ಸಾಂದರ್ಭಿಕ ಚಿತ್ರ 
ಧಾರ್ಮಿಕ

12 ವರ್ಷಗಳ ಬಳಿಕ ಗುರು-ಮಂಗಳ ಯೋಗ: ಈ 3 ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು, ನಿಮ್ದೂ ಇದೇ ರಾಶಿನಾ? Astrology

ದೇವಗುರು ಬೃಹಸ್ಪತಿಯು ತನ್ನ ಸಂಚಾರವನ್ನು ಬದಲಿಸಿ ಸಿಂಹ ರಾಶಿಯನ್ನು ಪ್ರವೇಶಿಸುತ್ತಿರುವ ಸಮಯದಲ್ಲೇ, ಶೌರ್ಯದ ಕಾರಕನಾದ ಕುಜ (ಮಂಗಳ) ಕೂಡ ಅದೇ ರಾಶಿಯನ್ನು ಪ್ರವೇಶಿಸುವುದರಿಂದ ಈ ಅದ್ಭುತ ಯೋಗ ನಿರ್ಮಾಣವಾಗುತ್ತಿದೆ.

Astrology : ಜ್ಯೋತಿಷ್ಯ ಲೋಕದಲ್ಲಿ ಅಪರೂಪದ ಮತ್ತು ಮಹತ್ವದ ಸಂಯೋಗವೆಂದೇ ಪರಿಗಣಿಸಲಾಗಿರುವ 'ಗುರು ಮಂಗಲ ಯೋಗ'ವು ಬರೋಬ್ಬರಿ 12 ವರ್ಷಗಳ ಬಳಿಕ ರೂಪುಗೊಳ್ಳುತ್ತಿದ್ದು, ಇದು ಇಡೀ ದ್ವಾದಶ ರಾಶಿಗಳ ಮೇಲೆ ಬೀರುವ ಪ್ರಭಾವವು ಅತ್ಯಂತ ಕುತೂಹಲ ಮೂಡಿಸಿದೆ.

ದೇವಗುರು ಬೃಹಸ್ಪತಿಯು ತನ್ನ ಸಂಚಾರವನ್ನು ಬದಲಿಸಿ ಸಿಂಹ ರಾಶಿಯನ್ನು ಪ್ರವೇಶಿಸುತ್ತಿರುವ ಸಮಯದಲ್ಲೇ, ಶೌರ್ಯದ ಕಾರಕನಾದ ಕುಜ (ಮಂಗಳ) ಕೂಡ ಅದೇ ರಾಶಿಯನ್ನು ಪ್ರವೇಶಿಸುವುದರಿಂದ ಈ ಅದ್ಭುತ ಯೋಗ ನಿರ್ಮಾಣವಾಗುತ್ತಿದೆ. ಈ ವಿಶಿಷ್ಟ ಖಗೋಳ ಮತ್ತು ಜ್ಯೋತಿಷ್ಯ ವಿದ್ಯಮಾನವು ಕೆಲವೇ ಕೆಲವು ರಾಶಿಗಳ ಜೀವನದಲ್ಲಿ ಸುವರ್ಣಯುಗವನ್ನೇ ತರಲಿದ್ದು, ಭವಿಷ್ಯದ ದೃಷ್ಟಿಯಿಂದ ಇದು ಅತ್ಯಂತ ಶುಭಸೂಚಕವಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಅಪಾರ ಮಹತ್ವ ಹೊಂದಿರುವ ಈ ಗುರು ಮಂಗಲ ಯೋಗದ ವಿಶೇಷತೆ ಮತ್ತು ಯಾವ ಮೂರು ರಾಶಿಗಳ ಅದೃಷ್ಟದ ಬಾಗಿಲು ತೆರೆಯಲಿದೆ ಎಂಬುದನ್ನು ನಾವೀಗ ತಿಳಿಯೋಣ.

ಜ್ಯೋತಿಷ್ಯದ ಪ್ರಕಾರ ದೇವಗುರು ಬೃಹಸ್ಪತಿಯು ದೇವತೆಗಳ ಗುರುವಾಗಿದ್ದು, ಈತ ಧನುಸ್ಸು ಮತ್ತು ಮೀನ ರಾಶಿಗಳ ಸ್ವಾಮಿಯಾಗಿದ್ದಾನೆ. ಪ್ರತಿ ಒಂದು ವರ್ಷಕ್ಕೊಮ್ಮೆ ತನ್ನ ರಾಶಿ ಪರಿವರ್ತನೆ ಮಾಡುವ ಗುರುವು, ಮುಂಬರುವ ಅಕ್ಟೋಬರ್ 31 ರಂದು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ ಪಡೆಯಲಿದ್ದಾನೆ. ಗ್ರಹಗಳ ಸೇನಾಪತಿಯೆಂದು ಕರೆಯಲ್ಪಡುವ ಮಂಗಳ ಗ್ರಹವು ಪ್ರತಿ 45 ದಿನಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಇದರಂತೆ ನವೆಂಬರ್ 12 ರಂದು ಮಂಗಳನೂ ಕೂಡ ಕರ್ಕಾಟಕದಿಂದ ಸಿಂಹ ರಾಶಿಗೆ ಕಾಲಿಡಲಿದ್ದು, ಈ ಮೂಲಕ ಸಿಂಹ ರಾಶಿಯಲ್ಲಿ ಗುರು ಮತ್ತು ಮಂಗಳರ ಅಪರೂಪದ ಸಂಯೋಗವು ಏರ್ಪಡಲಿದೆ.

ಸುಮಾರು 12 ವರ್ಷಗಳ ಸುದೀರ್ಘ ಅವಧಿಯ ಬಳಿಕ ಸಿಂಹ ರಾಶಿಯಲ್ಲಿ ರೂಪುಗೊಳ್ಳಲಿರುವ ಈ ಗುರು ಮಂಗಲ ಯೋಗವು ಅತ್ಯಂತ ಪ್ರಬಲ ಫಲಗಳನ್ನು ನೀಡಲಿದೆ. ಈ ಯೋಗದ ಪ್ರಭಾವದಿಂದ ಜಾತಕರಲ್ಲಿ ಧನಲಾಭ, ಸ್ಥಿರಾಸ್ತಿ ಖರೀದಿ, ಅದಮ್ಯ ಧೈರ್ಯ, ಕಲೆ ಹಾಗೂ ಪ್ರತಿಭೆಗೆ ತಕ್ಕ ಮನ್ನಣೆ, ಸಮಾಜದಲ್ಲಿ ಕೀರ್ತಿ-ಪ್ರತಿಷ್ಠೆ ಮತ್ತು ವೃತ್ತಿಜೀವನದಲ್ಲಿ ಅಭೂತಪೂರ್ವ ಮುನ್ನಡೆ ಸಿಗಲಿದೆ ಎಂದು ನಂಬಲಾಗಿದೆ. ಈ ಮಂಗಳಕರ ಯೋಗದ ಪ್ರಭಾವವು ಎಲ್ಲಾ 12 ರಾಶಿಗಳ ಮೇಲೂ ಗೋಚರಿಸಿದರೂ, ನಿರ್ದಿಷ್ಟವಾಗಿ ಮೂರು ರಾಶಿಗಳ ಜನರಿಗೆ ಮಾತ್ರ ಜೀವನದ ಪ್ರತಿಯೊಂದು ರಂಗದಲ್ಲೂ ಅನಿರೀಕ್ಷಿತ ಅದೃಷ್ಟ ಮತ್ತು ಯಶಸ್ಸು ಒಲಿದುಬರಲಿದೆ.

ಸಿಂಹ ರಾಶಿ

ಈ ಅದ್ಭುತ ಯೋಗದಿಂದ ವಿಶೇಷ ಫಲ ಪಡೆಯಲಿರುವ ಮೊದಲ ಪ್ರಮುಖ ರಾಶಿಯೆಂದರೆ ಅದು ಸ್ವತಃ ಸಿಂಹ ರಾಶಿ. ಈ ರಾಶಿಯ ಮೊದಲ ಅಥವಾ ಲಗ್ನ ಭಾವದಲ್ಲಿ ಗುರು ಮತ್ತು ಮಂಗಳರ ಸಂಯೋಗವು ಜರುಗುವುದರಿಂದ ಗುರು ಮಂಗಲ ಯೋಗವು ನಿರ್ಮಾಣವಾಗುತ್ತದೆ. ಈ ಯೋಗದ ಪ್ರಭಾವದಿಂದ ಸಿಂಹ ರಾಶಿಯವರಿಗೆ ರಾಜಭೋಗದ ಜೀವನವನ್ನು ನಡೆಸುವ ಸುವರ್ಣಾವಕಾಶಗಳು ಲಭಿಸಲಿವೆ. ಅನಿರೀಕ್ಷಿತ ಧನಾಗಮದೊಂದಿಗೆ, ಇದುವರೆಗೆ ಕೈ ಸೇರದೆ ನನೆಗುದಿಗೆ ಬಿದ್ದಿದ್ದ ಹಣವೂ ಸಹ ಈ ಅವಧಿಯಲ್ಲಿ ನಿಮ್ಮ ಕೈ ಸೇರಲಿದೆ. ನಿಮ್ಮಲ್ಲಿ ಧೈರ್ಯ ಹಾಗೂ ಆತ್ಮವಿಶ್ವಾಸವು ದುಪ್ಪಟ್ಟಾಗಲಿದ್ದು, ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ಮತ್ತು ಬಡ್ತಿ ದೊರೆಯುವ ಪ್ರಬಲ ಅವಕಾಶಗಳಿವೆ. ಅಲ್ಲದೆ, ದೀರ್ಘಕಾಲಿಕ ಹೂಡಿಕೆಗಳಿಗೆ ಈ ಅವಧಿಯು ಅತ್ಯಂತ ಅನುಕೂಲಕರವಾಗಿರುತ್ತದೆ.

ಕುಂಭ ರಾಶಿ

ಎರಡನೆಯದಾಗಿ, ಕುಂಭ ರಾಶಿಯವರ ಜಾತಕದ 7 ನೇ ಮನೆಯಲ್ಲಿ ಗುರು ಮತ್ತು ಮಂಗಳರ ಸಂಯೋಗವು ಜರುಗುವುದರಿಂದ ಈ ಯೋಗವು ಅದ್ಭುತ ಫಲಗಳನ್ನು ನೀಡಲಿದೆ. ಇದರ ಪರಿಣಾಮವಾಗಿ ಕುಂಭ ರಾಶಿಯವರ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಮತ್ತು ತಿರುವುಗಳು ಸಂಭವಿಸಲಿವೆ. ಹೊಸ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವ ಯುವಕರಿಗೆ ಅತ್ಯುತ್ತಮ ವೇತನದೊಂದಿಗೆ ಅಪೇಕ್ಷಿತ ಉದ್ಯೋಗ ಲಭಿಸುವ ಭಾಗ್ಯವಿದೆ. ಉದ್ಯೋಗ ಕ್ಷೇತ್ರದಲ್ಲಿರುವವರು ಕೂಡ ತಮ್ಮ ವೃತ್ತಿಜೀವನದಲ್ಲಿ ಉನ್ನತ ಯಶಸ್ಸನ್ನು ಕಾಣಬಹುದು. ವಿಶೇಷವಾಗಿ ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರಿಗೆ ಅತ್ಯಧಿಕ ಲಾಭ ಗಳಿಸುವ ಸದವಕಾಶಗಳು ಎದುರಾಗಲಿದ್ದು, ಒಟ್ಟಾರೆಯಾಗಿ ಆರ್ಥಿಕ ಪ್ರಗತಿಗೆ ಇದು ಸಕ್ಕತ್ ಅನುಕೂಲಕರ ವಾತಾವರಣವನ್ನು ನಿರ್ಮಿಸಲಿದೆ.

ಮೇಷ ರಾಶಿ

ಮೂರನೆಯದಾಗಿ, ಮೇಷ ರಾಶಿಯವರ ಜಾತಕದ 5 ನೇ ಮನೆಯಲ್ಲಿ ಗುರು ಮಂಗಲ ಯೋಗವು ರೂಪುಗೊಳ್ಳುತ್ತಿದ್ದು, ಇದು ಈ ರಾಶಿಯವರಿಗೆ ಅತ್ಯಂತ ಮಂಗಳಕರ ಫಲಗಳನ್ನು ಕರುಣಿಸಲಿದೆ. ನಿಮ್ಮ ದೀರ್ಘಕಾಲದ ಬಾಕಿ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಉದ್ಯೋಗದಲ್ಲಿರುವವರಿಗೂ ಸಹ ಮುಂಬುತಿ ಹಾಗೂ ಉನ್ನತ ಸ್ಥಾನಮಾನಗಳು ಲಭಿಸುವ ಸದವಕಾಶಗಳಿವೆ. ಮುಂಬರುವ ದಿನಗಳಲ್ಲಿ ಉದ್ಯಮ ಹಾಗೂ ಕೈಗಾರಿಕಾ ರಂಗಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಾಣಬಹುದು. ಭವಿಷ್ಯದ ದೃಷ್ಟಿಯಿಂದ ಉತ್ತಮ ಆರ್ಥಿಕ ಲಾಭಗಳು ದೊರೆಯುವುದರೊಂದಿಗೆ, ಹೊಸ ಮತ್ತು ಪ್ರಭಾವಿ ಸ್ನೇಹಿತರ ಪರಿಚಯವಾಗಲಿದೆ. ಈ ಹೊಸ ಸ್ನೇಹಗಳು ಭವಿಷ್ಯದಲ್ಲಿ ನಿಮಗೆ ಅತ್ಯಂತ ಉಪಯುಕ್ತವಾಗಿರಲಿದ್ದು, ಆರ್ಥಿಕವಾಗಿ ಬಲಗೊಳ್ಳಲು ಮತ್ತು ಜೀವನದಲ್ಲಿ ಯಶಸ್ಸು ಸಾಧಿಸಲು ಭದ್ರವಾದ ಬುನಾದಿಯನ್ನು ಹಾಕಿಕೊಡಲಿವೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.