ವಾಸ್ತು ಶಾಸ್ತ್ರದ ಪ್ರಕಾರ ಸಕ್ಕರೆ ಡಬ್ಬವನ್ನು ಅಡುಗೆ ಮನೆಯಲ್ಲಿ ಎಲ್ಲಿಡಬೇಕು?
ಶುಕ್ರವಾರ ಸಕ್ಕರೆ ದಾನ ಮಾಡುವುದನ್ನು ತಪ್ಪಿಸುವುದು ಆರ್ಥಿಕ ಸಮಸ್ಯೆಗೆ ತಡೆ ನೀಡುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಸಕ್ಕರೆಯನ್ನು ಅಡುಗೆ ಮನೆಯ ಆಗ್ನೇಯ ಅಥವಾ ದಕ್ಷಿಣ ದಿಕ್ಕಿನಲ್ಲಿಟ್ಟರೆ ಸೂಕ್ತ
ನಾವು ದಿನನಿತ್ಯ ಟೀ-ಕಾಫಿಗೆ ಸಕ್ಕರೆ ಬಳಕೆ ಮಾಡುತ್ತೇವೆ. ಹಬ್ಬ ಹರಿದಿನವಿದ್ದಾಗ ಪಾಯಸ ಅಥವಾ ಜಾಮೂನ್ ಸೇರಿದಂತೆ ಸಿಹಿ ಪದಾರ್ಥ ತಯಾರಿ ಮಾಡಲು ಸಕ್ಕರೆ ಬಳಕೆ ಮಾಡುತ್ತೇವೆ. ಆದರೆ, ಸಕ್ಕರೆ ಇಡಲು ವಾಸ್ತು ಪ್ರಕಾರ ಕೆಲವೊಂದು ನಿಯಮವಿದೆ ಎಂದರೆ ನಂಬುತ್ತೀರಾ?.
ಹೌದು, ಜ್ಯೋತಿಷ್ಯ ಶಾಸ್ತ್ರದಲ್ಲಿ ಹೆಚ್ಚಾಗಿ ವಾಸ್ತು ಶಾಸ್ತ್ರಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಸಕ್ಕರೆಯು ನಮ್ಮ ಜೀವನದ ಒಂದು ವಸ್ತು ಮಾತ್ರ ಅಲ್ಲ ಇದು ನಮ್ಮ ಭವಿಷ್ಯದ ಭೌತಿಕ ಸುಖ, ಸಂಪತ್ತು, ಸೌಂದರ್ಯ, ಪ್ರೀತಿ ಹಾಗೂ ಸೌಕರ್ಯದ ಅಧಿಪತಿಯಾದ ಶುಕ್ರ ಗ್ರಹದ ಸಂಕೇತ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಗಣಿಸಲಾಗುತ್ತದೆ. ಹಾಗಾದರೆ ಸಕ್ಕರೆಯ ಡಬ್ಬವನ್ನು ಅಡುಗೆ ಮನೆಯ ಯಾವ ಮೂಲೆಯಲ್ಲಿಟ್ಟರೆ ಸೂಕ್ತ ಎನ್ನುವುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಅಡುಗೆ ಮನೆಯ ದಕ್ಷಿಣ ಆಗ್ನೇಯ ಭಾಗವು ಸಕ್ಕರೆ ಮತ್ತು ಇತರ ಪಡಿತರ ದಿನಸಿ ಇಡಲು ಶುಭ ಸಂಕೇತ ಜಾಗ ಎಂದು ನಂಬಲಾಗುತ್ತದೆ. ಸಕ್ಕರೆಯು ಯಾವಾಗಲೂ ಸಹ ಗಾಜು ಅಥವಾ ಲೋಹದ ಡಬ್ಬದಲ್ಲಿರಬೇಕು ಎನ್ನಲಾಗುತ್ತದೆ. ಪ್ಲಾಸ್ಟಿಕ್ ಪಾತ್ರೆ ಬಳಕೆ ಮಾಡುವುದು ತಪ್ಪು. ಇದು ಆರೋಗ್ಯಕ್ಕು ಸಮಸ್ಯೆಯನ್ನುಂಟು ಮಾಡುತ್ತದೆ ಎಂದು ನಂಬಲಾಗಿದೆ. ಸಕ್ಕರೆಯನ್ನು ಮನೆಯಲ್ಲಿ ಚೆಲ್ಲದಂತೆ ನೋಡಿಕೊಳ್ಳಬೇಕು. ಮುಚ್ಚಳವಿಲ್ಲದೆ ತೆರೆದಿಡಬಾರದು ಎಂದು ವಾಸ್ತು ಶಾಸ್ತ್ರವು ಹೇಳುತ್ತದೆ. ಇದು ಆರ್ಥಿಕ ನಷ್ಟ ಮತ್ತು ನಕರಾತ್ಮಕತೆಗೆ ದಾರಿ ಮಾಡಿಕೊಡುತ್ತದೆ ಎಂದು ನಂಬಲಾಗುತ್ತದೆ.
ಇದನ್ನೂ ಓದಿ: ಕೈಯಲ್ಲಿ 2 ವಿವಾಹ ರೇಖೆಯಿದ್ದರೆ, 2ನೇ ಮದುವೆಯಾಗೋದು ಖಚಿತವೇ?; ಹಸ್ತಸಾಮುದ್ರಿಕ ಶಾಸ್ತ್ರ ಏನು ಹೇಳುತ್ತೆ.. Palm Reading
ಸೋಮವಾರ ಅಥವಾ ಹುಣ್ಣಿಮೆ ದಿನದಲ್ಲಿ ಸಕ್ಕರೆ ದಾನ ಮಾಡುವುದು ಅತ್ಯಂತ ಶ್ರೇಷ್ಠ ಎಂದು ವಾಸ್ತು ಪ್ರಕಾರ ನಂಬಲಾಗುತ್ತದೆ. ಆ ದಿನ ಸಕ್ಕರೆ ಹಾಲು, ಅಕ್ಕಿತಯಂತಹ ಬಿಳಿ ವಸ್ತುವನ್ನು ಧಾರ್ಮಿಕ ಆಚರಣೆಗೆ ದಾನ ಮಾಡುವುದು ಶುಭ ತರುತ್ತದೆ. ಅಲ್ಲದೇ ಗ್ರಹಣದ ನಂತರ ಅಗತ್ಯ ಇರುವವರಿಗೆ ಸಕ್ಕರೆ, ಅಕ್ಕಿ ಅಥವಾ ಹಾಲು ದಾನ ಮಾಡುವುದದು. ನಿಮ್ಮ ಸುತ್ತ ಮುತ್ತ ಇರುವ ಉದ್ಯಾನದಲ್ಲಿನ ಇರುವೆಗಳಿಗೆ ಅಕ್ಕಿ ಹಿಟ್ಟು ಮತ್ತು ಸಕ್ಕರೆಯ ಮಿಶ್ರಣ ಹಾಕುವುದು ವಾಸ್ತು ದೋಷವನ್ನು ದೂರ ಮಾಡಲು ಸಹಾಯ ಮಾಡುತ್ತದೆ.
ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ ನಂಬಿಕೆಗಳ ಪ್ರಕಾರ ಶುಕ್ರವಾರದಂದು ಸಕ್ಕರೆಯನ್ನು ಯಾರಿಗೂ ದಾನ ಮಾಡದಂತೆ ನೋಡಿಕೊಳ್ಳಬೇಕು ಎಂದು ಹೇಳಲಾಗಿದೆ. ಶುಕ್ರವಾರ ಶುಕ್ರಗ್ರಹ ಮತ್ತು ಲಕ್ಷ್ಮಿ ದೇವಿಯ ದಿನವಾದ ಕಾರಣ ಅಂದು ಸಕ್ಕರೆ ದಾನ ಮಾಡಿದರೆ ವಾಸ್ತು ದೋಷ ಅಥವಾ ಆರ್ಥಿಕ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ, (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.