ಕೈಯಲ್ಲಿ 2 ವಿವಾಹ ರೇಖೆಯಿದ್ದರೆ, 2ನೇ ಮದುವೆಯಾಗೋದು ಖಚಿತವೇ?; ಹಸ್ತಸಾಮುದ್ರಿಕ ಶಾಸ್ತ್ರ ಏನು ಹೇಳುತ್ತೆ.. Palm Reading

 Two Marriage Lines Predict Second Wedding Expert Insights
Two Marriage Lines Predict Second Wedding Expert Insights
Published on
Two Marriage Lines Predict Second Wedding Expert Insights: ಕೆಲವರಿಗೆ ತಮ್ಮ ಪತಿ ಅಥವಾ ಪತ್ನಿ ಮತ್ತೊಂದು ಮದುವೆ ಮಾಡಿಕೊಳ್ಳುತ್ತಾರಾ?, ಇನ್ನೊಬ್ಬ ಯುವತಿ ಜೊತೆಗೇನಾದರೂ ಸಂಬಂಧವಿಟ್ಟು ಕೊಂಡಿದ್ದಾರಾ ಎಂದು ಕಾಡೋದು ಸಹಜ. ನಿಮ್ಗೇನಾದ್ರು ಅಂತಹ ಅನುಮಾನದ ಹುಳ ತಲೆಯನ್ನು ಹೊಕ್ಕಿದ್ದರೆ, ನಿಮ್ಮ ಪತಿಯ ಕೈನಿಂದಲೇ ಎಲ್ಲ ಮಾಹಿತಿ ಪಡೆದುಕೊಳ್ಳಬಹುದು.
ಹೌದು, ಹಿಂದೂ ಶಾಸ್ತ್ರಗಳ ಪ್ರಕಾರ ಹಸ್ತ ಸಾಮುದ್ರಿಕ ಶಾಸ್ತ್ರ ಅಥವಾ ಕೈ ನೋಡುವ ಶಾಸ್ತ್ರವು ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ. ಹಸ್ತ ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಕಿರುಬೆರಳಿನ ಕೆಳಗಿನ ಬುಧ ಪರ್ವತದ ಮೇಲೆ ಇರುವ ವಿವಾಹ ರೇಖೆಗಳು ಕೇವಲ ಮದುವೆಯ ಸಂಖ್ಯೆಯನ್ನು ಮಾತ್ರವಲ್ಲ, ನಿಮ್ಮ ಜೀವನದ ಗಾಢವಾದ ಸಂಬಂಧಗಳು ಮತ್ತು ಪ್ರೇಮ ಬಂಧಗಳ ಬಗ್ಗೆಯೂ ಸೂಚನೆ ನೀಡುತ್ತವೆ. ಎರಡು ರೇಖೆಗಳು ಎರಡನೇ ವಿವಾಹವನ್ನು ನಿಜವಾಗಿಯೂ ಸೂಚಿಸುತ್ತವೆಯೇ ಎಂಬುದರ ಬಗ್ಗೆ ತಜ್ಞರು ಏನು ಹೇಳುತ್ತಾರೆ ನೋಡಿ.

ಯಾವ ಗೆರೆ ಏನನ್ನು ಹೇಳುತ್ತೆ

ಅಂಗೈನ ತುದಿಯಾಲ್ಲಿ ಕಾಣುವ ಎರಡು ಗೆರೆಗಳು ಸಂತಾನ ಮತ್ತು ಒಂದು ಅಥವಾ ಎರಡು ಮದುವೆ ಬಗ್ಗೆ ಮಾಹಿತಿ ನೀಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದು ಸುಳ್ಳು ಎಂದು ಹಸ್ತ ಸಾಮುದ್ರಿಕಾ ಶಾಸ್ತ್ರ ಹೇಳುತ್ತದೆ. ಈ ರೇಖೆಗಳು ವ್ಯಕ್ತಿಯ ಪ್ರೀತಿ, ದಾಂಪತ್ಯ ಮತ್ತು ಸಂಬಂಧಗಳ ಬಗ್ಗೆ ಸಾಕಷ್ಟು ಮು ಎನ್ನಲಾಗಿದೆ.
ಕೈಯಲ್ಲಿ ಒಂದು ವಿವಾಹ ರೇಖೆ ಇದ್ದರೆ ಅವರ ಮದುವೆಯು ಹಿರಿಯರು ನಿಶ್ಚಯ ಮಾಡುತ್ತಾರೆ. ಮದುವೆಯ ನಂತರ ಅವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹೆಣಗಾಡುತ್ತಾರೆ ಎಂದು ಹೇಳಲಾಗುತ್ತದೆ.

ಎರಡನೇ ರೇಖೆ

ತೆಳುವಾಗಿದ್ದರೆ

ಅವರು ಪ್ರೇಮವಿವಾಹ ಮಾಡಿಕೊಳ್ಳುತ್ತಾರೆ. ಇಲ್ಲದಿದ್ದಲ್ಲಿ ಬಹು ಸಂಬಂಧಗಳನ್ನು ಬೆಳೆಸಿಕೊಂಡು, ಅದರಲ್ಲಿಯೂ ನಿರಾಸೆಯುಂಟಾಗಿ ಕೊನೆಗೆ ನಿಯೋಜಿತ ಮದುವೆ ಆಗುತ್ತಾರೆ ಎನ್ನಲಾಗಿದೆ.

ಎರಡು ರೇಖೆ ಸ್ಪಷ್ಟವಾಗಿದ್ದರೆ!

ಕೈಯಲ್ಲಿ ಎರಡು ರೇಖೆ ಉದ್ದವಾಗಿ ಸ್ಪಷ್ಟವಾಗಿದ್ದರೆ ಅಂತಹ ಜನರು ಎರಡು ಮದುವೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಂದರೆ ಗಂಭೀರವಾ್ ಸಂಬಂಧ ಹೊಂದುತ್ತಾರೆ. ಒಂದು ಡಿವೋರ್ಸ್​ನಂತರ ಮದುವೆಯಾಗಿ ಸುಖ ಸಂಸಾರ ನಡೆಸುತ್ತಾರೆ. ಇಲ್ಲವೇ ಮೊದಲ ಸಂಗಾತಿ ಮೃತಪಟ್ಟ ನಂತರ ಮತ್ತೊಂದು ಮದುವೆಯಾಗುತ್ತಾರೆ.

ರೇಖೆ ಮುಸುಕಾಗಿರುವುದು ಏನನ್ನು ಹೇಳುತ್ತೆ

ಕಿರು ಬೆರಳಿನ ಒಂದು ರೇಖೆ ಸ್ಪಷ್ಟವಾಗಿ ಕಾಣಿಸಿ, ಮತ್ತೊಂದು ಮಸುಕಾಗಿದ್ದರೆ ಅಂತವರು ಮದುವೆಯಾಗಿದ್ದರೂ ಸಹ ಮತ್ತೊಬ್ಬ ವ್ಯಕ್ತಿಯೊಂದಿಗೆ ಬಲವಾದ ಆಸಕ್ತಿ ಹೊಂದಿರುತ್ತಾರೆ. ಇನ್ನೊಂದು ಚಿಕ್ಕದಾಗಿ ಮಸುಕಾಗಿದ್ದರೆ ಅಂತವರು ತಮ್ಮ ಪತ್ನಿ ಅಥವಾ ಪ್ರೇಯಸಿಯನ್ನು ಬಲವಾಗಿ ಪ್ರೀತಿ ಮಾಡುತ್ತಿದ್ದಾರೆ ಎಂದು ಅರ್ಥ.
ಅಂಗೈನಲ್ಲಿರುವ ರೇಖೆಯ ಮೇಲೆ ಯಾವುದಾದರೂ ಅಡ್ಡಗೆರೆಗಳು, ದ್ವೀಪದ ಚಿಹ್ನೆ ಅಥವಾ ಕವಲುಗಳು ಇದ್ದರೆ ಮಾತ್ರ ಅದು ವೈವಾಹಿಕ ಜೀವನದಲ್ಲಿ ಬಿರುಕು ಅಥವಾ ವಿಚ್ಛೇದನದ ಮುನ್ಸೂಚನೆ ನೀಡುತ್ತದೆ. ರೇಖೆಗಳು ನೇರವಾಗಿದ್ದರೆ ಜೀವನ ಸುಖಕರವಾಗಿರುತ್ತದೆ, (ಏಜೆನ್ಸೀಸ್).

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net