Numerology: ಸಂಖ್ಯಾಶಾಸ್ತ್ರದಲ್ಲಿ, ವ್ಯಕ್ತಿಯ ಜನ್ಮ ದಿನಾಂಕವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಜನ್ಮ ದಿನಾಂಕದ ಸಹಾಯದಿಂದ, ನಿಮ್ಮ ವೃತ್ತಿಜೀವನದಿಂದ ಹಿಡಿದು ಪ್ರೇಮ ಜೀವನದವರೆಗೆ ಎಲ್ಲದರ ಬಗ್ಗೆಯೂ ನೀವು ತಿಳಿದುಕೊಳ್ಳಬಹುದು.
ಹೌದು, ನಿಮ್ಮ ಜನ್ಮ ದಿನಾಂಕದ ಸಂಖ್ಯೆಗಳನ್ನು ಸೇರಿಸುವ ಮೂಲಕ ನಿಮ್ಮ ಮೂಲ ಸಂಖ್ಯೆಯನ್ನು ನೀವು ಕಂಡುಹಿಡಿಯಬಹುದು. ಉದಾಹರಣೆಗೆ ನೀವು ಯಾವುದೇ ತಿಂಗಳ 23 ರಂದು ಜನಿಸಿದ್ದೀರಿ ಎಂದು ಭಾವಿಸೋಣ, ಆಗ ನಿಮ್ಮ ಮೂಲ ಸಂಖ್ಯೆ 5 ಆಗಿರುತ್ತದೆ, ಏಕೆಂದರೆ 2+3=5. ಹಾಗೆಯೇ, ಮೊದಲನೆಯದಾಗಿ ಜನ್ಮ ದಿನಾಂಕದ ಮೂಲ ಸಂಖ್ಯೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.
ನೀವು ಯಾವುದೇ ತಿಂಗಳ 9, 18, 27ರಂದು ಜನಿಸಿದರೆ, ನಿಮ್ಮ ರಾಶಿ ಸಂಖ್ಯೆ 9 ಆಗಿರುತ್ತದೆ. ಈ ಸಂಖ್ಯೆಯನ್ನು ಜ್ಞಾನ, ಧರ್ಮ ಮತ್ತು ಶಿಕ್ಷಣದ ಗ್ರಹವಾದ ಮಂಗಳ ಆಳುತ್ತಾನೆ. ರಾಶಿ ಸಂಖ್ಯೆ 9 ಹೊಂದಿರುವ ಜನರು ತುಂಬಾ ಪ್ರತಿಭಾನ್ವಿತರು, ಧೈರ್ಯಶಾಲಿಗಳು ಮತ್ತು ಅದೃಷ್ಟವಂತರು ಹಾಗೂ ಅಷ್ಟೇ ಮುಂಗೋಪಿಗಳು.
9ನೇ ಸಂಖ್ಯೆಯನ್ನು ಹೊಂದಿದ ಜನರು ತುಂಬಾ ಧೈರ್ಯಶಾಲಿಗಳು, ಆಕ್ರಮಕಾರಿಗಳು ಹಾಗೂ ಅಧಿಕ ಬಲಿಷ್ಟರಾಗಿದ್ದಾರೆ. ಇವರು ಯಾವುದೇ ಕೆಲಸವನ್ನು ಪ್ರಾರಂಭಿಸಲು ಮತ್ತು ಅದನ್ನೂ ಪೂರ್ಣಗೊಳಿಸಲು ಬಲವಾದ ಇಚ್ಛಾಶಕ್ತಿಯನ್ನು ಹೊಂದಿರುತ್ತಾರೆ. ಆದರೆ, ತಮ್ಮ ಗುರಿಯನ್ನು ಸಾಧಿಸುವ ಪ್ರಯತ್ನದಲ್ಲಿ ಇವರು ಆಕ್ರಮಣಕಾರಿಗಳು ಆಗಬಹುದು.ಇಲ್ಲಿ ಅವರು ತುಂಬಾ ಕೋಪಗೊಳ್ಳುವರು. ಈ ಕೋಪವನ್ನು ನಿಯಂತ್ರಿಸದಿದ್ದರೇ ಸಂಬಂಧಗಳು ಹದಗೆಡಬಹುದು. ಹೀಗಾಗಿ, ಈ ಜನರು ಈ ವಿಷಯಗಳಿಗೆ ಗಮನಕೊಡುವುದು ಉತ್ತಮ.
9ನೇ ಸಂಖ್ಯೆ ಹೊಂದಿದ ಜನರು ಕಠಿಣ ಪರಿಶ್ರಮಿಗಳು ಮತ್ತು ಕುತೂಹಲಿಗಳು, ಆದರೆ ಅವರಿಗೆ ಅಧ್ಯಯನ ಮಾಡಲು ಇಷ್ಟವಿಲ್ಲದಿದ್ದರೆ, ಅವರು ಆ ವಿಷಯದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಶಿಸ್ತು ಮತ್ತು ಗಮನ ಅತ್ಯಗತ್ಯ. 9ನೇ ಸಂಖ್ಯೆಯನ್ನು ಹೊಂದಿರುವವರು ಅಪಾಯಗಳನ್ನು ತೆಗೆದುಕೊಳ್ಳಲು ಹೆದರುವುದಿಲ್ಲ, ಆದರೆ ಕೆಲವೊಮ್ಮೆ ಅವರು ಆತುರದ ನಿರ್ಧಾರಗಳಿಂದಾಗಿ ನಷ್ಟವನ್ನು ಅನುಭವಿಸಬಹುದು. ಇವರು ಸಾಮಾನ್ಯವಾಗಿ ಸಾಮಾಜಿಕ ಮನ್ನಣೆಯನ್ನು ನಿರೀಕ್ಷಿಸುತ್ತಾರೆ ಮತ್ತು ಅದು ಅವರಿಗೆ ಸಿಗದಿದ್ದಾಗ, ಒತ್ತಡಕ್ಕೆ ಒಳಗಾಗಬಹುದು. ಹೀಗಾಗಿ, ಅವರು ಯೋಗ, ಧ್ಯಾನ ಮತ್ತು ನಿಯಮಿತ ವ್ಯಾಯಾಮವು ಅವರ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ.
1 ಒಂದು ತಿಂಗಳ ಕಾಲ ಪ್ರತಿ ಮಂಗಳವಾರ ಕೆಂಪು ಬಟ್ಟೆ ಧರಿಸಿ, ಉಪವಾಸ ಮಾಡಿ
2.ಪ್ರತಿದಿನ ಹನುಮಾನ್ ಚಾಲೀಸ್ ಪಠಿಸಿ
3.ಹಾಗಾಗೇ ರಕ್ತದಾನ ಮಾಡಿ. ಇದು ಈ ಜನರಿಗೆ ಮಂಗಳಕಾರಿ
4. ಕೋಪ ಕಡಿಮೆ ಮಾಡಲು ಪ್ರಾಣಯಾಮ ಮತ್ತು ಧ್ಯಾನ ಮಾಡಿ.(ಏಜೆನ್ಸೀಸ್)ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.