ಜ್ಯೋತಿಷ್ಯ

ನವೆಂಬರ್​ನಿಂದ ಈ 3 ರಾಶಿ ಚಿಹ್ನೆಗಳಿಗೆ ಸುವರ್ಣ ಸಮಯ Astrology

Astrology: ಜ್ಯೋತಿಷ್ಯದ ದೃಷ್ಟಿಕೋನದಲ್ಲಿ ನವೆಂಬರ್​ ತಿಂಗಳು ಬಹಳ ವಿಶೇಷವಾಗಿರುತ್ತದೆ ಎಂದು ನಂಬಲಾಗುತ್ತದೆ. ಈ ತಿಂಗಳಲ್ಲಿ ಪ್ರಮುಖ ಗ್ರಹಗಳ ದಿಕ್ಕುಗಳ ಚಲನೆಗಳು ಬದಲಾಗುತ್ತಿರುತ್ತವೆ. ಈ ದಿನಗಳಲ್ಲಿ ಈ ಮೂರು ರಾಶಿ ಚಕ್ರದವರಿಗೆ ಅನೇಕ ರೀತಿಯ ಪ್ರಯೋಜನ ಬೀರಲಿದೆ ಎಂದು ತಿಳಿಸಿದೆ. ಹಾಗಿದ್ದರೆ ಆ 3 ರಾಶಿಗಳು ಯಾವುದು? ಅದರ ಮೇಲೆ ಬೀರುವ ಪರಿಣಾಮಗಳೇನು? ತಿಳಿಯೋಣ ಬನ್ನಿ..

1. ತುಲಾ ರಾಶಿ

ಈ ತಿಂಗಳು ತುಲಾ ರಾಶಿಯವರಿಗೆ ಹೊಸ ಆರಂಭದ ಸಂದೇಶವನ್ನು ತರುತ್ತದೆ ಎಂದು ನಂಬಲಾಗಿದೆ. ಗ್ರಹ ಸಂಚಾರದಿಂದ ನೀವು ಮಾಡುವ ಕೆಲಸಗಳಲ್ಲಿ ಮುನ್ನಣೆ ಸಾಧಿಸುತ್ತೀರಿ. ದೀರ್ಘಕಾಲದಿಂದ ಮಾಡುತ್ತಿರುವಂತಹ ಯೋಜನೆಗಳು ಲಾಭವನ್ನು ನೀಡುತ್ತವೆ. ಕುಟುಂಬದಲ್ಲಿ ಸಂತೋಷ, ನೆಮ್ಮದಿ, ಆತ್ಮವಿಶ್ವಾಸ ಒಟ್ಟಾರೆಯಾಗಿ ಎಲ್ಲವೂ ಸುಧಾರಣೆಗೊಳ್ಳುತ್ತವೆ.

2. ವೃಶ್ಚಿಕ ರಾಶಿ

ಈ ರಾಶಿಯವರಿಗೆ ಎಲ್ಲಾ ಗ್ರಹಗಳ ಸಂಚಾರವು ಶುಭವೆಂದು ಪರಿಗಣಿಸಲಾಗುತ್ತದೆ. ಈ ಸಂಚಾರವು ನಿಮ್ಮನ್ನು ಆಕರ್ಷಕವಾಗಿರುವಂತೆ ಮಾಡುತ್ತದೆ. ಕಲೆ, ಮಾಧ್ಯಮ, ಸೌಂದರ್ಯ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ವಿಶೇಷ ಪ್ರಯೋಜನಗಳನ್ನು ಪಡೆಯುತ್ತೀರಿ. ವೈವಾಹಿಕ ಜೀವನದಲ್ಲಿ ಸುಖ, ನೆಮ್ಮದಿ ಸಿಗುತ್ತದೆ. ಈ ಅವಧಿಯಲ್ಲಿ ಆರ್ಥಿಕವಾಗಿ ಬಲವಾಗಿರುತ್ತದೆ. ಜನರಿಂದ ಬೆಂಬಲ ದೊರೆಯುತ್ತದೆ ಎಂದು ತಿಳಿಸಲಾಗಿದೆ.

3. ಕುಂಭ ರಾಶಿ

ಕುಂಭ ರಾಶಿಯವರಿಗೆ ನವೆಂಬರ್‌ನಲ್ಲಿ ಸಂಭವಿಸುವ ಗ್ರಹ ಬದಲಾವಣೆಗಳು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಅವು ಈ ರಾಶಿಯವರಿಗೆ ಹೊಸ ಅವಕಾಶಗಳನ್ನು ನೀಡುತ್ತದೆ. ಒಂದು ಪ್ರಮುಖ ವೃತ್ತಿಜೀವನದ ನಿರ್ಧಾರವು ನಿಮ್ಮ ಪರವಾಗಿರಲಿದ್ದು, ನೀವು ದೀರ್ಘಕಾಲದಿಂದ ಶ್ರಮಿಸುತ್ತಿರುವ ಕೆಲಸಗಳಿಗೆ ತಕ್ಕ ಪರಿಶ್ರಮ ಸಿಗುತ್ತದೆ ಎಂದು ಹೇಳಲಾಗಿದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯ ಸುಧಾರಿಸುತ್ತದೆ ಮತ್ತು ನಿಮ್ಮ ಮಾನಸಿಕ ಸ್ಥಿರತೆಯೂ ಹೆಚ್ಚಾಗುತ್ತದೆ ಎಂದು ಜ್ಯೋತಿಷ್ಯ ತಿಳಿಸಿದೆ. (ಏಜೆನ್ಸೀಸ್​)

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.