Astrology: ಈ ಬಾರಿಯ ಆಗಸ್ಟ್ 9, 2025 ರಂದು ಬರುವ ಹುಣ್ಣಿಮೆಯು ವಿಶೇಷವಾಗಿದ್ದು, ಈ ಹುಣ್ಣಿಮೆಯನ್ನು ಸ್ಟರ್ಜನ್ ಚಂದ್ರ ಎಂದು ಕರೆಯಲಾಗುತ್ತದೆ. ಇದು ಆಕಾಶದಲ್ಲಿ ನಡೆಯುವ ಘಟನೆಯಾಗಿದ್ದರೂ, ಕೆಲವೊಂದು ರಾಶಿಗಳ ವ್ಯಕ್ತಿಗಳಿಗೆ ಅದೃಷ್ಟ ತರುವ ಹುಣ್ಣಿಮೆಯಾಗಿದೆ. ಭೂಮಿಯ ಮೇಲೆ ಬೀಳುವ ಅತ್ಯಂತ ಶಕ್ತಿಶಾಲಿ ರಾತ್ರಿಗಳಲ್ಲಿ ಈ ರಾತ್ರಿಯೂ ಒಂದಾಗಿದೆ. ಕಿರಣಗಳು ಜನರಿಗೆ ಆಧ್ಯಾತ್ಮಿಕತೆ, ಮನಸಿಕ ಸ್ಪಷ್ಟತೆ, ಆತ್ಮವಿಶ್ವಾಸವನ್ನು ನೀಡುವುದರ ಜೊತೆಗೆ ಅವರ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ಇನ್ನು ಈ ಹುಣ್ಣಿಮೆಯಂದು ಯಾವ ರಾಶಿಯವರಿಗೆ ಅದೃಷ್ಟ ಬರಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ..
ಸಿಂಹ ರಾಶಿಯವರು ಸೂರ್ಯನ ಆಳ್ವಿಕೆಗೆ ಒಳಪಟ್ಟಿರುತ್ತಾರೆ. ಈ ರಾಶಿಯವರಿಗೆ ಈ ದಿನಗಳಲ್ಲಿ ಶಕ್ತಿಯು ಕೆಳಮಟ್ಟದಿಂದ ಮೇಲ್ಮಟ್ಟಕ್ಕೆ ಬದಲಾಗುತ್ತದೆ. ಈ ವ್ಯಕ್ತಿಗಳು ಚೈತನ್ಯಶೀಲರಾಗಿರುತ್ತಾರೆ. ಪೂರ್ಣಿಮೆಯಂದು ಈ ರಾಶಿಯವರಿಗೆ ಪ್ರೀತಿ, ಕಾಳಜಿ, ಸಂಬಂಧ ಮತ್ತು ದೀರ್ಘಕಾಲಿನ ಪಾಲುದಾರಿಕೆ ಸಿಗಲಿದೆ. ಹಾಗೆ ಮದುವೆ ಪ್ರಸ್ತಾಪಗಳು ಬರಲಿವೆ. ಇನ್ನು ಹೊಸದಾಗಿ ಪ್ರೀತಿ ಪಾತ್ರರು ಸಿಗುವ ಸಾಧ್ಯತೆ ಹೆಚ್ಚಿದೆ. ಆರ್ಥಿಕ ಬೆಳವಣಿಗೆಯಲ್ಲಿ ಉತ್ತಮ ಲಾಭ ಕಾಣಬಹುದು.
ಈ ರಾಶಿಯ ಜನರು ಕಠಿಣ ಪರಿಶ್ರಮದ ಚಿಂತೆಯಲ್ಲಿ ಮುಳುಗಿರುತ್ತಾರೆ. ಈ ಹುಣ್ಣಿಮೆಯಂದು ಕೆಟ್ಟ ಸಮಯದಿಂದ ಒಳ್ಳೆಯ ಸಮಯಕ್ಕೆ ಬದಲಾಗಲು ಸಹಾಯ ಮಾಡುತ್ತದೆ. ಹಣ, ಉದ್ಯೋಗ, ಪ್ರೀತಿ, ವೈವಾಹಿಕ ಸಂಬಂಧಗಳಲ್ಲಿ ಅಪಾರ ಬೆಳವಣಿಗೆಗೆ ಸಾಧ್ಯತೆ. ಈ ದಿನ ನಿಮ್ಮ ಜೀವನದ ಸಮತೋಲನ ಕಾಪಾಡಿ, ಆರೋಗ್ಯ ಸುಧಾರಿಸುತ್ತದೆ. ಅಂಧಕಾರದಿಂದ ಬೆಳಕಿನೆಡೆಗೆ ಕರೆದೊಯ್ಯುವ ಕಾರ್ಯವನ್ನು ಮಾಡುತ್ತದೆ. ಸಮೃದ್ಧಿ ಕಾಯರ್ವನ್ನು ಮಾಡಲು ಸಹಾಯ ಮಾಡಿ, ಅದೃಷ್ಟದ ಕಡೆ ಕರೆದೊಯ್ಯುತ್ತದೆ.
ಧನು ರಾಶಿಯವರಿಗೆ ಗುರು ಗ್ರಹದ ಅಧಿಪತಿಯಾಗಿರುತ್ತಾನೆ. ಈ ಹುಣ್ಣಿಮೆಯು ನಿಮ್ಮ ಜೀವನದಲ್ಲಿ ಬಹಳಷ್ಟು ಹಣ ಸಂಪತ್ತನ್ನು ತರಲಿದೆ. ಉದ್ಯೋಗವನ್ನು ಬದಲಾಯಿಸಲು ಪ್ರಯತ್ನಿಸುತ್ತಿರುವವರಿಗೆ ಬೇರೆ ಕೆಲಸಗಳು ಸಿಗುತ್ತದೆ. ತಮ್ಮ ಜೀವನದಲ್ಲಿ ಸಂಭಾವ್ಯ ಬದಲಾವಣೆಯನ್ನು ಮಾಡಲಿದ್ದಾರೆ. ಅವಿವಾಹಿತರಿಗೆ ಉತ್ತಮ ಅವಕಾಶ ಸಿಗುತ್ತದೆ ಮತ್ತು ವಿಶೇಷ ವ್ಯಕ್ತಿಯೊಬ್ಬರು ನಿಮ್ಮ ಜೀವನದಲ್ಲಿ ಪ್ರವೇಶಿಸಬಹುದು. ಈಗಾಗಲೇ ಸಂಬಂಧದಲ್ಲಿರುವವರಿಗೆ ಸ್ಪಷ್ಟತೆ ಸಿಗಲಿದೆ.
ಇದನ್ನೂ ಓದಿ:ಬಾತ್ರೂಮ್ನಲ್ಲೇ ಮಗುವಿಗೆ ಜನ್ಮ ನೀಡಿದಳು! ಕತ್ತು ಹಿಸುಕಿ, ಚೀಲದಲ್ಲಿ ತುಂಬಿ ಕಸದ ಬುಟ್ಟಿಗೆ ಎಸೆದಳು.. Bathroom
ಕುಂಭ ರಾಶಿಯವರಿಗೆ ಶನಿಯು ಅಧಿಪತಿಯಾಗಿದ್ದು, ಹುಣ್ಣಿಮೆ ಕಳೆದ ಕೆಲವು ದಿನಗಳಿಂದ ಅಧಿಕ ಹಣ, ಸಂಪತ್ತನ್ನು ಗಳಿಸುತ್ತೀರಿ. ನಿಮ್ಮ ಎಲ್ಲಾ ಪ್ರಯತ್ನಗಳು ನಿಮ್ಮ ಬೆಳವಣಿಗೆಗೆ ಸಹಾಯ ಮಾಡುತ್ತದೆ. ವಿವಿಧ ವೃತ್ತಿ, ಉದ್ಯಮ ವ್ಯಾಪಾರಿಗಳಿಗೆ ವ್ಯಾಪಾರ ಚೆನ್ನಾಗಿಯಾಗಲಿದೆ. ವೃತ್ತಿಪರರಿಗೆ ಅನೇಕ ರೀತಿಯಲ್ಲಿ ಅವಕಾಶಗಳು ಸಿಗಲಿದೆ. (ಏಜೆನ್ಸೀಸ್)ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.