ ರಾಶಿಯ ವ್ಯಾಪಾರಸ್ಥರಿಗೂ ಪರಿಸ್ಥಿತಿ ಕ್ರಮೇಣ ಅನುಕೂಲಕರವಾಗಿ ಬದಲಾಗಲಿದೆ. ಹಳೆಯ ಸಂಪರ್ಕಗಳು ಮತ್ತು ವ್ಯಾಪಾರ ಸಂಬಂಧಗಳ ಮೂಲಕ ಹೊಸ ಅವಕಾಶಗಳು ಹಾಗೂ ಲಾಭದಾಯಕ ಒಪ್ಪಂದಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ.
ಒಟ್ಟಾರೆಯಾಗಿ, ಡಿಸೆಂಬರ್ 11ರ ನಂತರ ಶನಿಯ ಕೃಪೆಯಿಂದ ಈ ಮೂರು ರಾಶಿಯವರಿಗೆ ಆದಾಯ ಹೆಚ್ಚಿಸಿಕೊಳ್ಳಲು ಮತ್ತು ವೃತ್ತಿಜೀವನದಲ್ಲಿ ಒಂದು ಹೆಜ್ಜೆ ಮುಂದಿಡಲು ಇದು ಅತ್ಯಂತ ಪ್ರಶಸ್ತ ಸಮಯವಾಗಿದೆ ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್ ಜವಾಬ್ದಾರರಾಗುವುದಿಲ್ಲ.