- ಭಾರತದಲ್ಲಿ ಬಾದಾಮಿಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ
- ಬಾದಾಮಿ ಮತ್ತು ಅವುಗಳ ಎಲೆಗಳನ್ನು ಔಷಧಗಳಿಗಳಲ್ಲಿ ಬಳಸಲಾಗುತ್ತದೆ
- ಬಾದಾಮಿಯನ್ನು ಹೊರಾಂಗಣದಲ್ಲಿ ನೆಡುವುದು ಬಹಳ ಶುಭವಾಗಿದೆ
Vastu tips : ಭಾರತದಲ್ಲಿ ಬಾದಾಮಿಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ಬಾದಾಮಿ ಮತ್ತು ಅವುಗಳ ಎಲೆಗಳನ್ನು ಔಷಧಗಳಿಗಳಲ್ಲಿ ಬಳಸಲಾಗುತ್ತದೆ. ಕೆಲವೊಂದು ಮನೆಯ ಹೊರಗೆ ಬಾದಾಮಿ ಮರಗಳು ಬೆಳೆದಿರುವುದನ್ನು ನೋಡಿರಬಹುದು. ವಾಸ್ತು ಪ್ರಕಾರ, ಬಾದಾಮಿ ಮರವನ್ನು ಅತ್ಯಂತ ಶುಭ ಮರಗಳಲ್ಲಿ ಒಂದು ಎಂದು ಕರೆಯಲಾಗುತ್ತದೆ. ಇದನ್ನು ಮನೆಯ ಹೊರಗೆ, ವಿಶೇಷವಾಗಿ ಈಶಾನ್ಯ, ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ನೆಟ್ಟರೆ ಅಪಾರ ಲಾಭವಿದೆ ಎಂದು ನಂಬಲಾಗಿದೆ.
1. ಮನೆಗೆ ಶುಭಫಲ
ಬಾದಾಮಿಯನ್ನು ಮನೆಯೊಳಗೆ ಅಥವಾ ಹೊರಾಂಗಣದಲ್ಲಿ ನೆಡುವುದನ್ನು ಬಹಳ ಶುಭವೆಂದು ಕರೆಯಲಾಗುತ್ತದೆ. ಇದು ಮನೆಯಲ್ಲಿ ಸಂತೋಷದ ವಾತಾವರಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗೂ ಅಂದುಕೊಂಡ ಕೆಲಸಗಳು ಯಾವುದೇ ತೊಂದರೆಯಿಲ್ಲದೇ ಈಡೇರುತ್ತವೆ. ಬಾದಾಮಿ ಸಸಿಗಳನ್ನು ಕುಂಡಗಳಲ್ಲಿ ನೆಡಬಹುದು.
2. ವ್ಯವಹಾರದಲ್ಲಿ ಪ್ರಗತಿ
ಬಾದಾಮಿ ಮರಗಳನ್ನು ಮನೆಯಲ್ಲಿ ನೆಡುವುದರಿಂದ ಇದು ಮನೆಗೆ ಶಾಂತಿ ನೆಮ್ಮದಿಯನ್ನು ತರುತ್ತದೆ. ಇದು ಬೇಸಿಗೆಯಲ್ಲಿ ನಿಮಗೆ ತಂಪನ್ನು ನೀಡಲು ಸಹಾಯ ಮಾಡುತ್ತದೆ. ಹಾಗೆಯೇ ಈ ಮರಗಳು ನಿಮಗೆ ಶ್ರದ್ಧೆಯನ್ನು ಹೆಚ್ಚಿಸಿ ವ್ಯವಹಾರದ ಕಡೆ ಗಮನ ಹರಿಸಲು ಸಹಾಯ ಮಾಡುತ್ತದೆ. ಇದರಿಂದ ನೀವು ವ್ಯವಹಾರದಲ್ಲಿ ಪ್ರಗತಿಯನ್ನು ಕಾಣಬಹುದು.
3. ಸಂಪತ್ತು ವೃದ್ಧಿ
ಜ್ಯೋತಿಷ್ಯದ ಪ್ರಕಾರ, ಬಾದಾಮಿಯು ಲಕ್ಷ್ಮೀ ಸ್ವರೂಪವನ್ನು ಹೊಂದಿರುತ್ತದೆ. ಮನೆಯ ಮುಂದೆ ಅಥವಾ ಹೊರಗೆ ನೆಟ್ಟರೆ ಸಂಪತ್ತು ಮತ್ತು ಐಶ್ವರ್ಯ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ಬಾದಾಮಿ ಮರದಲ್ಲಿ ಹೂವು ಬಿಡುವಾಗ ಲಕ್ಷ್ಮೀ ಕಟಾಕ್ಷ, ಹಾಗೂ ಹಣ್ಣು ಬಂದಾಗ ಸಂಪತ್ತು ತುಂಬುತ್ತದೆ ಎಂದು ಹೇಳಲಾಗುತ್ತದೆ.
4. ಆಮ್ಲಜನಕ ಪೂರೈಕೆ
ಬಾದಾಮಿ ಎಲೆಗಳು ಸ್ವಲ್ಪ ದೊಡ್ಡದಾಗಿರುತ್ತವೆ ಮತ್ತು ಅಗಲವಾಗಿರುತ್ತವೆ. ಇದು ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುತ್ತದೆ. ಇದನ್ನು ನಿಮ್ಮ ಮನೆಯ ಅಂಗಳದಲ್ಲಿ ನೆಡುವುದರಿಂದ ಇದು ವಾತಾವರಣವನ್ನು ಸ್ವಚ್ಛವಾಗಿಡುವುದರ ಜೊತೆಗೆ ಕುಟುಂಬದವರಿಗೂ ಸಂತೋಷವನ್ನು ನೀಡುತ್ತದೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.