June July 2026 Marriage Dates
- ಜೂನ್ ಮತ್ತು ಜುಲೈ 2026ರಲ್ಲಿರುವ ಶುಭ ಮುಹೂರ್ತ ಪಟ್ಟಿ ಇಲ್ಲಿದೆ.
- ಜೂನ್ ತಿಂಗಳ ಮೊದಲ 15 ದಿನಗಳ ಕಾಲ ಮದುವೆಗೆ ಯಾವುದೇ ಶುಭ ಲಗ್ನಗಳಿಲ್ಲ.
- ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಚಾತುರ್ಮಾಸ ಹಿನ್ನೆಲೆ ಯಾವುದೇ ಶುಭ ಮುಹೂರ್ತಗಳು ಇಲ್ಲ.
June July 2026 Marriage Dates: ಹಿಂದೂ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯ ಮಾಡುವ ಮುನ್ನ ಮುಹೂರ್ತಕ್ಕೆ ದಿನಾಂಕ, ಸಮಯ ನಿಗದಿ ಮಾಡುವುದು ಸಾಮಾನ್ಯ. ಅದರಲ್ಲೂ ವಿಶೇಷವಾಗಿ ವಿವಾಹದ ಮುಹೂರ್ತಕ್ಕೆ ಸಾಕಷ್ಟು ಯೋಚಿಸಿ ದಿನಾಂಕವನ್ನು ಫಿಕ್ಸ್ ಮಾಡಲಾಗುತ್ತದೆ. ಈ ಮಾನ್ಸೂನ್ ತಿಂಗಳಲ್ಲಿ ಮದುವೆ ನಿಶ್ಚಯಿಸಲು ಯೋಜಿಸುತ್ತಿದ್ದರೆ, ಪಂಚಾಂಗ ಮತ್ತು ಜ್ಯೋತಿಷ್ಯ ತಜ್ಞರ ಪ್ರಕಾರ ಯಾವೆಲ್ಲಾ ದಿನಗಳು ಅತ್ಯಂತ ಶುಭಪ್ರದವಾಗಿವೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.
ಜೂನ್ನ ಮೊದಲ ವಾರದಲ್ಲಿ ಶುಭ ಲಗ್ನದ ಕೊರತೆ
ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರದ ಪ್ರಕಾರ , ಜೂನ್ 2026ರ ಮೊದಲ ವಾರ ಅಂದರೆ,15ನೇ ತಾರೀಖಿನವರೆಗೂ ಯಾವುದೇ ಶುಭ ಲಗ್ನಗಳು ಇಲ್ಲ. ಜೂನ್ ತಿಂಗಳ ದ್ವಿತೀಯಾರ್ಧದಲ್ಲಿ ಮದುವೆಗೆ ಹೆಚ್ಚು ಸೌಕರ್ಯದ ದಿನಗಳಿವೆ.
ಜೂನ್ 2026ರ ಶುಭ ವಿವಾಹ ಮುಹೂರ್ತ ಯಾವುದು?
- ಜೂನ್ 19 (ಶುಕ್ರವಾರ)
- ಜೂನ್ 21 (ರವಿವಾರ)
- ಜೂನ್ 28 (ರವಿವಾರ)
ಜುಲೈ 2026ರಲ್ಲಿರುವ ಶುಭ ಮುಹೂರ್ತ ಯಾವುದು?
ಜುಲೈ ತಿಂಗಳು ಮುಗಿಯುತ್ತಿದ್ದಂತೆ ಚಾತುರ್ಮಾಸದ ಅವಧಿ ಆರಂಭವಾಗುತ್ತದೆ. ಈ ತಿಂಗಳ ಆರಂಭದಲ್ಲಿ ಎರಡು ಪ್ರಮುಖ ದಿನ ಮಾತ್ರ ಮದುವೆ ಉತ್ತ,ಮ ಲಗ್ನ ಎಂದು ಪರಿಗಣಿಸಲಾಗಿದೆ ಅದು
- ಜುಲೈ 7 (ಮಂಗಳವಾರ)
- ಜುಲೈ 16 (ಗುರುವಾರ)
ಆಗಸ್ಟ್ನಿಂದ ಅಕ್ಟೋಬರ್ವರೆಗೂ ಇಲ್ಲ ಮುಹೂರ್ತ
ಜುಲೈ ಮುಗಿಯುತ್ತಿದ್ದಂತೆ ಆಗಸ್ಟ್ನಿಂದ ಚಾತುರ್ಮಾಸ ಆರಂಭವಾಗುತ್ತದೆ. ಹೀಗಾಗಿ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಯಾವುದೇ ಶುಭಕಾರ್ಯ ಮಾಡೋದಿಲ್ಲ. ಅದರಲ್ಲು ಮದುವೆಯಂತಹ ಸಮಾರಂಭಗಳಿಗೆ ಡೇಟ್ ಫಿಕ್ಸ್ ಮಾಡೋದೆ ಇಲ್ಲ. ಇದರ ನಂತರ ಮತ್ತೆ ನವೆಂಬರ್ ಮತ್ತು ಡಿಸೆಂಬರ್ 2026ರಲ್ಲಿ ಮಾತ್ರ ವಿವಾಹಕ್ಕೆ ಮತ್ತಷ್ಟು ಶುಭ ದಿನಗಳು ಲಭ್ಯವಾಗಲಿವೆ,(ಏಜೆನ್ಸೀಸ್).
ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಮಾಹಿತಿ, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.